ಸತ್ಯವಾಯ್ತು ದೈವದ ಅಭಯದ ನುಡಿ ; ಕಾಣಿಕೆ ಡಬ್ಬಿ ಕದ್ದಿದ್ದ ಕಳ್ಳ ಮೂರು ತಿಂಗಳ ನಂತರ ಪ್ರತ್ಯಕ್ಷ 

31-12-22 01:03 pm       Udupi Correspondent   ಕರಾವಳಿ

ಇಲ್ಲಿನ ತೆಂಕನಿಡಿಯೂರು ಬೆಳ್ಕಳೆ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೇವಸ್ಥಾನ, ಮೂಕಾಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಕಾಣಿಕೆ ಡಬ್ಬಿ ಕಳವುಗೈದಿದ್ದ ಕಳ್ಳ ಮೂರು ತಿಂಗಳ ನಂತರ ಸಿಕ್ಕಿಬಿದ್ದಿದ್ದಾನೆ. 

ಉಡುಪಿ, ಡಿ.31 : ಇಲ್ಲಿನ ತೆಂಕನಿಡಿಯೂರು ಬೆಳ್ಕಳೆ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೇವಸ್ಥಾನ, ಮೂಕಾಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಕಾಣಿಕೆ ಡಬ್ಬಿ ಕಳವುಗೈದಿದ್ದ ಕಳ್ಳ ಮೂರು ತಿಂಗಳ ನಂತರ ಸಿಕ್ಕಿಬಿದ್ದಿದ್ದಾನೆ. 

ಕಳ್ಳತನದ ಬಗ್ಗೆ ಆಡಳಿತ ಮಂಡಳಿ ಕಳವಾಗಿದ್ದ ಸೆ.6ರ ದಿನವೇ ಮಲ್ಪೆ ಪೊಲೀಸ್‌ ಠಾಣೆಗೆ ದೂರನ್ನು ನೀಡಿತ್ತು. ಆಡಳಿತ ಮಂಡಳಿ, ಹತ್ತು ಸಮಸ್ತರು ಮಾರನೇ ದಿನ ಮತ್ತು ನವರಾತ್ರಿ ಉತ್ಸವದ ಸಂದರ್ಭ ಬಬ್ಬು ಸ್ವಾಮಿಯ ದರ್ಶನ ಸೇವೆಯನ್ನು ಮಾಡಿಸಿ ಕಳವಿನ ಬಗ್ಗೆ ದೂರು ನೀಡಿದ್ದರು. ದೈವವು ನೇಮೋತ್ಸವದ ಒಳಗಡೆ ಕಾಣಿಕೆ ಡಬ್ಬಿ ಕದ್ದ ವ್ಯಕ್ತಿಯನ್ನು ದೈವಸ್ಥಾನದ ಎದುರಲ್ಲಿ ನಿಲ್ಲಿಸುವುದಾಗಿ ಅಭಯ ನೀಡಿತ್ತು.

ಡಿ. 28ರಂದು ಮಲ್ಪೆ ಠಾಣಾಧಿಕಾರಿ ಗುರುನಾಥ್‌ ಬಿ. ಹಾದಿಮನಿ, ಪಿಎಸ್‌ಐ ಸುಷ್ಮಾ ಹಾಗೂ ರವಿ ಜಾಧವ್‌ ಆರೋಪಿ ಹರ್ಷಿತ್‌ ಎಂಬವನನ್ನು ಬೈಂದೂರಿನಲ್ಲಿ ಬಂಧಿಸಿ ದೈವಸ್ಥಾನಕ್ಕೆ ಕರೆತಂದಿದ್ದಾರೆ. ಇದೇ ವ್ಯಕ್ತಿ ಜಿಲ್ಲೆಯಲ್ಲಿ ಹಲವಾರು ಕಡೆ ದೇವಸ್ಥಾನಗಳಲ್ಲಿ ಕಳ್ಳತನ ಎಸಗಿದ್ದಾನೆಂದು ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿರಿಯಡ್ಕ ಜೈಲಿನಲ್ಲಿರಿಸಲಾಗಿದೆ. ದೈವದ ಅಭಯದ ನುಡಿ ಸತ್ಯವಾಗಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Udupi Thief who stole offering boxes from Babbuswami temple caught after three months.