ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನ ; ಯುವ ಜೆಡಿಎಸ್ ಕಾರ್ಯಕರ್ತರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಗೆ ಕರಿ ಪತಾಕೆ, ಘೆರಾವ್ 

31-01-23 04:58 pm       Mangalore Correspondent   ಕರಾವಳಿ

​​​​​​ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲು ವಿರುದ್ಧ ದ.ಕ. ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ನಗರದ ಸರ್ಕಿಟ್ ಹೌಸ್ ಬಳಿ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಲಾಯಿತು. 

ಮಂಗಳೂರು, ಜ.31 : ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲು ವಿರುದ್ಧ ದ.ಕ. ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ನಗರದ ಸರ್ಕಿಟ್ ಹೌಸ್ ಬಳಿ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಲಾಯಿತು. 

ಈ ವೇಳೆ ಮಾತನಾಡಿದ ಅಕ್ಷಿತ್ ಸುವರ್ಣ, ರಾಜ್ಯದ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿರುವ ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿರುವ ನಳಿನ್ ವರ್ತನೆ ಖಂಡನೀಯ. ದೇಶದ ಪ್ರಧಾನಿಯಾಗಿ ಅವರು ನೀಡಿರುವ ಕೊಡುಗೆಯನ್ನು ನಳಿನ್ ಮರೆತಿರಬಹುದು. ಆದರೆ ದೇಶದ ಜನರು ಮರೆತಿಲ್ಲ. ರಾಜಕೀಯದಲ್ಲಿ ತನ್ನದೇ ಕೊಡುಗೆ ನೀಡಿರುವ ದೇವೆಗೌಡರ ಕುಟುಂಬ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಲಘುವಾಗಿ ಮಾತನಾಡಿದ್ದು, ದೇವೆಗೌಡರ ಕೊಡುಗೆಯ ಕನಿಷ್ಠ ಒಂದು ಪಾಲು ಸೇವೆಯನ್ನು ನೀಡದ ಇವರಿಗೆ ಗೌಡರ ಕುಟುಂಬದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು. 

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರನ್ನು ಖರೀದಿ ಮಾಡಿ ಅನೈತಿಕವಾಗಿ ಸರಕಾರ ರಚನೆ ಮಾಡಿದ್ದು ಬಿಟ್ಟರೆ ಇವರ ಸಾಧನೆ ಬೇರೆ ಏನು ಇಲ್ಲ. ಕೂಡಲೇ ಅವರು ದೇವೇಗೌಡರ ಕ್ಷಮೆಯನ್ನು ಯಾಚಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು. 

ಯುವ ಜನತಾದಳ (ಜಾ) ದ.ಕ. ಜಿಲ್ಲೆ ಇದರ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ಹಾಗು ಜಿಲ್ಲಾ ಸಂಘಟನಾ ಉಸ್ತುವಾರಿಯಾದ ರತೀಶ್ ಕರ್ಕೇರ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಮೊಹಮ್ಮದ್ ಅಸಿಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್ ಬಂದರು ಹಾಗೂ ಯುವ ಪಧಾದಿಕಾರಿಗಳಾದ ನಿತೇಶ್ ಪೂಜಾರಿ, ವಿನಯ್, ಗೌತಮ್, ವಿನಿತ್, ರಿನಿತ್, ನಿಶಾಂತ್, ಗಣೇಶ್, ಪ್ರದೀಪ್ ಕೀರ್ತಿ, ಪವನ್, ಧನುಷ್, ಸುಶಾಂತ್, ವಿನಯ್, ಜಯದೀಪ್, ಧನುಷ್ ಪೂಜಾರಿ ಮುಂತಾದವರು ಪಾಲ್ಗೊಂಡಿದ್ದರು.‌

Nalin Kateel deformative statement on Devegowda family, JDS members gherao kateel near Circuit house in Mangalore holding black flag.Youth JD(S) of Dakshina Kannada held black flag protest near Circuit House in the city against MP and BJP state president Nalin Kumar Kateel, under the leadership of Akshit Suvarna, president of youth JD(S), against his derogatory comments on the family of JD(S) supremo Deve Gowda.