ಅವನೊಬ್ಬ ಬಿಜೆಪಿಯಲ್ಲಿ ಜೋಕರ್ ಇದ್ದ ಹಾಗೆ, ಜೈಲಿಗೆ ಹಾಕೋದು ಕೋರ್ಟ್, ಇವರಲ್ಲ ; ಟಗರು, ಹುಲಿ, ನಾಯಿ ಅಸಾಂವಿಧಾನಿಕ ಪದಗಳಾ..? 

05-01-23 03:13 pm       Mangalore Correspondent   ಕರಾವಳಿ

ವಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ, ಮಾಧ್ಯಮದವರು ನಳಿನ್ ಕುಮಾರ್ ನಿಮ್ಮನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವನೊಬ್ಬ ಜೋಕರ್ ಇದ್ದ ಹಾಗೆ, ಅದಕ್ಕೆಲ್ಲ ಉತ್ತರ ಕೊಡಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

ಮಂಗಳೂರು, ಜ.5: ವಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ, ಮಾಧ್ಯಮದವರು ನಳಿನ್ ಕುಮಾರ್ ನಿಮ್ಮನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವನೊಬ್ಬ ಜೋಕರ್ ಇದ್ದ ಹಾಗೆ, ಅದಕ್ಕೆಲ್ಲ ಉತ್ತರ ಕೊಡಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

ಅವನು ಬಿಜೆಪಿಯಲ್ಲಿ ಒಂಥರಾ ಜೋಕರ್ ಇದ್ದ ಹಾಗೆ. ಬಹಳ ಬಾಲಿಶವಾಗಿ ಮತ್ತು ಬೇಜವಾಬ್ದಾರಿಯಿಂದ ಮಾತನಾಡ್ತಾರೆ. ಬಿಜೆಪಿಯಲ್ಲಿ ಅವರೊಬ್ಬ ವಿದೂಷಕ ಇದ್ದಂತೆ. ಜೈಲಿಗೆ ಕಳಿಸೋದು ಕೋರ್ಟ್ ಗಳು, ಬಿಜೆಪಿಯವರಲ್ಲ. ಕೋರ್ಟ್ ವಿಚಾರಣೆ ಮಾಡಿ ತಪ್ಪಿತಸ್ಥ ಆದರೆ ಜೈಲಿಗೆ ಹಾಕುತ್ತದೆ. ನಳಿನ್ ಗೆ ಕಾನೂನು ಗೊತ್ತಿಲ್ಲ. ಪೆದ್ದು ಪೆದ್ದಾಗಿ ಮಾತನಾಡ್ತಾರೆ, ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದ್ದಾರೆ. 

Patriotism is the only way to keep India united, says Karnataka CM Bommai  in Pune | Cities News,The Indian Express

Ready to resign if BJP high command asks me to, but will work as Karnataka  CM till then: B S Yediyurappa | India News,The Indian Express

ಸಿಎಂ ಬೊಮ್ಮಾಯಿ ಬಗ್ಗೆ ನಾಯಿಮರಿ ಹೇಳಿಕೆ ನೀಡಿದ್ದನ್ನು ಕೇಳಿದ್ದಕ್ಕೆ, ನಾನು ಅವರಿಗೆ ನಾಯಿ ಮರಿ ಅಂಥ ಹೇಳಿಲ್ಲ, ಮೋದಿ ವಿರುದ್ಧ ನಿಲ್ಲುವ ಧೈರ್ಯ ಇರಬೇಕು ಅಂದಿದ್ದೆ. ನಮಗೆ ರಾಜ್ಯದ ಹಿತ ಮುಖ್ಯ, ಕೇಂದ್ರದ ಜೊತೆ ಧೈರ್ಯವಾಗಿ ಮಾತನಾಡಿ ಅನುದಾನ ತರಬೇಕು ಎಂದಿದ್ದೆ. ಧೈರ್ಯವಾಗಿ ಇರಬೇಕು, ನಾಯಿ ಮರಿ ಥರ ಇರಬಾರದು ಅಂದೆ. ಇದರಲ್ಲಿ ತಪ್ಪು ಏನು ಇದೆ, ಇದು ಅನ್ ಪಾರ್ಲಿಮೆಂಟ್ರಿ ಪದನಾ? ನನಗೆ ಟಗರು, ಹುಲಿಯಾ ಅಂತೆಲ್ಲಾ ಕರೀತಾರೆ, ಅದು ಅನ್ ಪಾರ್ಲಿಮೆಂಟರಿ ಅಲ್ಲ. ಯಡಿಯೂರಪ್ಪ ಅವರನ್ನ ರಾಜಾ ಹುಲಿ ಅಂತ ಅವರ ಪಕ್ಷದವರೇ ಹೇಳ್ತಾರೆ, ಅದು ಅನ್ ಪಾರ್ಲಿಮೆಂಟರಿಯಾ? ಯಡಿಯೂರಪ್ಪ ಹಾಗಾದ್ರೆ ಹುಲೀನಾ? ನಾಯಿ ಅನ್ನೋದು ನಂಬಿಕೆ ಇರೋ ಪ್ರಾಣಿ, ಧೈರ್ಯ ಇರಬೇಕು ಅನ್ನೋದಕ್ಕೆ ಹೇಳಿದ್ದು. ನಮ್ಮ ಪಾಲನ್ನ ಕೇಂದ್ರದ ಬಳಿ ಧೈರ್ಯವಾಗಿ ಕೇಳಿ ಅಂದಿದ್ದು ಉಳ್ಳಾಲ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವದಂತಿಯ ಬಗ್ಗೆ ಕೇಳಿದ್ದಕ್ಕೆ, ನಾನು ಅಲೆಮಾರಿ ರಾಜಕಾರಣಿ ಅಲ್ಲ, ಕೋಲಾರ, ಬಾದಾಮಿಯವರು ಕರೀತಾ ಇದಾರೆ. ವರುಣಾದಲ್ಲೂ ಕರೀತಾ ಇದಾರೆ, ಅರ್ಜಿ ಹಾಕುವಾಗ ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂದು ಬರೆದಿದ್ದೇನೆ. ನಾನು ಉಳ್ಳಾಲ ನಿಲ್ಲೋದೆಲ್ಲ ಇಲ್ಲ, ಹೈಕಮಾಂಡ್ ಏನು ಹೇಳುತ್ತೋ ಹಾಗೆ ಮಾಡ್ತೇನೆ. 

ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆಯಾಗಿದೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ಈ ರೀತಿಯ ಬೇಕಾದಷ್ಟು ಪ್ರಕರಣಗಳು ಇದೆ. ಅದಕ್ಕೆ ನಲ್ವತ್ತು ಶೇಕಡಾ ಕಮಿಷನ್ ಸರ್ಕಾರ ಅಂತ ಕಾಂಟ್ರಾಕ್ಟ್ ಅಸೋಷಿಯನ್ ಅವರೇ ಕರೆದಿರೋದು.‌ ಇವರಿಗೆ ಲಂಚ ಕೊಡಲಾಗದೆ ಸಂತೋಷ್ ಆತ್ಮಹತ್ಯೆ ಮಾಡಿದ್ದಾರೆ.‌ ಸಂತೋಷ್ ಸಾಯುವ ಮೊದಲು ಈಶ್ವರಪ್ಪ ಹಣ ಕೇಳುತ್ತಾರೆ, ಸಾವಿಗೆ ಈಶ್ವರಪ್ಪ ಕಾರಣ ಅಂತಾ ಪತ್ರ ಬರೆದಿದ್ದರು. ತುಮಕೂರಿನಲ್ಲಿ ಪ್ರಸಾದ್ ಅನ್ನೋರು ಕೂಡ ಆತ್ಮಹತ್ಯೆ ಮಾಡಿದ್ರು. ಮತ್ತೊಬ್ಬರು ಗುಂಡು ಹಾರಿಸಿಕೊಂಡು ಸತ್ತೋದ್ರು.‌ ಶಿವಕುಮಾರ್ ಎಂಬವರು ದಯಾಮರಣ ಕೇಳಿದ್ರು. ಇವರ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದೇ ಏನೂ ನಡೆಯೋದಿಲ್ಲ. ವರ್ಗಾವಣೆ, ಪೋಸ್ಟಿಂಗ್ ಎಲ್ಲದಕ್ಕೂ ಹಣ ಕೇಳುತ್ತಾರೆ ಎಂದು ಸಿದ್ಧರಾಮಯ್ಯ ಟೀಕಿಸಿದರು.

Naleen Kumar Kateel is a Joker slams Siddaramaiah in Mangalore. BJP can't send me to Jail, it's the court that can send me to the jail, Naleen has no idea about the law.