ಬ್ರೇಕಿಂಗ್ ನ್ಯೂಸ್
21-01-23 10:47 pm Mangalore Correspondent ಕರಾವಳಿ
ಮಂಗಳೂರು, ಜ.21 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯವರು ಜನರ ನಡುವೆ ಸಾಮರಸ್ಯ ಇಲ್ಲದಂತೆ ಮಾಡಿದ್ದಾರೆ. ನೈತಿಕ ಪೊಲೀಸ್ ಗಿರಿ ಸೇರಿದಂತೆ ವಿವಿಧ ರೀತಿಯಲ್ಲಿ ಸಾಮರಸ್ಯ ಹಾಳು ಮಾಡಿದ್ದಾರೆ. ಇದರಿಂದ ಇಲ್ಲಿ ಹೂಡಿಕೆ ಮಾಡಲು ದೊಡ್ಡ ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕರಾವಳಿಯಲ್ಲಿ ಸಾಮರಸ್ಯ ಕದಡಿರುವುದರಿಂದ ದೊಡ್ಡ ಮಟ್ಟದ ಹೂಡಿಕೆಗಳಿಗೆ ಅಡ್ಡಿಯಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಹೊರಗಿನ ವಿದ್ಯಾರ್ಥಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಇಂಥ ಸ್ಥಿತಿ ಉಂಟಾಗಿರುವುದಕ್ಕೆ ಬಿಜೆಪಿ ಆಡಳಿತ ಕಾರಣ. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಇಂಥ ಸ್ಥಿತಿ ಇರಲಿಲ್ಲ. ಕರಾವಳಿಯಲ್ಲಿ ಸಾಮರಸ್ಯ ಪುನಸ್ಥಾಪಿಸುವುದು ನಮ್ಮ ಪ್ರಣಾಳಿಕೆಯಲ್ಲಿದೆ. ಕರಾವಳಿಗೆ ಸಂಬಂಧಿಸಿ ಹತ್ತು ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡ್ತೀವಿ. ಅದರಲ್ಲಿ ಅಭಿವೃದ್ಧಿಯ ಜೊತೆಗೆ ಬೇರೆ ಬೇರೆ ವಿಚಾರಗಳ ಉಲ್ಲೇಖ ಇದೆ ಎಂದು ಹೇಳಿದರು.
ಚುನಾವಣೆ ಬಳಿಕ ಬೇರೆ ಪಕ್ಷಕ್ಕೆ ಹಾರುವ ಶಾಸಕರನ್ನು ಹಿಡಿದಿಡಲು ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ, ಅದರಿಂದ ನಾವು ದೊಡ್ಡ ಪಾಠ ಕಲಿತಿದ್ದೇವೆ. ಟಿಕೆಟ್ ನೀಡುವಾಗಲೇ ಈ ಬಾರಿ ಬಹಳ ಎಚ್ಚರಿಕೆ ವಹಿಸಲಿದ್ದೇವೆ, ಆಪರೇಷನ್ ಕಮಲಕ್ಕೆ ಒಳಗಾಗುವ ಅನುಮಾನ ಇದ್ದವರಿಗೆ ಟಿಕೆಟ್ ಕೊಡೋದಿಲ್ಲ. ಆದರೆ ಈ ಸಲ ಖರೀದಿಯಾಗುವ ಪ್ರಮೇಯ ಬರಲ್ಲ, ಕಾಂಗ್ರೆಸ್ ಪೂರ್ಣ ಬಹುಮತ ಪಡೆದು ಸರಕಾರ ರಚಿಸಲಿದೆ ಎಂದರು.
ಭಾರತ್ ಜೋಡೊ ಯಾತ್ರೆಯಿಂದ ಲಾಭ ಆಗಿದ್ಯಾ ಎನ್ನುವ ಪ್ರಶ್ನೆಗೆ, ಯಾತ್ರೆಯಿಂದಾಗಿ ರಾಹುಲ್ ಗಾಂಧಿ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿದೆ ಅನ್ನುವ ಅಭಿಪ್ರಾಯ, ವಿಶ್ಲೇಷಣೆ ಬಂದಿದೆ. ದೇಶಕ್ಕೆ ಇದರಿಂದ ಮಹತ್ತರ ಸಂದೇಶ ಹೋಗಲಿದೆ ಎಂದರು. ಕಾಂಗ್ರೆಸ್ ನಲ್ಲಿ ಯಾವುದೇ ಒಳಜಗಳ ಇಲ್ಲವೇ ಎಂಬ ಪ್ರಶ್ನೆಗೆ ಒಳಜಗಳ ಇಲ್ಲ, ಭಿನ್ನ ಅಭಿಪ್ರಾಯಗಳು ಇದೆಯಷ್ಟೆ. ಅವು ವಿಚಾರಕ್ಕೆ ಸಂಬಂಧಿಸಿ ಭಿನ್ನ ಅಭಿಪ್ರಾಯಗಳಷ್ಟೆ ಎಂದು ಹೇಳಿದರು.
ಉಚಿತ ವಿದ್ಯುತ್, ಮಹಿಳೆಯರಿಗೆ ಎರಡು ಸಾವಿರ ರೂ. ಪ್ರಣಾಳಿಕೆಯಲ್ಲಿ ಇರಲಿದೆಯೇ ಎಂಬ ಪ್ರಶ್ನೆಗೆ, ಹೌದು.. ಅವು ನಮ್ಮ ಘೋಷಿತ ಯೋಜನೆಗಳು. ಅದನ್ನೂ ಸೇರಿದಂತೆ ಉತ್ತರ ಕರ್ನಾಟಕ, ಕಲ್ಯಾಣ, ದಕ್ಷಿಣ, ಕರಾವಳಿ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಾವು ಪ್ರಣಾಳಿಕೆ ಹೊಂದಿದ್ದೇವೆ. ನಾವು ಸರಕಾರದಲ್ಲಿ ಅದನ್ನು ಈಡೇರಿಸಲಷ್ಟೆ ಮೊದಲ ಆದ್ಯತೆ ಇರುತ್ತದೆ. ಮಹಿಳೆಯರಿಗೆ ಎರಡು ಸಾವಿರ ನೀಡಲು ಅಂದಾಜು ವರ್ಷಕ್ಕೆ 24 ಸಾವಿರ ಕೋಟಿ ತಗಲುತ್ತದೆ ಎನ್ನುವ ಲೆಕ್ಕಾಚಾರ ಇದೆ. ಅದನ್ನು ಮಾಡುತ್ತೇವೆ ಎಂದರು. ಅದು ಯಾವ ರೀತಿ ಇರತ್ತೆ, ಬಿಪಿಎಲ್ ಮಹಿಳೆಯರಿಗೆ ಮಾತ್ರವೇ ಎಂದು ಕೇಳಿದ್ದಕ್ಕೆ, ಅದು ಯಾವ ರೀತಿ ಇರಲಿದೆ, ಬಿಪಿಎಲ್ಲೋ, ಕೆಲಸದಲ್ಲಿರುವ ಮಹಿಳೆಯರಿಗೆ ಕೊಡಬೇಕೋ, ಸರಕಾರಿ ವ್ಯವಸ್ಥೆಯಲ್ಲಿರುವ ಪುರುಷರ ಪತ್ನಿಯರಿಗೆ ಕೊಡಬೇಕೋ ಹೀಗೆ ಸ್ಪಷ್ಟ ರೂಪುರೇಷೆ ಇದೆ. ಅದನ್ನು ಮುಂದೆ ತಿಳಿಸಲಾಗುವುದು ಎಂದರು.
Former deputy chief minister Dr G Parameshwar said the Congress will release a separate election manifesto for the coastal Karnataka region ahead of the Assembly elections in the state. Addressing a press conference here on Saturday, January 21, he said, “We have held discussions with KCCI, Credai, farmers, arecanut growers, fishermen, bus drivers, auto drivers, students, various associations, NGOs and taken their views besides discussing the problems that they have been facing.”
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm