ಪರಿಹಾರವೂ ಇಲ್ಲ, ಆಸ್ಪತ್ರೆ ವೆಚ್ಚವೂ ಇಲ್ಲ, ಇನ್ನು ದೇವರೇ ಗತಿ ; ಕುಕ್ಕರ್ ಬ್ಲಾಸ್ಟ್ ಸಂತ್ರಸ್ತ ಪುರುಷೋತ್ತಮ ಪೂಜಾರಿ ಅಳಲು

17-01-23 01:45 pm       Mangalore Correspondent   ಕರಾವಳಿ

ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ. ಪೂರ್ಣ ಗುಣಮುಖರಾಗದ ಅವರು ಎಲ್ಲದಕ್ಕೂ ಮನೆಯವರನ್ನೇ ಅವಲಂಬಿತರಾಗಿದ್ದಾರೆ‌.

ಮಂಗಳೂರು, ಜ.17: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ. ಪೂರ್ಣ ಗುಣಮುಖರಾಗದ ಅವರು ಎಲ್ಲದಕ್ಕೂ ಮನೆಯವರನ್ನೇ ಅವಲಂಬಿತರಾಗಿದ್ದಾರೆ‌. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದರೂ, ಅವರಿಗೆ ಸರಕಾರದಿಂದ ಚಿಕ್ಕಾಸು ಪರಿಹಾರ ಸಿಕ್ಕಿಲ್ಲ. ಹೀಗಾಗಿ ತನ್ನ ಮುಂದಿನ ಜೀವನಕ್ಕೆ ದೇವರೇ ಗತಿ ಎಂದು ಅಳಲು ತೋಡಿಕೊಂಡಿದ್ದಾರೆ.

ಕಳೆದ ನ.19ರಂದು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಶಂಕಿತ ಉಗ್ರ ಶಾರೀಕ್ ನೊಂದಿಗೆ ಆಟೋ ಡ್ರೈವರ್ ಕೂಡ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ.14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಮನೆಗೆ ಮರಳಿದ್ದಾರೆ. ಆದರೆ ಒಂದು ವರ್ಷ ಕಾಲ ರೆಸ್ಟ್ ತಗೊಳ್ಳಲು ವೈದ್ಯರು ಸೂಚಿಸಿದ್ದಾರೆ. ಅಲ್ಲದೆ, ಪ್ರತಿ ಹತ್ತು ದಿನಕ್ಕೊಮ್ಮೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. 

Mangaluru blast: Passenger in auto-rickshaw was carrying cooker with  explosives, had stolen Aadhar Card to fake identity

ಸದ್ಯಕ್ಕೆ, ಪುರುಷೋತ್ತಮ ಪೂಜಾರಿ ಅವರು ಬೆಡ್ ರೆಸ್ಟ್ ನಲ್ಲಿದ್ದು ಮನೆಯವರ ಹೊರತು  ಬೇರೆಯವರು ಹತ್ತಿರ ಹೋಗುವಂತಿಲ್ಲ. ಸುಟ್ಟ ಗಾಯಗಳಿಂದ ಕೈಗಳು ಬಲಹೀನಗೊಂಡಿದ್ದು, ಮುಖ, ದೇಹದ ಭಾಗಗಳಲ್ಲಿ ಗಾಯದ ಕಾರಣ ನೋವು ಹೊಂದಿದ್ದಾರೆ. ಗಾಯಗಳಲ್ಲಿ ಸೋಂಕು ಉಲ್ಬಣಗೊಳ್ಳದಂತೆ ಪ್ರತ್ಯೇಕವಾಗಿ ಇರುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ದೈನಂದಿನ ಕೆಲಸಗಳಿಗೂ ಮನೆಯವರನ್ನು ಅವಲಂಬಿಸಬೇಕಾಗಿದೆ. 

ಈ ನಡುವೆ, ಮೇ 3ಕ್ಕೆ ಪುತ್ರಿಯ ವಿವಾಹ ನಿಶ್ಚಯವಾಗಿದ್ದು ಪುರುಷೋತ್ತಮ ಪೂಜಾರಿ ಚಿಂತೆಯಲ್ಲಿದ್ದಾರೆ. ಉಜ್ಜೋಡಿಯಲ್ಲಿ ಹಳೆಯ ಬಾಡಿಗೆ ಮನೆ ಹೊಂದಿದ್ದು ಗುರು ಬೆಳದಿಂಗಳು ಫೌಂಡೇಶನ್ ಸಂಸ್ಥೆಯ ಪದ್ಮರಾಜ್ ಆರ್. ಮುತುವರ್ಜಿಯಿಂದ ಇವರ ಮನೆ ರಿಪೇರಿ ಮಾಡಿಸುತ್ತಿದ್ದಾರೆ. ಆದರೆ ಮದುವೆಗೆ ತಯಾರಿ ಆಗಬೇಕಿದ್ದು ತಾನು ಮಾತ್ರ ಕೆಲಸ ಮಾಡಲಾಗದೆ ಮನೆಯಲ್ಲಿದ್ದೇನೆ. ಆಸ್ಪತ್ರೆ ವೆಚ್ಚವೆಲ್ಲ ನನ್ನ ಮಗಳ ಇಎಸ್ಐನಿಂದ ಭರಿಸಲಾಗಿದೆ. ಇಷ್ಟರ ವರೆಗೆ ಕೆಲ ಜನಪ್ರತಿನಿಧಿಗಳು, ಕೆಲ ಸಂಘ ಸಂಸ್ಥೆಗಳು ಕೈಗೆ ಒಂದಷ್ಟು ಹಣ ಕೊಟ್ಟಿರೋದು ಬಿಟ್ಟರೆ ಸರಕಾರದಿಂದ ಬೇರೇನು ಪರಿಹಾರ ಸಿಕ್ಕಿಲ್ಲ ಎಂದು ಬೇಜಾರು ತೋಡಿಕೊಂಡಿದ್ದಾರೆ.

Mangalore auto blast, no compensation from government even after months, Cooker bomb blast victim auto driver. “The government has promised that it will provide compensation. The money whatever we had is spent. If they do not give compensation, only God can save us,” said Purushottam Poojary, the auto rickshaw driver who was injured in the cooker bomb blast and discharged from hospital two days ago.