ಬ್ರೇಕಿಂಗ್ ನ್ಯೂಸ್
19-01-23 05:51 pm Mangalore Correspondent ಕರಾವಳಿ
ಮಂಗಳೂರು, ಜ.19: ಈವರೆಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಆಪ್ತರಲ್ಲಿ ಒಬ್ಬರಾದ ಅಶೋಕ್ ಕುಮಾರ್ ರೈ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಜನವರಿ 22ರಂದು ಮಂಗಳೂರಿನಲ್ಲಿ ನಡೆಯುವ ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಶೋಕ್ ರೈ ತನ್ನ ಸಾವಿರಾರು ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.
ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಎರಡು ತಿಂಗಳ ಹಿಂದೆಯೇ ಸುದ್ದಿ ಹಬ್ಬಿತ್ತು. ಈ ಕುರಿತು ಸುದ್ದಿ ಹಬ್ಬಿದ್ದರೂ, ಅಧಿಕೃತವಾಗಿ ಯಾರು ಕೂಡ ಹೇಳಿದ್ದಿಲ್ಲ. ಆದರೆ ಇತ್ತೀಚೆಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ವೀಕ್ಷಕರು ಬಂದು ಟಿಕೆಟ್ ಆಕಾಂಕ್ಷಿತರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿದ್ದರು. ಅಂದಿನ ಸಭೆಯಲ್ಲಿ ಅಶೋಕ್ ರೈ ಕೂಡ ಆಹ್ವಾನಿತರಾಗಿದ್ದು ಕಾಂಗ್ರೆಸಿಗರಲ್ಲೇ ಅಚ್ಚರಿ ಸೃಷ್ಟಿಸಿತ್ತು. ಯಾಕಂದ್ರೆ, ಅಶೋಕ್ ಕುಮಾರ್ ರೈ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು ಅನ್ನುವುದು ಅಧಿಕೃತವಾಗಿತ್ತು. ಕೆಪಿಸಿಸಿ ಕಡೆಯಿಂದ ಬಂದಿದ್ದ ಪಟ್ಟಿಯ ಪ್ರಕಾರ, ಜಿಲ್ಲಾ ಕಾಂಗ್ರೆಸ್ ನಾಯಕರು ಎಲ್ಲ ಅರ್ಜಿದಾರರನ್ನೂ ಕಚೇರಿಗೆ ಕರೆಸಿಕೊಂಡಿದ್ದರು.
ಹಾಗೆ ನೋಡಿದರೆ, ಅಶೋಕ್ ಕುಮಾರ್ ರೈ ಕಳೆದ ಚುನಾವಣೆಯಲ್ಲಿಯೇ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ, ಸಂಸದ ನಳಿನ್ ಕುಮಾರ್ ಜೊತೆಗೆ ಮುನಿಸು ಹೊಂದಿದ್ದಕ್ಕಾಗಿ ಅವರನ್ನು ದೂರ ಇಡಲಾಗಿತ್ತು. ಗೌಡ ಜನಾಂಗಕ್ಕೆ ಟಿಕೆಟ್ ಕೊಡುವುದಾಗಿ ಹೇಳಿ ಆಗ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ತೀವ್ರ ಚಿಂತೆಗೆ ಒಳಗಾಗಿದ್ದ ಅಶೋಕ್ ರೈ ತನಗಿನ್ನು ಪಕ್ಷದಲ್ಲಿ ಭವಿಷ್ಯ ಇಲ್ಲ ಎಂಬುದನ್ನು ಅರಿತುಕೊಂಡಿದ್ದರು. ಇದೇ ಕಾರಣಕ್ಕೆ ಸೂಕ್ತ ನಾಯಕರೇ ಇಲ್ಲದಿದ್ದ ಪುತ್ತೂರು ಕಾಂಗ್ರೆಸಿನತ್ತ ಒಲವು ಹರಿಸಿದ್ದರು. ಆದರೆ ಅಧಿಕೃತವಾಗಿ ಪಕ್ಷವನ್ನು ಸೇರಿರಲಿಲ್ಲ.
ಈ ಬಾರಿ ಟಿಕೆಟ್ ಸಿಗೋದಾದ್ರೆ ಅಶೋಕ್ ರೈ ಕಾಂಗ್ರೆಸ್ ಸೇರುವುದು ಖಚಿತ ಎನ್ನುವ ಮಾತು ಮೊದಲಿನಿಂದಲೂ ಕೇಳಿಬಂದಿತ್ತು. ಇದೀಗ ಅಶೋಕ್ ರೈ ಅಧಿಕೃತವಾಗಿ ಕಾಂಗ್ರೆಸ್ ಬಾವುಟ ಹಿಡಿಯೋದನ್ನು ಖಚಿತ ಮಾಡಿದ್ದಾರೆ. ಜ.22ರಂದು ರಾಜ್ಯ ನಾಯಕರ ಉಪಸ್ಥಿತಿಯಲ್ಲೇ ಅಶೋಕ್ ರೈ ಕಾಂಗ್ರೆಸ್ ಸೇರಲಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವೇ ಹೊರತು ನಷ್ಟವಿಲ್ಲ. ಪ್ರಬಲ ಸಮುದಾಯದ ಮುಖಂಡನೊಬ್ಬ ವಿರೋಧಿ ಬಣ ಸೇರುವುದರಿಂದ ಬಿಜೆಪಿಗೆ ನಷ್ಟವೇ ಆಗಲಿದೆ. ಪುತ್ತೂರು ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ತನ್ನ ಟ್ರಸ್ಟ್ ಮೂಲಕ ಸಮಾಜ ಕಾರ್ಯ ನಡೆಸುತ್ತಿರುವ ಅಶೋಕ್ ರೈ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದಾರೆ. ಜೊತೆಗೆ, ಬಿಜೆಪಿ, ಕಾಂಗ್ರೆಸ್ ಪಕ್ಷ ಭೇದ ಇಲ್ಲದೆ ಜನಬೆಂಬಲ ಹೊಂದಿದ್ದಾರೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಊರಲ್ಲೇ ಅವರ ಧೋರಣೆಯಿಂದ ಮುನಿಸಿಕೊಂಡು ಪಕ್ಷವನ್ನೇ ಬಿಡುತ್ತಿದ್ದಾರೆ. ಪುತ್ತೂರಿನಲ್ಲಿ ನಳಿನ್ ಕುಮಾರ್ ಬಗ್ಗೆ ಅಸಮಾಧಾನ ಹೊಂದಿರುವ ಮಂದಿಯೂ ಅಶೋಕ್ ರೈ ಜೊತೆಯಾಗಿದ್ದಾರೆ.
ಈ ಬಗ್ಗೆ ಬಿಜೆಪಿ ಕಡೆಯಿಂದ ಸ್ಪಷ್ಟನೆ ನೀಡಿರುವ ನಳಿನ್ ಕುಮಾರ್ ಆಪ್ತರೂ ಆಗಿರುವ ಬಿಜೆಪಿ ಮುಖಂಡ ಸಾಜ ರಾಧಾಕೃಷ್ಣ ಆಳ್ವ, ಅಶೋಕ್ ಕುಮಾರ್ ರೈಯವರು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯನಾಗಿದ್ದರೂ, ಆರು ವರ್ಷಗಳಿಂದ ಸದಸ್ಯತ್ವ ನವೀಕರಣ ಮಾಡಿಕೊಂಡಿಲ್ಲ. ಪಕ್ಷದ ಚಟುವಟಿಕೆಯಲ್ಲೂ ಭಾಗವಹಿಸುತ್ತಿರಲಿಲ್ಲ. ಅವರು ಕಾಂಗ್ರೆಸ್ ಸೇರಿದರೆ ಪಕ್ಷಕ್ಕೆ ಯಾವುದೇ ನಷ್ಟವೂ ಇಲ್ಲ. ಅವರ ಜೊತೆಗೆ ಬಿಜೆಪಿ ಕಾರ್ಯಕರ್ತರು ಹೋಗುವುದಿಲ್ಲ ಎಂದು ಹೇಳಿದ್ದಾರೆ.
Puttur Ashok Kumar Rai is all set to join hands with Congress with his thousands of followers leaving the BJP party in Mangalore.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm