ದಕ್ಷಿಣ ಕನ್ನಡದಲ್ಲಿ 4 ಬಲಿ, 225 ಮಂದಿಯಲ್ಲಿ ಸೋಂಕು

04-08-20 02:17 pm       Mangalore Reporter   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ‌.‌ ಇನ್ನು ಜಿಲ್ಲೆಯಲ್ಲಿ 225 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ಮಂಗಳೂರು, ಆಗಸ್ಟ್ 4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 225 ಮಂದಿ ಪಾಸಿಟಿವ್ ಆಗಿದ್ದಾರೆ. ಇದೇ ವೇಳೆ, ನಾಲ್ಕು ಮಂದಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ. 

ಸಾವನ್ನಪ್ಪಿದ ನಾಲ್ವರೂ ಕೂಡ ಮಂಗಳೂರು ತಾಲೂಕಿನವರೇ ಆಗಿದ್ದಾರೆ. 

ಇಂದಿನ ಸೊಂಕಿತರ ಪೈಕಿ ಜ್ವರ ಲಕ್ಷಣಗಳಿದ್ದ 87 ಮಂದಿಗೆ ಸೋಂಕು ತಗಲಿದೆ. ಇನ್ನು ಸಂಪರ್ಕವೇ ಪತ್ತೆಯಾಗದ 77 ಮಂದಿಗೆ ಸೋಂಕು ಪತ್ತೆಯಾಗಿದೆ. ಪ್ರಾಥಮಿಕ ಸಂಪರ್ಕ ಹೊಂದಿದ್ದ 66 ಮಂದಿಗೆ ಸೋಂಕು ದೃಢಪಟ್ಟಿದೆ.

ಮಂಗಳೂರು ತಾಲೂಕಿನಲ್ಲಿ 147 ಮಂದಿ ಪಾಸಿಟಿವ್ ಆಗಿದ್ದರೆ, ಬೆಳ್ತಂಗಡಿ 29, ಬಂಟ್ವಾಳ 19 ಮಂದಿಗೆ ಸೋಂಕು ಆಗಿದೆ. ಇಂದು 74 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6618ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 180 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಉಡುಪಿಯಲ್ಲಿ 170 ಮಂದಿಯಲ್ಲಿ ಸೋಂಕು:

ಜಿಲ್ಲೆಯಲ್ಲಿ ಮತ್ತೆ 170 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 4970ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 2938 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 1980 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾದಿಂದಾಗಿ ಉಡುಪಿಯಲ್ಲಿ ಈವರೆಗೆ 42 ಮಂದಿ ಸಾವನ್ನಪ್ಪಿದ್ದಾರೆ.