ಚುನಾವಣೆ ಹಿನ್ನೆಲೆ ; ಮಂಗಳೂರಿನ ಠಾಣೆಗಳಿಗೆ ಹೊಸ ಪಿಎಸ್ಐ ನಿಯೋಜನೆ, ಕೋಮು ಸೂಕ್ಷ್ಮ ಜಾಗಕ್ಕೆ ಮಹಿಳಾಮಣಿಗಳಿಗೆ ಮಣೆ! ಕೈಯಾಡಿಸಿದ ಕ್ಲಬ್ ಉಸ್ತುವಾರಿ !  

31-01-23 08:11 pm       Mangalore Correspondent   ಕರಾವಳಿ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿದ್ದು, ಆ ಜಾಗಕ್ಕೆ ಐಜಿಪಿ ಪಶ್ಚಿಮ ವಲಯ ವ್ಯಾಪ್ತಿಯ ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಎಸ್ಐಗಳನ್ನು ನಿಯೋಜನೆ ಮಾಡಲಾಗಿದೆ.

ಮಂಗಳೂರು, ಜ.31: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿದ್ದು, ಆ ಜಾಗಕ್ಕೆ ಐಜಿಪಿ ಪಶ್ಚಿಮ ವಲಯ ವ್ಯಾಪ್ತಿಯ ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಎಸ್ಐಗಳನ್ನು ನಿಯೋಜನೆ ಮಾಡಲಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದ ಶುಭಕರ ಅವರನ್ನು ಬರ್ಕೆ ಪೊಲೀಸ್ ಠಾಣೆಗೆ, ಪಡುಬಿದ್ರಿ ಠಾಣೆಯಲ್ಲಿದ್ದ ಪ್ರಕಾಶ್ ಸಾಲಿಯಾನ್ ಮಂಗಳೂರು ಸಂಚಾರ ಉತ್ತರ ಠಾಣೆ, ಶಂಕರನಾರಾಯಣ ಠಾಣೆಯಲ್ಲಿದ್ದ ಸುದರ್ಶನ್ ಬಿ.ಎನ್ ಅವರನ್ನು ಉರ್ವಾ ಠಾಣೆ, ಉತ್ತರ ಕನ್ನಡ ಜಿಲ್ಲೆಯ ಮಂಕಿ ಠಾಣೆಯ ಮುಷಾಹಿದ್ ಅಹ್ಮದ್ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆ, ಗೋಕರ್ಣ ಠಾಣೆಯ ಸುಧಾ ಟಿ. ಅಘನಾಶಿನಿ ಪಣಂಬೂರು ಠಾಣೆಗೆ, ಚಿತ್ತಾಕುಲ ಠಾಣೆಯ ಕಲ್ಪನಾ ಬಂಗ್ಲೆ ಕಂಕನಾಡಿ ನಗರ ಠಾಣೆಗೆ ವರ್ಗಾವಣೆಯಾಗಿದ್ದಾರೆ.

Anulment of PSI exams: Candidates approach Tribunal | udayavani

ಹೊನ್ನಾವರ ಠಾಣೆಯ ಗಣೇಶ್ ಎಚ್ ನಾಯಕ್ ಕೊಣಾಜೆ ಠಾಣೆಗೆ, ಜೋಯಿಡಾದಲ್ಲಿದ್ದ ಮಹದೇವಿ ನಾಯ್ಕೋಡಿ ಮಂಗಳೂರು ಗ್ರಾಮಾಂತರ ಠಾಣೆಗೆ, ಶಿರಸಿ ಹೊಸ ಮಾರ್ಕೆಟ್ ಠಾಣೆಯ ಮಾಲಿನಿ ಹಂಸಭಾವಿ ಮಂಗಳೂರು ಗ್ರಾಮಾಂತರ ಠಾಣೆಗೆ, ಹೊನ್ನಾವರ ಸಂಚಾರಿ ಠಾಣೆಯ ಮಂಜೇಶ್ವರ್ ಚಂದಾವರ್ ಉಳ್ಳಾಲ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಹೊನ್ನಾವರ ಠಾಣೆಯ ಸಾವಿತ್ರಿ ನಾಯಕ್ ಮೂಡುಬಿದ್ರೆ ಠಾಣೆ, ಯಲ್ಲಾಪುರ ಠಾಣೆಯ ಶ್ಯಾಮ್ ಪಾವಸ್ಕರ್ ಮಂಗಳೂರು ಪೂರ್ವ(ಕದ್ರಿ), ತರೀಕೆರೆ ಠಾಣೆಯ ಚಂದ್ರಮ್ಮ ವೈಎನ್ ಮಂಗಳೂರು ಸಂಚಾರ ಉತ್ತರ ಠಾಣೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಮುದ್ದಪ್ಪ ಬಿ.ಇ. ಮಂಗಳೂರು ಸಂಚಾರಿ ದಕ್ಷಿಣ ಠಾಣೆಗೆ, ಎನ್ಆರ್ ಪುರ ಠಾಣೆಯ ಜ್ಯೋತಿ ಎನ್.ಎ. ಕಂಕನಾಡಿ ನಗರ ಪೊಲೀಸ್ ಠಾಣೆಗೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಗೇಣೋಜಿ ಕೆ.ಟಿ. ಕಂಕನಾಡಿ ನಗರ ಠಾಣೆ, ಆಲೂರು ಠಾಣೆಯ ಕೀರ್ತಿ ಕುಮಾರ್ ಎಚ್.ಡಿ ಮೂಡುಬಿದಿರೆ ಠಾಣೆ, ಬೀರೂರು ಠಾಣೆಯ ಬಸವರಾಜಪ್ಪ ಮಂಗಳೂರು ಸಂಚಾರಿ ಪೂರ್ವ ಠಾಣೆ, ಚಿಕ್ಕಮಗಳೂರು ನಗರ ಠಾಣೆಯ ಸತೀಶ್ ಕೆ.ಎಸ್. ಮಂಗಳೂರು ಸಂಚಾರಿ ಪಶ್ಚಿಮ ಠಾಣೆ, ಚಿಕ್ಕಮಗಳೂರು ಜಿಲ್ಲೆ ಪಂಚನಹಳ್ಳಿ ಠಾಣೆಯಲ್ಲಿದ್ದ ಲೀಲಾವತಿ ಆರ್. ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.

ಎರಡು ದಿನಗಳ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಪಿಎಸ್ಐ ನಿಯೋಜನೆ ಬಗ್ಗೆ ಸಭೆ ನಡೆದಿತ್ತು. ಸಭೆಯಲ್ಲಿ ಮಂಗಳೂರಿನಲ್ಲಿ ಕ್ಲಬ್ ಉಸ್ತುವಾರಿ ಹೊತ್ತವರು ಕೂಡ ಭಾಗವಹಿಸಿದ್ದರು ಅನ್ನುವುದು ಮೂಲಗಳಿಂದ ತಿಳಿದುಬಂದಿತ್ತು.  ಅವರಿಗೆ ಬೇಕಾದ ರೀತಿ ಪಿಎಸ್ಐ ನಿಯೋಜನೆ ಆಗಿದೆ ಎನ್ನಲಾಗುತ್ತಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 19 ಕ್ಲಬ್ ಕಡೆಯಿಂದ ಪೊಲೀಸ್ ಠಾಣೆಗಳಿಗೆ ಮಾಮೂಲಿ ಹೋಗುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಕ್ಲಬ್ ನಿರ್ವಹಣೆಗೆ ತೊಂದರೆ ಆಗದಿರಲಿ ಎನ್ನುವ ಮುಂಜಾಗ್ರತೆಯಿಂದ ತಮಗೆ ಬೇಕಾದವರನ್ನು ನಿಯೋಜನೆ ಮಾಡಿಕೊಂಡಿದ್ದಾರೆ ಅನ್ನುವುದು ಒಳಗಿನ ಮಾಹಿತಿ. ಉಳ್ಳಾಲ, ಕಂಕನಾಡಿ ಗ್ರಾಮಾಂತರ ಕೋಮು ಸೂಕ್ಷ್ಮ ಸ್ಥಿತಿಯುಳ್ಳ ಠಾಣೆಗಳಾಗಿದ್ದರೂ, ಅಲ್ಲಿಗೆ ಮಹಿಳಾ ಎಸ್ಐಗಳನ್ನು ನಿಯೋಜನೆ ಮಾಡಲಾಗಿದೆ. ಉಳಿದಂತೆ, ಮಂಗಳೂರಿನ 20 ಠಾಣೆಗಳ ಪೈಕಿ 9 ಕಡೆ ಮಹಿಳಾ ಪಿಎಸ್ಐಗಳಿಗೆ ಆದ್ಯತೆ ನೀಡಲಾಗಿದೆ.

Karnataka upcoming Elections, New PSIs appointed to every police stations in Mangalore.