ಬ್ರೇಕಿಂಗ್ ನ್ಯೂಸ್
03-01-23 02:24 pm Mangalore Correspondent ಕರಾವಳಿ
ಮಂಗಳೂರು, ಜ.3: ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಪ್ರಸ್ತಾವಿತ ಸುರಂಗ ಮಾರ್ಗ ಕಾರ್ಯಸಾಧುವಲ್ಲ ಎಂದು ಒಂದು ತಿಂಗಳ ಹಿಂದಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಸಂಸದ ನಳಿನ್ ಕುಮಾರ್ ಕೇಳಿದ್ದ ಚುಕ್ಕಿ ಪ್ರಶ್ನೆಗೆ, ಸಚಿವರು ಚುಟುಕಾದ ಉತ್ತರವನ್ನು ನೀಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈಗ ಅದೇ ಸಾರಿಗೆ ಸಚಿವ ನಿತಿನ್ ಗಡ್ಕರಿ, ಶಿರಾಡಿ ಘಾಟ್ ಹೆದ್ದಾರಿಯ ಸುರಂಗ ಮಾರ್ಗಕ್ಕೆ ಅಸ್ತು ಹೇಳಿ ಸಂಸದ ನಳಿನ್ ಕುಮಾರ್ ಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಸ್ವತಃ ನಳಿನ್ ಕುಮಾರ್ ಟ್ವೀಟ್ ಮಾಡಿ ಸಚಿವರಿಗೆ ಅಭಿನಂದನೆ ಹೇಳಿಕೊಂಡಿದ್ದಾರೆ.
ಕಳೆದ ಆರು ತಿಂಗಳಿನಿಂದಲೂ ಗುಂಡಿ ಬಿದ್ದು ವಾಹನ ಸಾಗಾಟಕ್ಕೆ ಸಾಧ್ಯವೇ ಇಲ್ಲ ಎಂಬಂತಾಗಿದ್ದ ಮಾರಣಹಳ್ಳಿ- ಅಡ್ಡಹೊಳೆ ಹೆದ್ದಾರಿಯನ್ನು ಇದೇ ವೇಳೆ 1976 ಕೋಟಿ ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಬಿಡ್ ಕರೆಯಲಾಗಿದೆ ಎನ್ನುವುದನ್ನೂ ಪತ್ರದಲ್ಲಿ ನಿತಿನ್ ಗಡ್ಕರಿ ಉಲ್ಲೇಖಿಸಿದ್ದಾರೆ. ಇದಲ್ಲದೆ, ಮಂಗಳೂರು – ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಪ್ರಸ್ತಾವಿತ ಸುರಂಗ ಮಾರ್ಗದ ಯೋಜನೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ. 15 ಸಾವಿರ ಕೋಟಿ ಮೊತ್ತದ 23 ಕಿಮೀ ಉದ್ದದ ಸುರಂಗ ಮಾರ್ಗದ ಯೋಜನೆಯ ಡಿಪಿಆರ್ ಅನ್ನು ಎಪ್ರಿಲ್ ತಿಂಗಳ ವೇಳೆಗೆ ಅಂತಿಮಗೊಳಿಸುತ್ತೇವೆ. ಮೇ ತಿಂಗಳಲ್ಲಿ ಬಿಡ್ ಕರೆಯಲಾಗುವುದು ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ.
ಇದರ ಮಧ್ಯೆ ತೀರಾ ಹದಗೆಟ್ಟಿರುವ ಸಕಲೇಶಪುರ- ಮಾರಣಹಳ್ಳಿ ನಡುವಿನ ಹೆದ್ದಾರಿಯನ್ನು ತುರ್ತಾಗಿ ರಿಪೇರಿ ಮಾಡಲು 12.20 ಕೋಟಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಪ್ಯಾಚ್ ವರ್ಕ್ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ರಸ್ತೆ ರಿಪೇರಿಯ ಗುತ್ತಿಗೆಯನ್ನು ನೀಡಲಾಗುವುದು. ಕೆಲಸಗಳಿಗೆ ರಾಜ್ಯ ಸರಕಾರದಿಂದ ಪೂರ್ಣ ರೀತಿಯ ಸಹಕಾರವನ್ನು ಕೋರುತ್ತೇನೆ ಎಂದು ನಿತಿನ್ ಗಡ್ಕರಿ ಪತ್ರದಲ್ಲಿ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ಗುಂಡ್ಯದಿಂದ ಶಿರಾಡಿ ವರೆಗೆ ಹೆದ್ದಾರಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅದಕ್ಕಿಂತ ಮೇಲಿನ ಮಾರನಹಳ್ಳಿಯಿಂದ ಸಕಲೇಶಪುರಕ್ಕೆ ಕಾಂಕ್ರೀಟ್ ಮಾಡಿರಲಿಲ್ಲ. ಹತ್ತು ವರ್ಷಗಳ ಹಿಂದೆಯೇ ಸುರಂಗ ಮಾರ್ಗದ ಪ್ರಸ್ತಾಪ ಇದ್ದರೂ, ಆ ಬಗ್ಗೆ ಜಪಾನ್ ಮೂಲದ ಕಂಪನಿಯೂ ಸ್ಥಳದಲ್ಲಿ ಸರ್ವೆ ಮಾಡಿ ಹೋಗಿತ್ತು.
ಕಾರ್ಯ ಸಾಧುವಲ್ಲ ಎಂದಿದ್ದು ಸಾಧ್ಯವಾಗಿದ್ದೇಗೆ ?
ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುರಂಗ ಮಾರ್ಗ ಯೋಜನೆಯನ್ನು ಕಾರ್ಯಸಾಧುವಲ್ಲ ಎಂದು ಹೇಳಿಕೆ ನೀಡಿದ್ದ ಸಚಿವ ಗಡ್ಕರಿ ದಿಢೀರ್ ಆಗಿ, ಸುರಂಗ ಮಾರ್ಗಕ್ಕೆ ಒಪ್ಪಿಗೆ ನೀಡಿರುವುದು ಅಚ್ಚರಿ ಮೂಡಿಸಿದೆ. ಯೋಜನಾ ವೆಚ್ಚ 15 ಸಾವಿರ ಕೋಟಿ ಎನ್ನುವ ಕಾರಣಕ್ಕೆ ಅಧಿಕಾರಸ್ಥರ ಲಾಬಿಯೇ ಇದನ್ನು ಸಚಿವರಿಂದ ಮಾಡಿಸಿದೆಯೋ ಅನ್ನುವ ಅನುಮಾನ ಮೂಡಿದೆ. ಈಗಾಗಲೇ ಶಿರಾಡಿ ಮತ್ತು ಸಕಲೇಶಪುರ ಭಾಗದಲ್ಲಿ ಎತ್ತಿನಹೊಳೆ ನೀರಾವರಿ ಯೋಜನಾ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಏಳೆಂಟು ಅಣೆಕಟ್ಟುಗಳನ್ನೂ ಕಟ್ಟಲಾಗಿದೆ. ಅದೇ ಭಾಗದಲ್ಲಿ ಸುರಂಗ ಮಾರ್ಗ ನಿರ್ಮಿಸುವುದು ಕಾರ್ಯ ಸಾಧುವಲ್ಲ ಎಂದು ತಜ್ಞರು ವರದಿ ಕೊಟ್ಟಿದ್ದರೂ, ಆಡಳಿತ ವಹಿಸಿಕೊಂಡವರು ಮಾತ್ರ ಸಾವಿರಾರು ಕೋಟಿ ಮೊತ್ತದ ಯೋಜನೆಯೆಂದು ಅದಕ್ಕೆ ಒಪ್ಪಿಗೆ ಕೊಟ್ಟಿರುವುದು ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.
ಈಗಾಗಲೇ ಎತ್ತಿನಹೊಳೆ ಯೋಜನಾ ವೆಚ್ಚವನ್ನು 23 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಹರಿಸುವ ಉದ್ದೇಶವನ್ನು ಸರಕಾರ ಹೇಳಿಕೊಂಡಿದ್ದರೂ, ಅದರಿಂದ ನೀರು ಸಾಗಿಸಲು ಸಾಧ್ಯವಿಲ್ಲ ಎಂದು ಐಐಎಸ್ಸಿ ತಜ್ಞರೇ ವರದಿ ನೀಡಿದ್ದರು. ಹಾಗಿದ್ದರೂ, ಯೋಜನೆಯಿಂದ ಕೋಲಾರ ಭಾಗದ ಜನರಿಗೆ ಲಾಭ ಇದೆಯೋ ಇಲ್ಲವೋ ಅನ್ನುವುದನ್ನು ನಗಣ್ಯ ಮಾಡಿ, ಸರಕಾರದ ಬೊಕ್ಕಸದಿಂದ ಸಾವಿರಾರು ಕೋಟಿ ಸುರಿಯುವುದನ್ನೇ ಆಡಳಿತಗಾರರು ಮುಖ್ಯವಾಗಿಸಿಕೊಂಡಿದ್ದಾರೆ.
Close on the heels of Union Road Transport Minister Nitin Gadkari announcing on December 8 that the 26 km stretch of Bengaluru-Mangaluru National Highway 75 of Shiradi Ghat will be made four-lane, the National Highways Authority of India (NHAI) has invited bids for executing the project on engineering, procurement and construction (EPC) mode.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm