ಅರಣ್ಯಾಧಿಕಾರಿ ರಾಘವ ಪಾಟಾಳಿಗೆ ಒಂದೂವರೆ ಕೋಟಿ ದಂಡ, ಐದು ವರ್ಷ ಶಿಕ್ಷೆ ; ಭ್ರಷ್ಟರಿಗೆ ಚಾಟಿ ಬೀಸಿದ ಕೋರ್ಟ್ 

28-01-23 12:18 pm       Mangalore Correspondent   ಕರಾವಳಿ

ಲಂಚ ಪಡೆದು ಕೋಟ್ಯಂತರ ಆಸ್ತಿ ಗಳಿಸಿದ್ದ ಭ್ರಷ್ಟ ಅರಣ್ಯಾಧಿಕಾರಿಗೆ ಒಂದೂವರೆ ಕೋಟಿ ರೂಪಾಯಿ ದಂಡ ಮತ್ತು ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ.‌ 

ಮಂಗಳೂರು, ಜ.28: ಲಂಚ ಪಡೆದು ಕೋಟ್ಯಂತರ ಆಸ್ತಿ ಗಳಿಸಿದ್ದ ಭ್ರಷ್ಟ ಅರಣ್ಯಾಧಿಕಾರಿಗೆ ಒಂದೂವರೆ ಕೋಟಿ ರೂಪಾಯಿ ದಂಡ ಮತ್ತು ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ.‌ 
 
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ಎಸ್.ರಾಘವ ಪಾಟಾಳಿ ಪ್ರಕರಣದ ಆರೋಪಿ. ಈತನಿಗೆ 5 ವರ್ಷಗಳ ಸಾದಾ ಸಜೆ ಹಾಗೂ 1 ಕೋಟಿ ಐವತ್ತು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 

Karnataka, a State Without a Trusted Watchdog

ಅಲ್ಲದೆ, ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ ಒಂದು ವರ್ಷಗಳ ಸಾದಾ ಶಿಕ್ಷೆ ನೀಡಲಾಗಿದೆ. ರಾಘವ ಪಾಟಾಳಿ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಹಿನ್ನೆಲೆ 2011ರಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. 13(1)(ಇ) ಜೊತೆಗೆ 13(2) ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಉದಯ ನಾಯಕ್, ಡಿವೈಎಸ್ಪಿ ವಿಠಲದಾಸ್ ಪೈ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. 

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿಬಿ ಜಕಾತಿ ಅವರು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ 295 ಪುಟಗಳ ತೀರ್ಪು ಪ್ರಕಟಿಸಿದ್ದಾರೆ. ಆರೋಪಿ ಎಸ್. ರಾಘವ ಪಾಟಾಳಿ ಮಂಗಳೂರಿನ ಕೊಂಚಾಡಿಯಲ್ಲಿ ವಾಸವಿದ್ದು ಬೆಳ್ತಂಗಡಿ ಸಹ್ಯಾದ್ರಿ ವಲಯದಲ್ಲಿ ಅರಣ್ಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾರೆ.

A zonal forest officer was sentenced to five years in prison and slapped a fine of Rs 1.5 lac in a disproportionate asset case. S Raghava Patali, a resident of Derebail Konchady, retired zonal forest officer of Sahyadri zone of Beltangady, is the person who is convicted by the court.