ಬ್ರೇಕಿಂಗ್ ನ್ಯೂಸ್
04-01-23 12:51 pm Mangalore Correspondent ಕರಾವಳಿ
ಮಂಗಳೂರು, ಜ.4: ರಸ್ತೆ ಗುಂಡಿ ಅಭಿವೃದ್ಧಿ ವಿಚಾರ ಬೇಡ, ಲವ್ ಜಿಹಾದ್ ಬಗ್ಗೆ ನಿಗಾ ಇಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್ ಲೇವಡಿ ಮಾಡಿದ್ದಾರೆ. ರಸ್ತೆ ಗುಂಡಿ ಚರಂಡಿ ಮಾಡುವ ಯೋಗ್ಯತೆ, ಅರ್ಹತೆ ಇಲ್ಲದವರು ಭಾವನೆ ಕೆದಕುವ ಕೆಲಸ ಮಾಡುತ್ತಾರೆ. ಇವರು ಕನಿಷ್ಠ ಕುಚಲಕ್ಕಿ ಕೊಡಲು ಯೋಗ್ಯತೆ ಇಲ್ಲದವರು, ಪ್ರತಿ ಬಾರಿ ಬೆಂಗಳೂರಿಗೆ ತೆರಳಿ ಮನವಿ ಕೊಡುವುದು, ಪೇಪರಲ್ಲಿ ಹಾಕಿಸುವುದಷ್ಟೆ ಇವರ ಸಾಧನೆ. ಈಗ ಜನರ ಗಮನ ಬೇರೆಡೆ ಸೆಳೆಯಲು ದಿಕ್ಕು ತಪ್ಪಿಸುವ ಹೇಳಿಕೆ ಕೊಡುತ್ತಿದ್ದಾರೆ ಎಂದು ಖಾದರ್ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ತಮ್ಮದು ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಒಂದಾದ್ರೂ ಹೇಳಿಕೊಳ್ಳುವ ಸಾಧನೆ ಮಾಡಿದ್ದಾರೆಯೇ.. ಇವರ ಡಬಲ್ ಇಂಜಿನ್ ಸರಕಾರಕ್ಕೆ ಇಂಧನವೇ ಕಮ್ಯುನಲ್ ಹಿಂಸೆ, ಅದರಿಂದ ಬರುವ ಹೊಗೆಯೇ ವಿಷವಾಗಿರುತ್ತದೆ. ಬಡವರ ರಕ್ತ ಮತ್ತು ಕಣ್ಣೀರಿನಲ್ಲಿ ಇವರು ಸರಕಾರ ರಚಿಸಿದ್ದಾರೆ. ಜನರೇ ಡಬಲ್ ಇಂಜಿನನ್ನು ಗುಜರಿಗೆ ಹಾಕುವ ಕೆಲಸ ಮಾಡಲಿದ್ದಾರೆ ಎಂದರು.
ಇವರ ಸರಕಾರದ ಆರ್ಥಿಕ ಸ್ಥಿತಿ ಎಲ್ಲಿಗೆ ಮುಟ್ಟಿದೆಯೆಂದರೆ ಅಬ್ಬಕ್ಕ ಉತ್ಸವಕ್ಕೆ ಅನುದಾನ ಕೊಡುವ ಗತಿಯಿಲ್ಲ. 2008ರಲ್ಲಿ 22 ಲಕ್ಷ ರೂ. ಅಬ್ಬಕ್ಕ ಉತ್ಸವಕ್ಕೆ ನೀಡಲಾಗಿತ್ತು. ಕಳೆದ ಬಾರಿ ಸಿದ್ದರಾಮಯ್ಯ ಸರಕಾರ ಇದ್ದಾಗ 50 ಲಕ್ಷ ಬಿಡುಗಡೆ ಆಗಿತ್ತು. ಈ ಬಾರಿ ಕೇವಲ ಹತ್ತು ಲಕ್ಷ ಕೊಟ್ಟಿದಾರೆ, ಸರಕಾರಕ್ಕೆ ದಾರಿರ್ದ್ಯ ಬಂದಿರುವುದನ್ನು ಇದು ಸೂಚಿಸುತ್ತದೆ. ಇವರು ಅಬ್ಬಕ್ಕನಂತಹ ಹೋರಾಟಗಾರರಿಗೆ ಮಾಡಿದ ಅವಮಾನವಿದು.
108 ಆಂಬುಲೆನ್ಸ್ ಸ್ಥಿತಿ ಹಾಳಾಗಿ ಹೋಗಿದೆ, ಅದಕ್ಕೀಗ ಡ್ರೈವರೇ ಇಲ್ಲ. ಫೋನ್ ಮಾಡಿದರೆ 20 ನಿಮಿಷಕ್ಕೆ ಮುಟ್ಟಬೇಕು. ಈಗ ಜನರೂ ಮರೆತು ಹೋಗಿದ್ದಾರೆ, ಗಂಟೆ ಕಳೆದರೂ ಬರೋದಿಲ್ಲ ಅಂತ ಫೋನ್ ಮಾಡುವುದನ್ನೆ ಬಿಟ್ಟಿದ್ದಾರೆ. ಮೂರು ಕೋವಿಡ್ ಅಲೆ ಬಂದಿದ್ದು ಸರಕಾರದಿಂದ ಪರಿಸ್ಥಿತಿ ಎದುರಿಸಲು ಯಾವ ಮೂಲಸೌಕರ್ಯ ಮಾಡಿದ್ದಾರೆ. ಕೋಟಿ ಖರ್ಚು ಹಾಕಿರುವ ಆಕ್ಸಿಜನ್ ಪ್ಲಾಂಟ್ ತುಕ್ಕು ಹಿಡಿಯುವ ಸ್ಥಿತಿಯಾಗಿದೆ. ಹಾಕಿದ ಬಳಿಕ ಒಮ್ಮೆಯೂ ಅದನ್ನು ಆಪರೇಟ್ ಮಾಡಿಲ್ಲ. ಒಂದು ಟೆಕ್ನಿಶಿಯನ್ ಹಾಕಿಲ್ಲ. ನೀವು ಯಾಕಿದನ್ನು ಹಾಕಿದ್ದು. ಐಟಿಐ ಆದವರಿಗೆ ಕೆಲಸ ಕೊಡಬಹುದಿತ್ತಲ್ಲ. ಇವರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂತಾದರೆ ಒಂದೊಂದು ಕೋಟಿಯ ಪ್ಲಾಂಟ್ ಹಾಕಲು ಖರ್ಚು ಮಾಡಿದ್ಯಾಕೆ ಎಂದು ಖಾದರ್ ಪ್ರಶ್ನಿಸಿದರು.
ಇದರ ನಡುವೆ ವೆಟರಿನರಿಗೆ ಮೊಬೈಲ್ ಆಂಬುಲೆನ್ಸ್ ತಂದಿದ್ದಾರೆ. ಅದಕ್ಕೊಂದು ವೈದ್ಯರು ಇಲ್ಲ, ಸಿಬಂದಿಯೂ ಇಲ್ಲ.. ಅಲ್ಲಿ ತುಕ್ಕು ಹಿಡಿದು ನಿಂತು ಬಿಟ್ಟಿದೆ. ಇವರ ಇಂಥ ಭ್ರಷ್ಟಾಚಾರ ಒಂದೆರಡಲ್ಲ. ಗೋವುಗಳ ಹೆಸರಿನಲ್ಲೂ ಲೂಟಿ ಹೊಡೆಯುವುದೇ ಆಗಿದೆ. ನಮ್ಮ ಕ್ಷೇತ್ರದಲ್ಲಿ ಹೊಸ ಪಶು ಆಸ್ಪತ್ರೆ ಬಿಲ್ಡಿಂಗ್ ಆಗಿದೆ, ಅದಕ್ಕೆ ಡಾಕ್ಟರ್ ಇಲ್ಲ. ಈ ಬಾರಿ ಕಾಲು ಬಾಯಿ ರೋಗದಿಂದ 21 ಸಾವಿರ ಹಸುಗಳು ಸಾವನ್ನಪ್ಪಿದೆ, ರೈಟ್ ಟೈಮಲ್ಲಿ ಇಂಜೆಕ್ಷನ್ ಕೊಡದ ಕಾರಣ ಈಗಲೂ ಸಾವು ಆಗುತ್ತಿದೆ.
ಇಡೀ ರಾಜ್ಯದಲ್ಲಿ ಹೈನುಗಾರಿಕೆ ಕಡಿಮೆಯಾಗಿದೆ, ಸಿದ್ದರಾಮಯ್ಯ ಸರಕಾರ ಇದ್ದಾಗ ದಿನಕ್ಕೆ ಎಂಟು ಸಾವಿರ ಲಕ್ಷ ಲೀಟರ್ ಹಾಲು ಉತ್ಪಾದನೆ ಇತ್ತು. ಈಗ ಒಂದೂವರೆ ಲಕ್ಷ ಲೀಟರ್ ಹಾಲು ಕಡಿಮೆಯಾಗಿದೆ. ಇದು ಈಗಿನ ಪರಿಸ್ಥಿತಿ. ಗೋವಿನ ಹೆಸರಲ್ಲಿ ಅಧಿಕಾರಕ್ಕೆ ಬಂದವರ ಆಡಳಿತದಲ್ಲಿ ಹಾಲಿಗೂ ಗತಿಯಿಲ್ಲ. ಕೆಎಸ್ಸಾರ್ಟಿಸಿಯಲ್ಲಿ ಹೊಸ ಬಸ್ ಹಾಕೋದು ಬಿಡಿ, ಡ್ರೈವರ್ ನೇಮಕ ಮಾಡುವ ಗತಿಯಿಲ್ಲ. ಚಾಲಕ ಇಲ್ಲದೆ ಕೆಲವು ರೂಟ್ ಬಸ್ ನಿಂತು ಹೋಗಿದೆ ಎಂದರು ಖಾದರ್.
ಹರೇಕಳದಲ್ಲಿ ನಾಳೆ (ಜ.5) ಸಿದ್ದರಾಮಯ್ಯ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಬಿಕೆ ಹರಿಪ್ರಸಾದ್ ಸೇರಿ ರಾಜ್ಯದ ಅನೇಕ ನಾಯಕರು ಭಾಗವಹಿಸುತ್ತಾರೆ. ಅದಕ್ಕೂ ಮುನ್ನ, ಹರೇಕಳ ಹೆಲ್ತ್ ಸೆಂಟರ್ ವೀಕ್ಷಣೆ ಮಾಡಲಿದ್ದಾರೆ. ಅಡ್ಯಾರ್ ಡ್ಯಾಮನ್ನೂ ಸಿದ್ದರಾಮಯ್ಯ ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಿದರು ಖಾದರ್.
ರಮಾನಾಥ ರೈ ಮತ್ತು ನೀವು ಒಬ್ಬರನ್ನೊಬ್ಬರು ಸೋಲಿಸಲು ನೋಡುತ್ತಿದ್ದೀರಂತೆ ಎಂಬ ನಳಿನ್ ಕುಮಾರ್ ಮಾತಿನ ಬಗ್ಗೆ ಕೇಳಿದ್ದಕ್ಕೆ, ಅವರಿಗೆ ನಾನೇ ಚಾಲೆಂಜ್ ಮಾಡಿದ್ದೇನೆ. ರಮಾನಾಥ ರೈಗಳೇ ಮತ್ತೆ ಉಸ್ತುವಾರಿ ಮಂತ್ರಿಯಾಗುತ್ತಾರೆ. ಅದನ್ನು ತಪ್ಪಿಸಲು ಆಗೋದಿಲ್ಲ ಎಂದರು.
Mangalore UT Khader slams Nalin Kateel, says BJP is running with communal fuel. Does Naleen even focus on road and sewage issues. In order to win elections BJP is trying to change people's attention to Love Jihad.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm