ಬ್ರೇಕಿಂಗ್ ನ್ಯೂಸ್
30-01-23 10:04 pm Mangalore Correspondent ಕರಾವಳಿ
ಮಂಗಳೂರು, ಜ.30: ಒಂದು ವರ್ಷದ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಂಗಳೂರಿಗೆ ಬಂದಿದ್ದ ಸುನಿಲ್ ಕುಮಾರ್ ಅವರಲ್ಲಿ ಪತ್ರಕರ್ತರು ಕೇಳಿದ ಮೊದಲ ಪ್ರಶ್ನೆ ತುಳು ಭಾಷೆಯನ್ನು ಅಧಿಕೃತ ಮಾಡುವ ಪ್ರಸ್ತಾಪ ಎಲ್ಲಿ ಮುಟ್ಟಿದೆ ಎನ್ನುವುದಾಗಿತ್ತು. ಉತ್ತರ ನೀಡಿದ್ದ ಸಚಿವರು, ತುಳು ಭಾಷೆ ಅಧಿಕೃತ ಮಾಡುವುದರ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಕಾನೂನು ಇಲಾಖೆಯಲ್ಲಿದೆ. ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗುವುದು ಎಂದಿದ್ದರು.
ಆನಂತರ, ಎರಡು ಮೂರು ಬಾರಿ ಮಂಗಳೂರಿಗೆ ಬಂದಿದ್ದಾಗಲೂ ಸ್ವತಃ ತುಳುವನಾಗಿರುವ ಕಾರ್ಕಳದ ಸುನಿಲ್ ಕುಮಾರ್ ಅವರಲ್ಲಿ ಪತ್ರಕರ್ತರು ಅದೇ ಪ್ರಶ್ನೆ ಮುಂದಿಟ್ಟಿದ್ದರು. ಉಡುಪಿಯಲ್ಲಿಯೂ ಇದೇ ರೀತಿಯ ಪ್ರಶ್ನೆ ಎದುರಾಗಿತ್ತು. ಆದರೆ ಸಚಿವ ಸುನಿಲ್ ಕುಮಾರ್ ಉತ್ತರ ಒಂದೇ ಆಗಿತ್ತು. ತಜ್ಞರ ವರದಿ ಸಲ್ಲಿಕೆಯಾಗಿದೆ, ಸದ್ಯ ಕಾನೂನು ಇಲಾಖೆಯಲ್ಲಿದೆ ಎನ್ನುವುದಷ್ಟೇ ಆಗಿತ್ತು. ಆದರೆ ವಿಚಿತ್ರ ಏನಂದ್ರೆ, ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಜನವರಿ 30ರಂದು ತುಳು ಭಾಷೆ ಅಧಿಕೃತಗೊಳಿಸುವ ಬಗ್ಗೆ ಅಧ್ಯಯನ ವರದಿ ಸಲ್ಲಿಸುವ ಬಗ್ಗೆ ತಜ್ಞರ ಸಮಿತಿ ನೇಮಕ ಮಾಡಿರುವುದನ್ನು ಪ್ರಕಟಣೆ ನೀಡಿದ್ದಾರೆ.
ಸಮಿತಿಯಲ್ಲಿ ಮೂಡುಬಿದ್ರೆ ಆಳ್ವಾಸ್ ಪ್ರತಿಷ್ಠಾನದ ಡಾ.ಮೋಹನ ಆಳ್ವ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮಂಗಳೂರಿನ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ಮಂಗಳೂರು ವಿವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಾಧವ ಕೋಣಾಜೆ, ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಪೃಥ್ವಿ ಕವತ್ತಾರು ಮಣಿಪಾಲ, ವಸಂತ ಶೆಟ್ಟಿ ಉಡುಪಿ, ಹಿರಿಯ ಕಥೆಗಾರ ಚಂದ್ರಹಾಸ ಕಣಂತೂರು, ಅಲೋಶಿಯಸ್ ಪ್ರೌಢಶಾಲೆಯ ಶಿಕ್ಷಕಿ ಸಂಧ್ಯಾ ಆಳ್ವ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯೆಂದು ಸಮಿತಿಗೆ ಸೇರಿಸಲಾಗಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಕೆಆರ್ ರಮೇಶ್ ಕುಮಾರ್ ಜನವರಿ 11ರಂದು ಸಹಿ ಮಾಡಿ, ಸಮಿತಿಯು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದ್ದಾಗಿ ಉಲ್ಲೇಖ ಇದೆ.
ಸುನಿಲ್ ಕುಮಾರ್ ಮೊದಲ ಬಾರಿಗೆ ಸಚಿವರಾಗಿ ಮಂಗಳೂರಿನ ಪ್ರೆಸ್ ಕ್ಲಬ್ ಗೆ ಬಂದಿದ್ದಾಗ ಸಂವಾದ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ತುಳು ಭಾಷೆಯನ್ನು ಅಧಿಕೃತಗೊಳಿಸುವ ಮಾನದಂಡವಾಗಿ ತಜ್ಞರ ಸಮಿತಿಯನ್ನು ರಚಿಸಬೇಕಾಗಿತ್ತು ಎಂದು ಪತ್ರಕರ್ತರು ಗಮನ ಸೆಳೆದಾಗ, ಅದೆಲ್ಲ ಮುಗಿದಿದೆ. ತಜ್ಞರ ಸಮಿತಿ ವರದಿ ಕೊಟ್ಟು ಅದನ್ನು ಅಂಗೀಕರಿಸಿ ಸದ್ಯಕ್ಕೆ ಕಾನೂನು ಇಲಾಖೆಯಲ್ಲಿದೆ ಎಂದು ಪುಂಗಿ ಊದುವ ಕೆಲಸ ಮಾಡಿದ್ದರು. ಸಚಿವ ಸುನಿಲ್ ಕುಮಾರ್ ಅವರಿಗೆ ತುಳು ಭಾಷೆಯನ್ನು ಅಧಿಕೃತಗೊಳಿಸಬೇಕು ಎನ್ನುವ ಪ್ರಶ್ನೆ ಮುಂದಿಟ್ಟಾಗ ಅವರಿಗೆ ಆಸಕ್ತಿಯೇ ಇಲ್ಲ ಎನ್ನುವುದು ಮನದಟ್ಟಾಗಿತ್ತು. ಈ ಬಗ್ಗೆ ಟ್ವಿಟರ್ ಅಭಿಯಾನ ಆಗ್ತಿದೆ ಎಂದಾಗಲೂ, ಅವರೆಲ್ಲ ಮಾಡ್ತಾರೆ ಬಿಡಿ, ಅಭಿಯಾನ ಮಾಡಿದ ಮಾತ್ರಕ್ಕೆ ಅಧಿಕೃತ ಭಾಷೆ ಆಗಲ್ಲ ಎಂದು ಮೂಗು ಮುರಿದಿದ್ದರು. ತುಳುವರೇ ಆದ ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿದ್ದಕ್ಕೆ ಈ ಭಾಗದ ಜನರು ನಿರೀಕ್ಷೆ ಇಟ್ಟಿದ್ದರು. ಆದರೆ ತನಗೆ ಮಾಹಿತಿಯೇ ಇಲ್ಲದಿದ್ದರೂ, ಇಲ್ಲಿ ವರೆಗೂ ಕಾನೂನು ಇಲಾಖೆಯಲ್ಲಿದೆ ಎಂದು ಸುಳ್ಳು ಹೇಳಿಕೊಂಡೇ ಬಂದಿದ್ದರು ಎನ್ನೋದು ಈಗ ತಜ್ಞರ ಸಮಿತಿಯ ನೇಮಕದೊಂದಿಗೆ ಅಧಿಕೃತ ಆಗಿದೆ.
ಚುನಾವಣೆಗೆ ಇನ್ನೇನು ಮೂರು ತಿಂಗಳು ಇರುವಾಗ ತಜ್ಞರ ಸಮಿತಿ ನೇಮಕಗೊಳಿಸಿ ವಾರದೊಳಗೆ ವರದಿ ಸಲ್ಲಿಕೆಗೆ ಹೇಳುತ್ತಿದ್ದಾರೆ. ಸರ್ಕಾರ ನಡೆಸುವ ಮಂದಿಗೆ ತುಳು ಭಾಷೆ ಹೆಸರಲ್ಲಿ ರಾಜಕೀಯ ಮಾಡಬೇಕು ಅಷ್ಟೇ. ಕಳೆದ ಬಾರಿ ಕಾಸರಗೋಡಿನ ಸಂಸದ ಉಣ್ಣಿತ್ತಾನ್, ಸಂಸತ್ತಿನಲ್ಲಿ ತುಳು ಭಾಷೆಯ ಬಗ್ಗೆ ಪ್ರಶ್ನೆ ಮುಂದಿಟ್ಟಾಗಲೂ ಪ್ರಾದೇಶಿಕ ಭಾಷೆಗೆ ಶಾಸ್ತೀಯ ಸ್ಥಾನ ನೀಡಲು ಅದರದ್ದೇ ಆದ ಮಾನದಂಡ ಇದೆ. ಅದಕ್ಕೆ ಮುಖ್ಯವಾಗಿರುವುದು ಆಯಾ ರಾಜ್ಯಗಳ ಅಧಿಕೃತ ಭಾಷೆ ಎನ್ನುವ ಮುದ್ರೆ ಅನ್ನುವುದನ್ನು ಸಂಸತ್ತಿನಲ್ಲಿ ಗೃಹ ಸಚಿವಾಲಯ ತಿಳಿಸಿತ್ತು. ಹೀಗಿದ್ದರೂ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ಸೇರಿ ಅಂದಾಜು ಕೋಟಿಗೂ ಹೆಚ್ಚು ಜನರು ಮಾತನಾಡುವ ತುಳು ಭಾಷೆ ಬಗ್ಗೆ ಕರಾವಳಿಯ ಜನಪ್ರತಿನಿಧಿಗಳು ಮಾತ್ರ ಅಸಡ್ಡೆಯನ್ನೇ ಹೊತ್ತುಕೊಂಡು ಬಂದಿದ್ದಾರೆ. ಈಗ ಚುನಾವಣೆ ಕಾಲಕ್ಕೆ ತಜ್ಞರ ಸಮಿತಿ ಮಾಡಿ ಮತ್ತೊಂದು ನಾಟಕಕ್ಕೆ ರೆಡಿಯಾಗಿದ್ದಾರೆ.
The State government has constituted a committee headed by Mohan Alva, founder of Alva’s Education Foundation and Alva’s Institute of Engineering and Technology, Moodabidri, to declare Tulu language as the second official language of Karnataka. The committee has been asked to give a report on the matter in a week, tweeted Kannada and Culture Minister V. Sunil Kumar. Tulu is widely spoken in Dakshina Kannada and Udupi districts in coastal Karnataka.
16-04-25 06:42 pm
Bangalore Correspondent
CM Siddaramaiah, Lokayukta, Muda: ಸಿಎಂ ಸಿದ್ದರ...
15-04-25 08:44 pm
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
16-04-25 03:54 pm
HK News Desk
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
16-04-25 02:02 pm
Mangalore Correspondent
Panambur Bike Accident, Mangalore: ಪಣಂಬೂರಿನಲ್...
16-04-25 01:29 pm
NIA, Praveen Nettaru: ಪ್ರವೀಣ್ ನೆಟ್ಟಾರು ಕೊಲೆ ಪ...
15-04-25 09:57 pm
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm