ಬ್ರೇಕಿಂಗ್ ನ್ಯೂಸ್
15-01-23 10:33 pm Mangalore Correspondent ಕರಾವಳಿ
ಉಳ್ಳಾಲ, ಜ.15 : ದೇಶಾದ್ಯಂತ ಗೋ ಮಾಂಸಾಚರಣೆಯೇ ಮೇಳೈಸುತ್ತಿರುವ ಸಂದರ್ಭದಲ್ಲಿ ಪುಣ್ಯಕೋಟಿ ನಗರದ ಗೋಸೇವಾ ಮಾಸಾಚರಣೆ ಎಂಬುದು ಹೊಸ ಪ್ರಯೋಗ ಎಂದು ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ಅಭಿಪ್ರಾಯ ಪಟ್ಟರು.
ಕೈರಂಗಳದ ಪುಣ್ಯಕೋಟಿ ನಗರದಲ್ಲಿರುವ ಅಮೃತ ಧಾರಾ ಗೋಶಾಲೆಯಲ್ಲಿ ಜ.14 ರಿಂದ ಫೆ.13ರ ವರೆಗೆ ಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿರುವ ಗೋಸೇವಾ ಮಾಸಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋವಿಗೆ ಸನಾತನ ಹಿಂದು ಧರ್ಮದಲ್ಲಿ ಅತ್ಯಂತ ಮಹತ್ವ ಇದೆ. ಇಂದು ಕಾಲ ಬದಲಾಗುತ್ತಿದ್ದು ಎಲ್ಲಿಯೂ ಗೋವಿನ ಸೇವಾ ಮಾಸಾಚರಣೆ ನಡೆಯುತ್ತಿಲ್ಲ. ಬದಲಾಗಿ ದೇಶದ ಮೂಲೆ, ಮೂಲೆಯಲ್ಲೂ ಗೋ ಮಾಂಸಾಚರಣೆಯೇ ನಡೆಯುತ್ತಿದೆ. ಗೋವು ಎಂದರೆ ಮುಗ್ಧ ಹಾಗೂ ಪಾವಿತ್ರ್ಯವುಳ್ಳ ದೇವತೆ. ಅಂತಹ ಗೋವಿನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಪುಣ್ಯಕೋಟಿ ನಗರದಲ್ಲಿ ನಡೆಯುತ್ತಿರುವ ಗೋ ಸೇವಾ ಮಾಸಾಚರಣೆಯಂತಹ ಈ ಕಾರ್ಯಕ್ರಮದ ಮೂಲಕ ಗೋವಿನ ಸಂರಕ್ಷಣೆಗಾಗಿ ಪಣ ತೊಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಮನೆಯಲ್ಲಿ ಎಷ್ಟು ಗೋವುಗಳಿವೆಯೋ ಅದಕ್ಕೆ ಅನುಸಾರವಾಗಿ ವ್ಯಕ್ತಿಯ ಶ್ರೀಮಂತಿಕೆಯನ್ನು ಗುರುತಿಸುತ್ತಿದ್ದರು. ಆದರೆ ಈಗ ಕಾರು ಬಂಗಲೆಯ ಮೂಲಕ ಶ್ರೀಮಂತಿಕೆಯನ್ನು ಗುರುತಿಸುವಂತಾಗಿದೆ. ಗೋವಿಗೆ ನಮ್ಮ ಮನೆಯಲ್ಲಿ ಮಾತ್ರವಲ್ಲದೆ ನಮ್ಮ ಮನದಲ್ಲೂ ಜಾಗ ಕೊಡಬೇಕು. ಪುಣ್ಯಕೋಟಿ ನಗರದಲ್ಲಿ ನಡೆಯುವ ಗೋಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆ ಮುನ್ನ ಮುಡಿಪುವಿನಿಂದ ಹೂಹಾಕುವ ಕಲ್ಲು ಮಾರ್ಗವಾಗಿ ಕೈರಂಗಳ ಪುಣ್ಯಕೋಟಿ ನಗರದ ವರೆಗೆ ಭವ್ಯವಾದ ಶೋಭಾಯಾತ್ರೆ ವಿವಿಧ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಟ್ರಕ್ ಗಳಲ್ಲಿ ನೂರಾರು ರಾಧಾಕೃಷ್ಣ ವೇಷಧಾರಿ ಮಕ್ಕಳು, ನೂರಾರು ಮಂದಿ ಕುಣಿತ ಭಜಕರು ಶೋಭಾಯಾತ್ರೆಗೆ ಮೆರುಗು ನೀಡಿದರು.
ಒಂದು ತಿಂಗಳ ಕಾಲ ನಡೆಯುವ ಗೋ ಸೇವಾ ಮಾಸಾಚರಣೆಯಲ್ಲಿ ಗೋ ಪ್ರೇಮಿಗಳು ಗೋಶಾಲೆಗೆ ಭೇಟಿ ನೀಡಿ ವಿವಿಧ ರೀತಿಯಲ್ಲಿ ಗೋ ಸೇವೆಯನ್ನ ನಡೆಸಬಹುದಾಗಿದೆ. ಗೋಮಾಸಾಚರಣೆ ಸಂಚಾಲಕ ಟಿ.ಜಿ ರಾಜಾರಾಮ್ ಭಟ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಹಿಂದೂ ಜಾಗರಣ ವೇದಿಕೆಯ ನರಸಿಂಹ ಮಾಣಿ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
Goseva is fading but beef meat is increasing in India says Sadashiv shetty in Ullal, Mangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm