ಹಾವಿನಾಕಾರದಲ್ಲಿ ಲಂಬವಾಗಿ ಮೇಲೆದ್ದ ಭಾರೀ ಸುಳಿಗಾಳಿ ; ಕಾರ್ಕಳದಲ್ಲಿ ವಿಚಿತ್ರ ವಿದ್ಯಮಾನ ! 

28-01-23 05:53 pm       Udupi Correspondent   ಕರಾವಳಿ

ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದರ ವಿಡಿಯೋ ವೈರಲ್ ಆಗಿದೆ. ಮೈದಾನದ ಮಧ್ಯೆ ಧೂಳಿನ ಜೊತೆಗೆ ಗಿರ ಗಿರನೇ ತಿರುಗುವ ವಿಚಿತ್ರ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. 

ಉಡುಪಿ, ಜ.28: ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದರ ವಿಡಿಯೋ ವೈರಲ್ ಆಗಿದೆ. ಮೈದಾನದ ಮಧ್ಯೆ ಧೂಳಿನ ಜೊತೆಗೆ ಗಿರ ಗಿರನೇ ತಿರುಗುವ ವಿಚಿತ್ರ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. 

ಕಾರ್ಕಳದ ಗಾಂಧಿ ಮೈದಾನದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದಾಗ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಮೈದಾನದ ನಡುವೆ ಸುಳಿಗಾಳಿ ಕಾಣಿಸಿದ್ದು, ಸುರುಳಿ ಸುತ್ತುತ್ತಲೇ ಧೂಳಿನೊಂದಿಗೆ ಬಾನೆತ್ತರಕ್ಕೆ ಚಿಮ್ಮಲಾರಂಭಿಸಿದೆ. ಮೈದಾನದಲ್ಲಿದ್ದ ಕಸ, ಮಣ್ಣಿನ ಧೂಳನ್ನೆಲ್ಲ ಹೊತ್ತು ಗಾಳಿ ಸುಮಾರು ಇನ್ನೂರು ಅಡಿ ಎತ್ತರಕ್ಕೆ ಹಾವಿನಂತೆ ಲಂಬವಾಗಿ ಮೇಲೇರಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ನಿಮಿಷಗಳ ಕಾಲ ಅತ್ಯಂತ ಕುತೂಹಲದಿಂದ ಜನರು ಈ ವಿದ್ಯಮಾನವನ್ನು ವೀಕ್ಷಿಸಿದರು. 

ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿದ್ದು ಈ ಭಾಗದಲ್ಲಿ ಈ ಹಿಂದೆಯೂ ಇದೇ ರೀತಿ ಸುಳಿಗಾಳಿ ಕಂಡುಬಂದಿತ್ತು. ಅಜೆಕಾರು, ಬೆಳಪು ಪರಿಸರದಲ್ಲಿ ವರ್ಷದ ಹಿಂದೆ ಇದೇ ರೀತಿ ಸುಳಿಗಾಳಿ ಕಾಣಿಸಿಕೊಂಡಿತ್ತು.

Whirlwind in karkala gandhi maidan, video goes viral. When youths were playing cricket this was said to happen suddenly.