ಉಚಿತ ವಿದ್ಯುತ್ ಜೋಕ್ ಅಷ್ಟೇ, ಡಿಕೆಶಿಯಿಂದ ಕತ್ತಲೆ ಭಾಗ್ಯ ಮಾತ್ರ ಸಾಧ್ಯ ; ಜಗದೀಶ ಶೇಣವ 

15-01-23 11:04 pm       Mangalore Correspondent   ಕರಾವಳಿ

ತಾವು ಅಧಿಕಾರಕ್ಕೆ ಬಂದರೆ 200 ಯೂನಿಟ್‌ ವಿದ್ಯುತ್‌ ಉಚಿತ ನೀಡುವುದಾಗಿ ಕಾಂಗ್ರೆಸ್‌ ನೀಡಿರುವ ಹೇಳಿಕೆ ಒಂದು ಜೋಕ್‌ ಅಷ್ಟೇ. ಅದು ಸಾಧ್ಯವಾಗದ ಭರವಸೆ ಎಂದು ಬಿಜೆಪಿ ದ.ಕ. ಜಿಲ್ಲಾ ವಕ್ತಾರ ಜಗದೀಶ ಶೇಣವ ಟೀಕಿಸಿದ್ದಾರೆ.

ಮಂಗಳೂರು, ಜ.15 : ತಾವು ಅಧಿಕಾರಕ್ಕೆ ಬಂದರೆ 200 ಯೂನಿಟ್‌ ವಿದ್ಯುತ್‌ ಉಚಿತ ನೀಡುವುದಾಗಿ ಕಾಂಗ್ರೆಸ್‌ ನೀಡಿರುವ ಹೇಳಿಕೆ ಒಂದು ಜೋಕ್‌ ಅಷ್ಟೇ. ಅದು ಸಾಧ್ಯವಾಗದ ಭರವಸೆ ಎಂದು ಬಿಜೆಪಿ ದ.ಕ. ಜಿಲ್ಲಾ ವಕ್ತಾರ ಜಗದೀಶ ಶೇಣವ ಟೀಕಿಸಿದ್ದಾರೆ.

ದೇಶದಲ್ಲಿ 60 ವರ್ಷ ಆಡಳಿತ ನಡೆಸಿದಾಗ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಕಾಂಗ್ರೆಸ್‌ ಈಗ ಉಚಿತ ವಿದ್ಯುತ್‌ ನೀಡುವ ಹೇಳಿಕೆ ಕೊಟ್ಟಿದೆ. 

DK Shivakumar to head to Goa, says 'see what happens on March 10' | The  News Minute

ಈ ಹಿಂದೆ ವಿದ್ಯುತ್‌ ಖಾತೆಯ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ರಾಜ್ಯದ ಜನತೆಗೆ ಲೋಡ್‌ ಶೆಡ್ಡಿಂಗ್‌ ಮೂಲಕ ಕತ್ತಲೆ ಭಾಗ್ಯ ಕರುಣಿಸಿದ್ದರು. ಇವರು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಉಚಿತ ವಿದ್ಯುತ್‌ ಬದಲಿಗೆ ಉಚಿತ ಕತ್ತಲೆ ಭಾಗ್ಯ ಖಾತರಿ. ಇದರಲ್ಲಿ ಸಂಶಯ ಇಲ್ಲ. ಹಾಗಿದ್ದರೂ ಉಚಿತ ವಿದ್ಯುತ್ ಅಂತ ಹೇಳಿಕೊಂಡು ತಿರುಗಿದ್ದಾರೆ ಎಂದು ಶೇಣವ ಹೇಳಿದ್ದಾರೆ. 

ಕಾಂಗ್ರೆಸ್‌ನಿಂದ ಸಕಾರಾತ್ಮಕ ಬದಲಾವಣೆ ಎಂದಿಗೂ ಸಾಧ್ಯವಿಲ್ಲ. ದೇಶದ ಪ್ರತೀ ಹಳ್ಳಿಗಳಿಗೂ ವಿದ್ಯುತ್‌ ತಲುಪುವಂತೆ ಮಾಡಿದ್ದು ಕೇಂದ್ರದ ಮೋದಿ ಸರಕಾರ. ರಾಜ್ಯದ ಜನತೆಗೆ ಉಚಿತ ವಿದ್ಯುತ್‌ ಕನಸನ್ನು ತೋರಿಸುತ್ತಿರುವ ಕಾಂಗ್ರೆಸ್‌ ಕೇಜ್ರಿವಾಲ್‌ ಅವರಂತೆ ಪ್ರತಿಯೊಂದನ್ನು ಉಚಿತವಾಗಿ ನೀಡುವ ಸುಳ್ಳು ಆಶ್ವಾಸನೆಯೊಂದಿಗೆ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Free electricity is a joke by DK Shivakumar slams Jagadeesh K Shenava.