18 ವರ್ಷದ ಮಕ್ಕಳಿಗೂ ಮದ್ಯ ಖರೀದಿ ಪ್ರಸ್ತಾಪ ; ಬಿಜೆಪಿ ಸರ್ಕಾರದಿಂದ ಅಮಲು ಭಾಗ್ಯ, ಯುವಕರನ್ನು ದುಶ್ಚಟಕ್ಕೆ ಬೀಳಿಸುವ ಯತ್ನ ; ಯುಟಿ ಖಾದರ್ 

18-01-23 02:21 pm       Mangalore Correspondent   ಕರಾವಳಿ

ರಾಜ್ಯದ ಬಿಜೆಪಿ ಸರ್ಕಾರ 18 ವರ್ಷದ ಮಕ್ಕಳಿಗೂ ಮದ್ಯ ಖರೀದಿಗೆ ಅನುಮತಿ ಕೊಡಲು ಚಿಂತಿಸುತ್ತಿದೆ. ಇದು ಒಂದು ತಲೆಮಾರನ್ನು ನಾಶ ಮಾಡಲು ಹೊರಟಿರುವ ಕ್ರಮ. ಯುವ ಸಮುದಾಯವನ್ನು ದುಶ್ಚಟಕ್ಕೆ ಪ್ರೇರೇಪಿಸುವ ಕ್ರಮ.‌

ಮಂಗಳೂರು, ಜ.18: ರಾಜ್ಯದ ಬಿಜೆಪಿ ಸರ್ಕಾರ 18 ವರ್ಷದ ಮಕ್ಕಳಿಗೂ ಮದ್ಯ ಖರೀದಿಗೆ ಅನುಮತಿ ಕೊಡಲು ಚಿಂತಿಸುತ್ತಿದೆ. ಇದು ಒಂದು ತಲೆಮಾರನ್ನು ನಾಶ ಮಾಡಲು ಹೊರಟಿರುವ ಕ್ರಮ. ಯುವ ಸಮುದಾಯವನ್ನು ದುಶ್ಚಟಕ್ಕೆ ಪ್ರೇರೇಪಿಸುವ ಕ್ರಮ.‌ ಹರೆಯದ ಯುವಕರಿಗೆ ಅಮಲು ಭಾಗ್ಯ ನೀಡುವ ಬಿಜೆಪಿ ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದು ಮಾಜಿ ಸಚಿವ, ವಿಪಕ್ಷ ಉಪ ನಾಯಕ ಯುಟಿ ಖಾದರ್ ಹೇಳಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಯುವ ಜನಾಂಗದ ಸಬಲೀಕರಣ, ಯುವಕರಿಗೆ ಉದ್ಯೋಗ ಕೊಡಲು ಇವರಿಂದ ಆಗಿಲ್ಲ. ಈಗ ಯುವಕರನ್ನು ದುಷ್ಟಟಕ್ಕೆ ಪ್ರೇರೇಪಿಸುವ ಯೋಚನೆಯನ್ನು ಸರ್ಕಾರ ಮಾಡ್ತಿದೆ. ಬಿಜೆಪಿ ಸರ್ಕಾರಕ್ಕೆ ಇದರ ಪರಿಣಾಮ ಗೊತ್ತಿಲ್ಲ, ಕೇವಲ ದುಡ್ಡು ಮಾಡೋದಷ್ಟೇ ಇವರ ಗುರಿ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಯುವಕರನ್ನು ಕುಡಿಯಿರಿ ಅಂತ ಹೇಳಿ ದೋಚಲು ಹೊರಟಿದ್ದಾರೆ. ಇಂಥ ದುಸ್ಥಿತಿಯಲ್ಲಿ ಇವರು ಸರ್ಕಾರ ನಡೆಸಬೇಕಾ? ಎಂದು ಪ್ರಶ್ನೆ ಮಾಡಿದರು. 

NFHS Report: 7% Women, 25% Men Drink Alcohol in Assam; Highest in Arunachal  Pradesh

ಸಮಾಜದಲ್ಲಿ ಆಗುವ ಹೆಚ್ಚಿನ ಕ್ರಿಮಿನಲ್ ಚಟುವಟಿಕೆಗಳು ಮದ್ಯಪಾನ ಮತ್ತು ಗಾಂಜಾದಿಂದಲೇ ಆಗುವುದು.‌ ಈಗ ಮದ್ಯಪಾನಕ್ಕೆ ವಯಸ್ಸಿನ ಮಿತಿಯನ್ನು 21ರಿಂದ 18ಕ್ಕೆ ಇಳಿಸುತ್ತಿದ್ದಾರೆ. ಇವರಿಗೆ ನಾಚಿಕೆ, ಮರ್ಯಾದೆ ಏನೂ ಇಲ್ಲ. ಆದಾಯ ಹೆಚ್ಚಿಸುವ ಗುರಿ ಇಟ್ಟುಕೊಂಡು ಲಿಕ್ಕರ್ ಇನ್ನೂ ಹೆಚ್ಚು ಮಾರಲು ತೊಡಗಿದ್ದಾರೆ ಎಂದು ಹೇಳಿದ ಖಾದರ್, ಮಂಗಳೂರಿನಲ್ಲಿ ಎಲ್ಲಾ ಕಡೆ ವಿಡಿಯೋ ಗೇಮ್, ಸ್ಕಿಲ್ ಗೇಮ್ ನಡೀತಾ ಇದೆ. ಮಕ್ಕಳು ಶಾಲೆಗೆ ಹೋಗುವ ಬದಲು ಸ್ಕಿಲ್ ಗೇಮ್ ಮಾಡ್ತಾ ಇದಾರೆ. ಇದನ್ನು ಹತ್ತಿಕ್ಕಲು ಇವರಿಗೆ ಆಗುತ್ತಿಲ್ಲ. ಬಿಜೆಪಿಯವರ ಈ ಕೆಲಸವನ್ನು ಯಾವ ತಾಯಿಯೂ ಸಹಿಸಲು ಸಾಧ್ಯವಿಲ್ಲ. 

Philanthropist Veerendra Heggade to take oath as Rajya Sabha member

ಇವರ ಪಕ್ಷದ ಸಂಸದ ವೀರೇಂದ್ರ ಹೆಗ್ಗಡೆಯವರು ಒಂದೆಡೆ ಮದ್ಯವರ್ಜನ ಶಿಬಿರ ಮಾಡ್ತಾ ಇದಾರೆ.‌ ಆದರೆ ಅಧಿಕಾರದಲ್ಲಿ ಕೂತವರು ಜನರನ್ನು ನಶೆಗೆ ಬೀಳಿಸಲು ಕಾನೂನು ತರ್ತಾ ಇದಾರೆ. ತಕ್ಷಣ ಈ ಆಲೋಚನೆ ಕೈಬಿಟ್ಟು ನಿರ್ಧಾರ ವಾಪಸ್ ಪಡೆಯಬೇಕು. ಗೃಹ ಸಚಿವರು, ಆರೋಗ್ಯ ಸಚಿವರು ಇತ್ತ ಕಡೆ ಗಮನ ಹರಿಸಲಿ. ಭವಿಷ್ಯಕ್ಕೆ ‌ಮಾರಕವಾದ ಆದಾಯ ನಮಗೆ ಅಗತ್ಯವಿಲ್ಲ ಎಂಬುದನ್ನು ಮನಗಾಣಬೇಕು. ಬಿಜೆಪಿಯವರು ಮೊದಲು 40 ಶೇ. ಕಮಿಷನ್ ಹೊಡೆಯೋದನ್ನ ನಿಲ್ಲಿಸಿ, ರಾಜ್ಯದ ಬೊಕ್ಕಸ ತುಂಬಿಸಲಿ. ದುಂದುವೆಚ್ಚ ಮಾಡುವ ಯೋಜನೆ ಬದಿಗಿಟ್ಟು ಆದಾಯ ಹೆಚ್ಚಿಸಲಿ. ಅದು ಬಿಟ್ಟು ಹರೆಯದ ಯುವಕರಿಗೆ ಮದ್ಯ ಕುಡಿಸುವ ಆಲೋಚನೆ ಬೇಡ. ಈ ವಿಚಾರದಲ್ಲಿ ಮುಂದೆ ಹೋದ್ರೆ ಜನರು ಬೀದಿಗಿಳಿಯಲಿದ್ದಾರೆ, ಜನರಿಗೆ ಕಾಂಗ್ರೆಸ್ ನೇತೃತ್ವ ನೀಡಲಿದೆ ಎಂದರು. 

ದೇಶ, ರಾಷ್ಟ್ರೀಯತೆ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯದ ಸಾಲವನ್ನು ನಾಲ್ಕೇ ವರ್ಷದಲ್ಲಿ 2 ಲಕ್ಷ 36 ಕೋಟಿಗೆ ಏರಿಸಿದೆ. ಹಿಂದಿನವರು ಸಾಲ ಮಾಡಿದ್ರು ಎನ್ನುವ ಇವರು ಮಾಡಿದ್ದೇನು.? ಬಿಜೆಪಿಯ ಎಲ್ಲಾ ನಾಯಕರು ಅಂಬೇಡ್ಕರ್, ಗಾಂಧೀಜಿ ವಿರುದ್ಧ ‌ಮಾತನಾಡ್ತಾರೆ. ಅಲ್ಪಸಂಖ್ಯಾತರ ವಿರುದ್ದ ಮಾತ್ರ ಅಲ್ಲ, ಎಲ್ಲರ ವಿರುದ್ಧವೂ ಮಾತ‌ನಾಡ್ತಾರೆ. ಇಂಥ ನಾಯಕರ ವಿರುದ್ದ ಮೋದಿಯವರು ಏನು ಕ್ರಮ ಕೈಗೊಳ್ತಾರೆ? ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷರೇ ರಸ್ತೆ, ಚರಂಡಿ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾರೆ. ಅವರ ಮೇಲೆ ಯಾಕೆ ಇನ್ನೂ ಬಿಜೆಪಿಯಲ್ಲಿ ಕ್ರಮ ಆಗಿಲ್ಲ. ಸಂವಿಧಾನ ತಿದ್ದುಪಡಿ ‌ಮಾಡ್ತೇನೆ ಅಂತ ಹೇಳಿದವರ ಮೇಲೆ ಯಾಕೆ ಕ್ರಮ ಆಗಿಲ್ಲ ಎಂದು ಪ್ರಶ್ನಿಸಿದರು.

MLA U T Khader has opposed the state government’s proposal on reducing the legal age for consumption of alcohol from 21 years to 18 years. Addressing the media here on Wednesday, January 18, U T Khader said, "The BJP government’s step to reduce the legal age to consume alcohol from 21 years to 18 years will destroy the young generation. BJP, which speaks about their culture, values of the party, strengthening the country and so on, are indulging in pushing the young generation to consume alcohol at the age of 18.