ಕಟೀಲು ಕ್ಷೇತ್ರದ ಹೆಸರು ಕೆಡಿಸೋದ್ಯಾಕೆ ನಳಿನ್ ? ಮುಸ್ಲಿಂ ದ್ವೇಷವೇ ಇವರಿಗೆ ಅಸ್ತಿತ್ವ ; ರಮಾನಾಥ ರೈ ಟಾಂಗ್ 

21-01-23 03:39 pm       Mangalore Correspondent   ಕರಾವಳಿ

ನಳಿನ್ ಕುಮಾರ್ ತನ್ನ ಹೆಸರಿನ ಜೊತೆಗೆ ಕಟೀಲ್ ಹೆಸರಾಕಿ ಪವಿತ್ರ ಕ್ಷೇತ್ರದ ಹೆಸರು ಕೆಡಿಸುತ್ತಿದ್ದಾರೆ. ಲವ್ ಜಿಹಾದ್, ಮುಸ್ಲಿಂ ವಿರೋಧಿ ಹೇಳಿಕೆ ಕೊಟ್ಟು ಕಟೀಲ್ ಕ್ಷೇತ್ರದ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಟಾಂಗ್ ನೀಡಿದ್ದಾರೆ. 

ಮಂಗಳೂರು, ಜ.21 : ನಳಿನ್ ಕುಮಾರ್ ತನ್ನ ಹೆಸರಿನ ಜೊತೆಗೆ ಕಟೀಲ್ ಹೆಸರಾಕಿ ಪವಿತ್ರ ಕ್ಷೇತ್ರದ ಹೆಸರು ಕೆಡಿಸುತ್ತಿದ್ದಾರೆ. ಲವ್ ಜಿಹಾದ್, ಮುಸ್ಲಿಂ ವಿರೋಧಿ ಹೇಳಿಕೆ ಕೊಟ್ಟು ಕಟೀಲ್ ಕ್ಷೇತ್ರದ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಟಾಂಗ್ ನೀಡಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಳಿನ್ ಕುಮಾರ್ ಕಟೀಲಿನ ವ್ಯಕ್ತಿಯೂ ಅಲ್ಲ, ತನ್ನ ಹೆಸರಿನೊಂದಿಗೆ ಕಟೀಲು ಇಟ್ಟುಕೊಂಡು ಅಲ್ಲಿನ ಹೆಸರು ಹಾಳು ಮಾಡೋದ್ಯಾಕೆ. ಪವಿತ್ರ ಕ್ಷೇತ್ರದ ಹೆಸರು ಯಾಕೆ ಹಾಳು ಮಾಡಬೇಕು. ಕೇವಲ ತನ್ನ ಹೆಸರಷ್ಟೇ ಇಟ್ಟುಕೊಳ್ಳಲಿ ಎಂದು ಹೇಳಿದ್ದಾರೆ. 

Not even one MLA is unhappy with B S Yediyurappa: Nalin Kumar Kateel |  Deccan Herald

ಇವರ ಬಿಜೆಪಿ ಅಂಗಡಿಯನ್ನೇ ಮುಚ್ಚಬೇಕು, ಇವರಿಗೆ ಮುಸ್ಲಿಂ ದ್ವೇಷವೇ ಅಸ್ತಿತ್ವ. ಬೇರೆ ಯಾವುದೇ ಅಸ್ತ್ರ ಇಲ್ಲ. ಆದರೆ ಪ್ರಧಾನಿ ಮೋದಿ ಮುಸ್ಲಿಂ ದೂಷಿಸಬೇಡಿ ಎಂದು ಹೇಳುತ್ತಾರೆ. ಮುಸ್ಲಿಂ ದ್ವೇಷ ಬಿಟ್ಟರೆ ಇವರಿಗೆ ಅಸ್ತಿತ್ವ ಇದೆಯೇ ಎಂದು ಕೇಳಿದರು. 

What are PM Modi, FM Nirmala Sitharaman hiding: Congress on Union  minister's 'recession' remarks

ಜಗತ್ತು ಒಪ್ಪಿಕೊಂಡ ಬಿಬಿಸಿ ವಾಹಿನಿಯ ವರದಿ ಬಗ್ಗೆ ಮೋದಿ ಒಪ್ಪುವುದಿಲ್ಲ. ಗುಜರಾತ್ ನರಮೇಧ ಬಗ್ಗೆ ಬಿಬಿಸಿ ನೀಡಿದ್ದ ವರದಿಯನ್ನು ಮೋದಿ ಅಲ್ಲಗಳೆಯುತ್ತಾರೆ. ಬಿಬಿಸಿ ಸುದ್ದಿ ಇಡೀ ಜಗತ್ತಿನಲ್ಲಿ ವಿಶ್ವಾಸಾರ್ಹತೆ ಇದೆ. ಇವರಿಗೆ ಮಾತ್ರ ವಿಶ್ವಾಸ ಇಲ್ಲದಾಗಿದೆ ಎಂದರು. 

ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದನ್ನು ಖಂಡಿಸುತ್ತೇನೆ.‌ ಪ್ರತಿಭಟನೆ ನಡೆಸುತ್ತಿದ್ದ ಹೆಣ್ಮಕ್ಕಳನ್ನು ವಶಕ್ಕೆ ಪಡೆದು ಮಧ್ಯರಾತ್ರಿ ರಸ್ತೆ ಇಲ್ಲದ ಜಾಗದಲ್ಲಿ ಕೂಡಿ ಹಾಕಿದ್ದಾರೆ. ಈ ರೀತಿ ಮಹಿಳೆಯರ ಮೇಲೆ ಶಕ್ತಿ ಪ್ರಯೋಗಿಸಿದ್ದು ಸರಿಯಲ್ಲ. ಜಿಲ್ಲಾ ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದು ರಮಾನಾಥ ರೈ ಹೇಳಿದರು.

Naleen has spoiled the name of Kateel in state, Muslims are their target, Slams congress leader Ramanath Rai.