ಬ್ರೇಕಿಂಗ್ ನ್ಯೂಸ್
30-01-23 02:59 pm Mangalore Correspondent ಕರಾವಳಿ
ಮಂಗಳೂರು, ಜ.30 : ಸುರತ್ಕಲ್ ನಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ಫಾಝಿಲ್ ಹತ್ಯೆಯನ್ನು ನಮ್ಮದೇ ಹುಡುಗರು ಮಾಡಿದ್ದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಬಂಧಿಸಬೇಕು ಎಂದು ಫಾಜಿಲ್ ತಂದೆ ಉಮರ್ ಫಾರೂಕ್ ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾರೆ.
ಕಮಿಷನರ್ ಶಶಿಕುಮಾರ್ ಅವರನ್ನು ಭೇಟಿಯಾದ ಉಮರ್ ಫಾರೂಕ್, ಶರಣ್ ಪಂಪ್ವೆಲ್ ತನ್ನ ಮಗನ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಆತನ ಮೇಲೆ ಮೊದಲೇ ಸಂಶಯವಿತ್ತು. ಈಗ ಬಹಿರಂಗ ಹೇಳಿಕೆ ನೀಡಿದ್ದು ಕೂಡಲೇ ಬಂಧಿಸಿ ಪ್ರಕರಣದ ಬಗ್ಗೆ ಮರು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉಮರ್ ಫಾರೂಕ್, ಶರಣ್ ಪಂಪ್ವೆಲ್ ನನ್ನ ಮಗನ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಎಂಟು ಮಂದಿ ಒಬ್ಬ ಹುಡುಗನನ್ನು ಹೊಡೆದಿದ್ದನ್ನು ಶೌರ್ಯ ಎಂದಿದ್ದಾನೆ. ಇದು ನಿಜವಾದ ಶೌರ್ಯ ಅಲ್ಲ, ಅದು ಹೇಡಿತನ. ಶರಣ್ ಪಂಪ್ವೆಲ್ ಗೆ ತಾಕತ್ ಇದ್ರೆ ನಾನು ಒಬ್ಬನೇ ಬರುತ್ತೇನೆ. ನನ್ನ ಜೊತೆ ಕಾದಾಡಲಿ, ನಾನು ನೋಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಶರಣ್ ಹಿಂದು, ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ. ಹಿಂದು ಬೇರೆ, ಇವರ ಹಿಂದುತ್ವ ಬೇರೆ. ಹಿಂದುತ್ವದಲ್ಲಿ ಇರುವವರು ಹಣ ತೆಗೆದುಕೊಂಡು ಕೃತ್ಯ ಮಾಡುವವರು. ಫಾಝೀಲ್ ಹತ್ಯೆಯ ರೂವಾರಿ ಶರಣ್ ಪಂಪ್ವೆಲ್ ಅನ್ನೋದು ನಿನ್ನೆಯ ಭಾಷಣದಲ್ಲಿ ಆತನೇ ಹೇಳಿದ್ದಾನೆ. ಎಡಿಜಿಪಿ ಅವರಿಗೂ ಈ ಬಗ್ಗೆ ಮನವಿ ಮಾಡಿದ್ದೇನೆ. ಪೊಲೀಸರು ಶರಣ್ ಪಂಪ್ವೆಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಬಹುದಿತ್ತು. ಆದರೆ ಪೊಲೀಸರಿಗೂ ಒತ್ತಡ ಇರಬಹುದು, ಸುರತ್ಕಲ್ ಠಾಣೆಗೆ ತೆರಳಿ ದೂರು ನೀಡಲು ಕಮೀಷನರ್ ಹೇಳಿದ್ದಾರೆ. ದೂರು ಕೊಡುತ್ತೇನೆ. ಕೊಲೆ ಪ್ರಕರಣವನ್ನು ಸಂಪೂರ್ಣ ಮರು ತನಿಖೆ ಮಾಡಬೇಕು. ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಿ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದರು. ಆದರೆ ಕೊಲೆಯ ಸೂತ್ರಧಾರರು ಯಾರೆಂದು ಪತ್ತೆ ಮಾಡಿರಲಿಲ್ಲ. ಶರಣ್ ಹೇಳಿಕೆಯಿಂದ ಈತನೇ ಸೂತ್ರಧಾರ ಎನ್ನುವುದು ತಿಳಿದುಬರುತ್ತಿದೆ. ಬಂಧಿಸಿ ತನಿಖೆ ನಡೆಸಿದರೆ ನೈಜಾಂಶ ಹೊರಬಹುದು ಎಂದು ಫಾಝಿಲ್ ತಂದೆ ಉಮರ್ ಫಾರೂಕ್ ಹೇಳಿದ್ದಾರೆ.
ಕರಸೇವಕರ ಜೀವಂತ ದಹನಕ್ಕಾಗಿ ಗುಜರಾತ್ ನರಮೇಧ ; ಹಿಂದುಗಳ ಪರಾಕ್ರಮ ಎಂದು ಸಮರ್ಥಿಸಿದ ಶರಣ್ ಪಂಪ್ವೆಲ್ !
Surathkal Fazil murder case, Fazil father slams Sharan Pumpwell over provocative statement stating that Fazils murder was a revenge murder for Praveen Nettaru Murder in Sullia. Speaking to Media here Fazil Father stated that Sharan Pumpwell has rejoiced over my sons death. Father alleged that Sharan is the Supari killer and master mind of Fazils killing.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm