ಖ್ಯಾತ ಲೇಖಕಿ, ವೈಚಾರಿಕ ನಿಲುವಿನ ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್ ಇನ್ನಿಲ್ಲ ! 

10-01-23 02:34 pm       Mangalore Correspondent   ಕರಾವಳಿ

ಖ್ಯಾತ ಲೇಖಕಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್(86) ಇನ್ನಿಲ್ಲ. ಅಲ್ಪಕಾಲದ ಅಸೌಖ್ಯದಿಂದ ಅವರು ಮಂಗಳೂರಿನ ಲಾಲ್ ಬಾಗ್ ಬಳಿಯ ಮನೆಯಲ್ಲಿ ನಿಧನರಾಗಿದ್ದಾರೆ. 

ಮಂಗಳೂರು, ಜ.10: ಖ್ಯಾತ ಲೇಖಕಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್(86) ಇನ್ನಿಲ್ಲ. ಅಲ್ಪಕಾಲದ ಅಸೌಖ್ಯದಿಂದ ಅವರು ಮಂಗಳೂರಿನ ಲಾಲ್ ಬಾಗ್ ಬಳಿಯ ಮನೆಯಲ್ಲಿ ನಿಧನರಾಗಿದ್ದಾರೆ. 

ಮೂಲತಃ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಯ ಬಳಿಯಲ್ಲಿ ಹುಟ್ಟಿ ಬೆಳೆದಿದ್ದ ಸಾರಾ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಅಬುಬಕ್ಕರ್ ಅವರನ್ನು ಮದುವೆಯಾಗಿ ಮಂಗಳೂರು ಸೇರಿದ್ದರು. ತಮ್ಮ ನಲ್ವತ್ತರ ವಯಸ್ಸಿನ ಬಳಿಕ ತೀವ್ರ ಓದಿನ ಗೀಳಿನಿಂದಾಗಿ ಬರಹಕ್ಕೆ ಇಳಿದಿದ್ದರು. ಶಿವರಾಮ ಕಾರಂತರು, ತ್ರಿವೇಣಿಯವರ ಬರಹಗಳಿಂದ ಪ್ರೇರಿತರಾಗಿದ್ದರು. ತಮ್ಮ ವೈಚಾರಿಕ ನಿಲುವಿನ ಬರಹಗಳಿಂದಾಗಿ ಬಹುಬೇಗನೆ ಜನಮಾನಸದಲ್ಲಿ ನೆಲೆಯಾಗಿದ್ದರು. 'ಚಂದ್ರಗಿರಿಯ ತೀರದಲ್ಲಿ' ಎಂಬ ಅವರ ಮೊದಲ ಕಾದಂಬರಿ ಸಾರಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಈ ಕಾದಂಬರಿ ಮೊದಲಿಗೆ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದು ಜನರನ್ನು ತಟ್ಟಿತ್ತು. ಅವರ ಬರಹಗಳಲ್ಲಿ ವಾಸ್ತವಿಕ ಬದುಕಿನ ಚಿತ್ರಣಗಳಿದ್ದವು. 

ಇದಲ್ಲದೆ, ಸಹನಾ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ಪಂಜರ, ಕಾಣಿಕೆ ಹೀಗೆ ಹತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಆರು ಕಥಾ ಸಂಕಲನಗಳು ಹೊರಬಂದಿದ್ದವು. ಐದು ಬಾನುಲಿ ನಾಟಕಗಳನ್ನು ಬರೆದಿದ್ದರು. ಮುಸ್ಲಿಂ ಮಹಿಳೆಯರು ಕಷ್ಟ, ತ್ರಿವಳಿ ತಲಾಖ್ ಹೀಗೆ ಸ್ತ್ರೀವಾದಿ ವಿಚಾರಗಳನ್ನು ತನ್ನ ಬರಹದಲ್ಲಿ ಕಥಾ ವಸ್ತು ಮಾಡಿದ್ದರು. ಲೇಖನಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಒತ್ತಾಯಿಸುತ್ತಿದ್ದರು. 

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಿಕ್ಕಿದ್ದವು. ಹೆಸರಾಂತ ಲೇಖಕಿಯಾಗಿದ್ದರೂ, ಮಂಗಳೂರಿನಲ್ಲಿ ಸಾಮಾನ್ಯರಂತೆಯೇ ಸಾರಾ ತಮ್ಮ ಇಳಿ ವಯಸ್ಸನ್ನು ಕಳೆದಿದ್ದರು.

Renowned Kannada writer Sara Abubakar passes away at 86. Sara was born in Kasargod, Kerala on 30 June 1936, to Pudiyapuri Ahmad and Zainabi Ahmad. She has four brothers. She was one of the first girls in her community of Muslim families in Kasargod to be educated, graduating from a local Kannada school. She was married after school, and went on to have four sons. Aboobacker has stated that her desire to further her education was constrained by community norms that restricted female access to higher education, and that she was only able to obtain a library membership in 1963.