ಪ್ರಣವಾನಂದ ಪಾದಯಾತ್ರೆ ಹಿಂದೆ ರಾಜಕೀಯ ದುರುದ್ದೇಶ, ಸಮಾಜ ಒಡೆಯುವ ಹುನ್ನಾರ ಇದೆ ; ಸ್ವಾಮಿ ಭದ್ರಾನಂದ ಆರೋಪ 

04-01-23 06:51 pm       Mangalore Correspondent   ಕರಾವಳಿ

ಬಿಲ್ಲವ- ಈಡಿಗರಿಗೆ ಸ್ಥಾನಮಾನ ಸಿಗಬೇಕೆಂದು ಹೋರಾಟ ಹಮ್ಮಿಕೊಂಡಿರುವ ಪ್ರಣವಾನಂದ ಸ್ವಾಮೀಜಿ ವಿರುದ್ಧ ಶ್ರೀ ನಾರಾಯಣ ಗುರುಗಳ ವಂಶಸ್ಥರೆಂದು ಹೇಳಿಕೊಂಡ ಕಾಸರಗೋಡಿನ ಶಿವಗಿರಿ ಮಠದ ಸ್ವಾಮಿ ಭದ್ರಾನಂದ ವಾಗ್ದಾಳಿ ನಡೆಸಿದ್ದಾರೆ. 

ಮಂಗಳೂರು, ಜ.4: ಬಿಲ್ಲವ- ಈಡಿಗರಿಗೆ ಸ್ಥಾನಮಾನ ಸಿಗಬೇಕೆಂದು ಹೋರಾಟ ಹಮ್ಮಿಕೊಂಡಿರುವ ಪ್ರಣವಾನಂದ ಸ್ವಾಮೀಜಿ ವಿರುದ್ಧ ಶ್ರೀ ನಾರಾಯಣ ಗುರುಗಳ ವಂಶಸ್ಥರೆಂದು ಹೇಳಿಕೊಂಡ ಕಾಸರಗೋಡಿನ ಶಿವಗಿರಿ ಮಠದ ಸ್ವಾಮಿ ಭದ್ರಾನಂದ ವಾಗ್ದಾಳಿ ನಡೆಸಿದ್ದಾರೆ. 

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಸನ್ಯಾಸಿ ಕಾವಿ ಹಾಕಿ ಮದುವೆ ಆಗಬೇಕು, ಐದು ಮಕ್ಕಳನ್ನು ಮಾಡಬೇಕು ಅಂತಾರೆ ಈ ಪ್ರಣವಾನಂದ. ಇವರದ್ದು ಯಾವ ರೀತಿಯ ಸಿದ್ಧಾಂತ. ಇಂಥ ವ್ಯಕ್ತಿ ಜಾತಿ ವ್ಯವಸ್ಥೆಯನ್ನು ಮುಂದಿಟ್ಟು ಪೊಲಿಟಿಕ್ ಬಿಸಿನೆಸ್ ಮಾಡಲು ಹೊರಟಿದ್ದಾರೆ. ಇದು ನಾರಾಯಣ ಗುರುಗಳ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಕಿಡಿಕಾರಿದ್ದಾರೆ. 

ರಾಜಕೀಯ ದುರುದ್ದೇಶದೊಂದಿಗೆ ಈತ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಒಂದು ಜಾತಿಗೆ ಮೀಸಲಿಗಾಗಿ ಹೋರಾಟ ಎತ್ತಿಕೊಂಡಿರುವ ಇವರದ್ದು ಸಮಾಜವನ್ನು ಒಡೆಯುವ ಹುನ್ನಾರ. ಈತನಿಗೆ ಯಾರು ಕೂಡ ಸಪೋರ್ಟ್ ಮಾಡಬಾರದು. ನಾರಾಯಣ ಗುರುಗಳ ಶಿವಗಿರಿ ಮಠದಿಂದ ಯಾರು ಕೂಡ ಈತನ ಪಾದಯಾತ್ರೆಗೆ ಬರುವುದಿಲ್ಲ. ಈತನಿಗೆ ಯಾರು ಸಪೋರ್ಟ್ ಮಾಡುತ್ತಾರೋ ಅವರೆಲ್ಲ ಶ್ರೀ ನಾರಾಯಣ ಗುರುಗಳ ವಿರುದ್ಧ ಹೋದಂತೆ. ಈತನಿಗೆ ಸಹಕಾರ ನೀಡುವ ಮಂದಿ ಶ್ರೀಗಳ ತತ್ವ ಸಿದ್ಧಾಂತ ಒಪ್ಪಲ್ಲ ಎಂದರ್ಥ. 

ಪ್ರಣವಾನಂದ ಸ್ವಾಮೀಜಿ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಸಪೋರ್ಟ್ ಮಾಡುತ್ತಿವೆ. ಈತನ ವಿರುದ್ಧ ಹಲವಾರು ಪ್ರಕರಣಗಳಿವೆ. ಅದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ ಭದ್ರಾನಂದ ಸ್ವಾಮಿ, ನನಗೆ ಗುರು ಪರಂಪರೆ ಇದೆ, ಈತನಗೆ ಏನಿದೆ ಎಂದು ಪ್ರಶ್ನಿಸಿದರು. ನಾನು ಕೇರಳದಲ್ಲಿ ಪಿ ಎಫ್ ಐ ವಿರುದ್ಧ ಹೋರಾಡಿದ್ದೇನೆ. ಡ್ರಗ್ ಮಾಫಿಯಾ ವಿರುದ್ಧ ಹೋರಾಡುತ್ತಿದ್ದೇನೆ. ದೇಶ ವಿರೋಧಿಗಳ ವಿರುದ್ಧ ಹೋರಾಡುತಿದ್ದೇನೆ. ನಾನು ಕಾಡಿನಲ್ಲಿ ಕೂತಿರುವ ಸನ್ಯಾಸಿ ಅಲ್ಲ. ಜನರ ಜೊತೆಗಿದ್ದು ಹೋರಾಟ ನಡೆಸುತ್ತಿದ್ದೇನೆ ಎಂದು ಭದ್ರಾನಂದ ಹೇಳಿದ್ದಾರೆ.

Political agenda behind Pranavananda Swamiji hunger protest slams Swami Badrananda in Mangalore