ಬ್ರೇಕಿಂಗ್ ನ್ಯೂಸ್
22-01-23 10:34 pm Mangalore Correspondent ಕರಾವಳಿ
ಮಂಗಳೂರು, ಜ.22: ಕರಾವಳಿ ಕರ್ನಾಟಕದ ಅಭಿವೃದ್ಧಿಯ ಗುರಿ ಇಟ್ಕೊಂಡು ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪ್ರತ್ಯೇಕ ಹತ್ತು ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಡಾ.ಜಿ ಪರಮೇಶ್ವರ್ ನೇತೃತ್ವದ ಚುನಾವಣಾ ಪ್ರಣಾಳಿಕೆ ಸಮಿತಿ ರೆಡಿ ಮಾಡಿದ ಹತ್ತು ಅಂಶಗಳನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ.
ಕರಾವಳಿಯಲ್ಲಿ ಹೂಡಿಕೆ ಹೆಚ್ಚಳ, ಉದ್ಯೋಗ ಸೃಷ್ಟಿ, ಸಾಮರಸ್ಯ ಕಾಪಾಡಲು ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಎನ್ನುವ ಸಾಂವಿಧಾನಿಕ ಮಾನ್ಯತೆಯುಳ್ಳ ವಿಭಾಗ ತೆರೆದು ಅದಕ್ಕೆ ವಾರ್ಷಿಕ 2500 ಕೋಟಿ ಅನುದಾನವನ್ನು ಬಜೆಟ್ ನಲ್ಲಿ ನೀಡಲಾಗುವುದು. ಮಂಗಳೂರನ್ನು ದೇಶದಲ್ಲಿ ಇನ್ನೊಂದು ಐಟಿ ಮತ್ತು ಗಾರ್ಮೆಂಟ್ ಇಂಡಸ್ಟ್ರಿ ಹಬ್ ಮಾಡುವ ದೃಷ್ಟಿಯಿದ್ದು, ಇದರ ಮೂಲಕ ಒಂದು ಲಕ್ಷ ಉದ್ಯೋಗವನ್ನು ಕರಾವಳಿಯಲ್ಲಿ ಸೃಜಿಸಲಾಗುವುದು.
ಮೀನುಗಾರಿಕೆಗೆ ವಿಶೇಷ ಒತ್ತು ನೀಡಲಾಗಿದ್ದು, ಪ್ರತಿ ಮೀನುಗಾರನಿಗೆ ಉಚಿತ ಹತ್ತು ಲಕ್ಷ ವಿಮೆ, ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಒಂದು ಲಕ್ಷದ ವರೆಗೆ ಸಾಲ, ಮೀನುಗಾರಿಕೆ ಬೋಟ್ ಖರೀದಿಸಲು 25 ಲಕ್ಷ ರೂ. ಸಬ್ಸಿಡಿ, ಮೀನುಗಾರರಿಗೆ ಡೀಸೆಲ್ ಸಬ್ಸಿಡಿಯನ್ನು ಹತ್ತು ಲೀಟರಿನಿಂದ 25 ಲೀಟರಿಗೆ ಹೆಚ್ಚಿಸುವುದು, ದಿನಕ್ಕೆ 300ರಿಂದ 500 ಲೀಟರ್ ಡೀಸೆಲ್ ಪೂರೈಕೆ ಹೆಚ್ಚಳ, ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಮಲ್ಪೆ, ಗಂಗೊಳ್ಳಿ ಮತ್ತು ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಹೂಳೆತ್ತುವುದು ಮಾಡಲಾಗುವುದು.
ಬಿಲ್ಲವರ ಬೇಡಿಕೆ ಪರಿಗಣಿಸಿ ಶ್ರೀ ನಾರಾಯಣ ಗುರು ಅಭಿವೃದ್ಧಿ ಮಂಡಳಿ ರಚನೆ, ವಾರ್ಷಿಕವಾಗಿ 250 ಕೋಟಿ ಅನುದಾನ, ಐದು ವರ್ಷಗಳಿಗೆ 1250 ಕೋಟಿ ಅನುದಾನ ನೀಡಲಾಗುವುದು. ಹಾಗೆಯೇ ಬಂಟ ಸಮುದಾಯಕ್ಕಾಗಿ ಬಂಟರ ಅಭಿವೃದ್ಧಿ ಮಂಡಳಿ ರಚನೆ, ಅದಕ್ಕೆ ವಾರ್ಷಿಕ 250 ಕೋಟಿಯಂತೆ ಐದು ವರ್ಷಗಳಲ್ಲಿ 1250 ಕೋಟಿ ಅನುದಾನ ನೀಡುವುದು.
ಅಲ್ಪಸಂಖ್ಯಾತರ ಅನುದಾನ ಹೆಚ್ಚಿಸುವುದು, ಮೋದಿ ಸರಕಾರ ನಿಲ್ಲಿಸಿರುವ ಪ್ರಿ ಮೆಟ್ರಿಕ್ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಮತ್ತೆ ಮುಂದುವರಿಸುವುದು. ಹಳದಿ ರೋಗ ಸೇರಿದಂತೆ ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟ ನೀಗಿಸಲು 50 ಕೋಟಿ ಪ್ಯಾಕೇಜ್ ನೀಡುವುದು, ಕರಾವಳಿಯಲ್ಲಿ ಸಾಮರಸ್ಯ ಸ್ಥಾಪನೆಗಾಗಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಸ್ವಾಮಿ ವಿವೇಕಾನಂದ ಸಾಮಾಜಿಕ ಸಾಮರಸ್ಯ ಕಮಿಟಿ ರಚಿಸುವುದು, ಅದಕ್ಕೆ ಇಂತಿಷ್ಟು ಅನುದಾನ ನೀಡುವುದು. ಪ್ರತಿ ಕುಟುಂಬದ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂ. ನೆರವು, ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ನೀಡುವ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ವಸುಧೈವ ಕುಟುಂಬದ ಶ್ಲೋಕವೇ ಬದಲಾಗಿದೆ
ಇದಕ್ಕೂ ಮುನ್ನ ಪ್ರಜಾಧ್ವನಿ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಉದ್ಘಾಟಿಸಿದರು. ಕರಾವಳಿಯ ಕೋಮುವಾದ ವಿಚಾರ ಪ್ರಸ್ತಾಪಿಸಿದ ರಣದೀಪ ಸುರ್ಜೇವಾಲಾ, ಬಿಜೆಪಿ ಕರಾವಳಿ ಭಾಗವನ್ನು ಭ್ರಷ್ಟಾಚಾರ ಮತ್ತು ಕೋಮುವಾದದ ಫ್ಯಾಕ್ಟರಿ ಮಾಡ್ತಾ ಇದೆ. ಮೋದಿ ಆಡಳಿತದಲ್ಲಿ ಧರ್ಮ ಮತ್ತು ನೀತಿ ಮಧ್ಯೆ ಯುದ್ಧ ಆಗ್ತಾ ಇದೆ. ಈ ಯುದ್ಧ ಇದೇ ಮೊದಲೇನಲ್ಲ. ಕಂಸ- ಕೃಷ್ಣನ ನಡುವೆ, ರಾಮ- ರಾವಣರ ನಡುವೆಯೂ ಧರ್ಮ- ಅಧರ್ಮಗಳ ನಡುವೆ ಯುದ್ಧ ನಡೆದಿತ್ತು.
ಈಗಲೂ ಅಂತಹದ್ದೇ ಯುದ್ಧ ಈ ದೇಶದಲ್ಲಿ ನಡೆಯುತ್ತಿದೆ. ಇಡೀ ಜಗತ್ತಿಗೆ ವಸುಧೈವ ಕುಟುಂಬಕಂ ಉಪದೇಶ ಮಾಡಿದ್ದು ಭಾರತ. ಆದರೆ ಇದೇ ಭಾರತದಲ್ಲಿ ಬಿಜೆಪಿ ಆಡಳಿತ ಒಂದು ವರ್ಗವನ್ನು ಹೊರಗಿಟ್ಟು ಏನು ಸಂದೇಶ ನೀಡ್ತಿದೆ. ಹಿಂದುತ್ವ ಅನ್ನುವುದು ವೇದ, ಉಪನಿಷತ್ತಿನಲ್ಲಿ ಇರಲಿಲ್ಲ. ಅದು ಬಂದಿದ್ದು ಆರೆಸ್ಸೆಸ್ ಕೇಂದ್ರ ಕಚೇರಿ ಇರುವ ನಾಗಪುರದಿಂದ. ಕೃಷ್ಣ 18ನೇ ಅಧ್ಯಾಯದಲ್ಲಿ ಧರ್ಮಕ್ಕಾಗಿ ತ್ಯಾಗ ಮಾಡು, ಆದರೆ ಕರ್ತವ್ಯ ಪಾಲಿಸು ಎಂದಿದ್ದಾನೆ. ಆದರೆ ಬಿಜೆಪಿ ಆಡಳಿತ ಕೃಷ್ಣ ಹೇಳಿದ್ದ ವಸುಧೈವ ಕುಟುಂಬದ ಶ್ಲೋಕವನ್ನೇ ಬದಲಿಸ್ತಿದೆ ಎನ್ನುವ ಮೂಲಕ ಮುಸ್ಲಿಂ ದ್ವೇಷದ ರಾಜಕಾರಣವನ್ನು ಆ ಹೆಸರೆತ್ತದೆ ಉಲ್ಲೇಖ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಡಾ.ಪರಮೇಶ್ವರ್ ಸೇರಿದಂತೆ ರಾಜ್ಯ ಮತ್ತು ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು. ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಕಾರ್ಯಕ್ರಮಕ್ಕೆ ಕರೆಸಿ, ಪ್ರಾಮಾಣಿಕ ರಾಜಕಾರಣಿಯೆಂದು ರಾಜ್ಯ, ರಾಷ್ಟ್ರದ ನಾಯಕರು ಹೊಗಳಿದ್ದು ವಿಶೇಷವಾಗಿತ್ತು.
Ahead of election congress released ten points of manifesto for coastal region development.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm