ಹರೇಕಳದ ಡ್ಯಾಂ ಮಂಜೂರಾಗಿದ್ದು ಸಿದ್ದರಾಮಯ್ಯ ಕಾಲದಲ್ಲಿ ; ಮೋರಿ ನಿರ್ಮಿಸೋಕು ಆಗದ ಬಿಜೆಪಿಗೆ ಸೇತುವೆ ಅನ್ನೋದು ಕನಸು-  ಖಾದರ್ ಟಾಂಗ್ 

04-01-23 08:20 pm       Mangalore Correspondent   ಕರಾವಳಿ

ಹರೇಕಳದ ಡ್ಯಾಂ ಕಮ್ ಸೇತುವೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರಾಗಿದ್ದು, ರಸ್ತೆ ಬದಿಯಲ್ಲಿ ಸಮರ್ಪಕ ಮೋರಿ ರಚಿಸೋಕು ಆಗದ ಬಿಜೆಪಿ ಆಡಳಿತವು ಸೇತುವೆ ಮಾಡುವುದು ಕನಸು ಎಂದು ಶಾಸಕ ಯು.ಟಿ ಖಾದರ್ ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ. 

ಉಳ್ಳಾಲ, ಜ.4 : ಹರೇಕಳದ ಡ್ಯಾಂ ಕಮ್ ಸೇತುವೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರಾಗಿದ್ದು, ರಸ್ತೆ ಬದಿಯಲ್ಲಿ ಸಮರ್ಪಕ ಮೋರಿ ರಚಿಸೋಕು ಆಗದ ಬಿಜೆಪಿ ಆಡಳಿತವು ಸೇತುವೆ ಮಾಡುವುದು ಕನಸು ಎಂದು ಶಾಸಕ ಯು.ಟಿ ಖಾದರ್ ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ. 

ಹರೇಕಳದ ನೂತನ ಸೇತುವೆ ಬಿಜೆಪಿ ಸರಕಾರದ್ದೆಂದು ಫ್ಲೆಕ್ಸ್ ಹಾಕಿ ಪ್ರಚಾರ ಪಡೆಯುತ್ತಿದ್ದಾರೆ. ಯಾವ ಸರಕಾರ ಹರೇಕಳದ ಸೇತುವೆ ಕಟ್ಟಿದೆ ಎಂಬುದು ಮಾಧ್ಯಮಗಳ ಸುದ್ದಿ ದಾಖಲಾತಿ ಇದೆ. ಸೇತುವೆ ನಿರ್ಮಾಣದ ನಂತರ ತಾಂತ್ರಿಕ ಅಡೆತಡೆಯಿಂದ ಆದ ಕೆಲವೊಂದು ಅನಾಹುತಕ್ಕೆ ಹದಿನೈದು ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ಬಿಜೆಪಿ ಸರಕಾರ ಹೌದು. ಇನ್ನುಳಿದಂತೆ ಸೇತುವೆ ಮಂಜೂರು ಮಾಡಿದ್ದೇ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ದಿನಗಳಲ್ಲಿ ಎಂಬುದನ್ನ ದಾಖಲೆಗಳಿಂದ ಅರಿತುಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ಶಾಸಕ ಖಾದರ್ ಟಾಂಗ್ ನೀಡಿದ್ದಾರೆ. 

Siddaramaiah regrets forming coalition government with JD(S)

ಹರೇಕಳದಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹರೇಕಳ ಗ್ರಾಮಕ್ಕೆ ನಾಳೆ ಭೇಟಿ ನೀಡಲಿದ್ದು, ಗ್ರಾಮ ಪಂಚಾಯತ್ ಕಚೇರಿ ಕಟ್ಟಡ "ಹರೇಕಳ ಗ್ರಾಮ ಸೌಧ", ಗುತ್ತಿಗೆದಾರ ಡಾ.ಜಿ. ಶಂಕರ್ ಗ್ರಾಮಕ್ಕೆ ಕೊಡುಗೆಯ ರೂಪದಲ್ಲಿ ನಿರ್ಮಿಸಿದ ಆಸ್ಪತ್ರೆ, ಹರೇಕಳ - ಅಡ್ಯಾರ್ ಸಂಪರ್ಕ ಸೇತುವೆ ಹಾಗೂ ಡ್ಯಾಂ ವೀಕ್ಷಣೆ ಮಾಡಲಿದ್ದು ಬಳಿಕ ಹರೇಕಳ ಕಡವಿನ ಬಳಿ ನಡೆಯುವ ಸಾರ್ವಜನಿಕ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಆಡಳಿತದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ಕೇಂದ್ರದಲ್ಲಿರುವ ನಮ್ಮ ರಾಜ್ಯದ ಮಂತ್ರಿಗಳು, ಸಂಸದರು ಚಕಾರ ಎತ್ತಿಲ್ಲ. ಬೀಡಿ ಕಾರ್ಮಿಕರು, ರೈತರು, ಮೀನುಗಾರರು ಸೇರಿದಂತೆ ಜನಸಾಮ್ಯಾನರ ಬದುಕು ಹೈರಾಣಾಗುತ್ತಿರುವ ಕುರಿತು ಎಲ್ಲೂ ಮಾತನಾಡುತ್ತಿಲ್ಲ. ಸರಕಾರಿ ನೌಕರರಿಗೆ ವೇತನ‌ ನೀಡದೆ ಸಂಕಷ್ಟ ತಂದಿದ್ದಲ್ಲದೆ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಸಾಮಾನ್ಯ ಜನರ ಬದುಕು ಹೈರಾಣಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

Mangalore No development works from BJP for Harekala dam, only diverting peoples minds slams U T Khader.