ಬ್ರೇಕಿಂಗ್ ನ್ಯೂಸ್
17-10-20 11:58 am Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 17: ಬಳ್ಳಾರಿ ಮಾದರಿಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ದಂಧೆಯಲ್ಲಿ ಬಿಜೆಪಿ ಶಾಸಕರ ಸಂಬಂಧಿಕರು ಭಾಗಿಯಾಗಿದ್ದು ತನಿಖೆಗಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ಮುಡಿಪು, ಬಾಳೆಪುಣಿ, ಇನೋಳಿ ಗ್ರಾಮ ಪಂಚಾಯತ್ ಭಾಗದಲ್ಲಿ ಕಳೆದ 2-3 ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಕಲಿ ಪರ್ಮಿಟ್ ತೋರಿಸಿ ಬಾಕ್ಸೈಟ್ ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಬಡಗ ಉಳಿಪಾಡಿಯ ಪರವಾನಗಿಯಲ್ಲಿ ಮುಡಿಪು ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆಂಬ ಮಾಹಿತಿಯಿದೆ. ಈ ಅಕ್ರಮದಲ್ಲಿ ಆಡಳಿತ ಪಕ್ಷದ ಶಾಸಕರ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಯಾರೆಲ್ಲ ಇದ್ದಾರೆ, ಯಾವೆಲ್ಲ ಅಧಿಕಾರಿಗಳ ಶಾಮೀಲಾತಿ ಇದೆ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರು.
ರೆಡ್ ಬಾಕ್ಸೈಟ್ ದಂಧೆ ಇದಾಗಿದ್ದು ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ದಂಧೆಕೋರರು ಶಾಮೀಲಾಗಿದ್ದಾರೆ. ಇದು ಹೀಗೇ ಮುಂದುವರಿದರೆ ಮುಡಿಪು ಮುಂದೆ ಬಳ್ಳಾರಿ ಆಗಬಹುದು. ಬಳ್ಳಾರಿಯಲ್ಲಿ ಕೆಂಪು ನೀರು, ಕೆಂಪು ಧೂಳಿನಿಂದ ತುಂಬಿತ್ತು. ಅಲ್ಲಿನ ಅಕ್ರಮವನ್ನು ನಿಲ್ಲಿಸಿದ್ದು ಕಾಂಗ್ರೆಸ್ ಸರಕಾರ. ಅಲ್ಲಿನ ಅಕ್ರಮದಲ್ಲಿ ಯಾರಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಎಲ್ಲಿಯದ್ದೋ ಪರ್ಮಿಟ್ ತೋರಿಸಿ ಮುಡಿಪಿನಲ್ಲಿ ದಂಧೆ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದ ಶಾಸಕರ ಸಂಬಂಧಿಕರು ಇದರಲ್ಲಿದ್ದಾರೆ ಅಂತ ಹೇಳಬಲ್ಲೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ, ಎಲ್ಲ ಹುಳುಕುಗಳು ಹೊರಬರುತ್ತದೆ. ಮೊನ್ನೆ ಇದರ ಬಗ್ಗೆ ರೈಡ್ ಮಾಡಿದ್ದ ವಿಭಾಗ ಮಟ್ಟದ ಅಧಿಕಾರಿಯನ್ನು ದಿಢೀರ್ ಆಗಿ ವರ್ಗ ಮಾಡಿದ್ದು ಸಂಶಯ ಮೂಡಿಸಿದೆ ಎಂದರು.
ಮುಡಿಪು ಆಸುಪಾಸಿನಲ್ಲಿ ಗಣಿಗಾರಿಕೆಯಿಂದಾಗಿ ಪರಿಸರಕ್ಕೆ ದೊಡ್ಡ ಹಾನಿಯಿದೆ. ಜೊತೆಗೆ ಅಲ್ಲಿ ಇರುವ ಇನ್ಫೋಸಿಸ್, ಸಂತ ಜೋಸೆಫ್ ಇಗರ್ಜಿ, ಕೃಷ್ಣಧಾಮ ಪ್ರಾರ್ಥನಾ ಮಂದಿರಕ್ಕೂ ಇದರಿಂದ ಸಮಸ್ಯೆಯಾಗಲಿದೆ. ಇದರ ತನಿಖೆಗಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಂಡ ರಚಿಸುವಂತೆ ಆಗ್ರಹಿಸುತ್ತೇನೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಿಥುನ್ ರೈ, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್ ಮತ್ತಿತರರಿದ್ದರು.
ಇದನ್ನು ಓದಿ: ಮುಡಿಪು ಗುಡ್ಡಕ್ಕೇ ಕನ್ನ ; ಮಣ್ಣಿನ ದಂಧೆ ಬಲುಜೋರು, ಪ್ರಭಾವಿಗಳ ಕಾರುಬಾರು !
Former minister B Ramanath Rai, pointed out the large scale illegal mining in mudipu and gave a call to stop this illegal activity and bring those out involved in this mafia.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm