ಉತ್ತರ, ದಕ್ಷಿಣದ ಬಳಿಕ ಕರಾವಳಿಯತ್ತ ಕಣ್ಣು ನೆಟ್ಟ ಅಮಿತ್ ಷಾ ; ಫೆ.11ರಂದು ಪುತ್ತೂರಿನಲ್ಲಿ ಕ್ಯಾಂಪ್ಕೋ ಸಹಕಾರಿ ಸಮಾವೇಶ, ಒಂದು ಲಕ್ಷ ಜನ ಸೇರಿಸಲು ಸಿದ್ಧತೆ 

01-02-23 11:23 am       Mangalore Correspondent   ಕರಾವಳಿ

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಪ್ರವಾಸದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರಾವಳಿಯತ್ತ ಕಣ್ಣಿಟ್ಟಿದ್ದಾರೆ. ಫೆ.11ರಂದು ಅಮಿತ್ ಷಾ ಪುತ್ತೂರಿಗೆ ಆಗಮಿಸಲಿದ್ದು ಕ್ಯಾಂಪ್ಕೋ ನೇತೃತ್ವದಲ್ಲಿ ನಡೆಯುವ ಬೃಹತ್ ಸಹಕಾರಿ ಸಮಾವೇಶದಲ್ಲಿ  ಪಾಲ್ಗೊಳಲಿದ್ದಾರೆ.

ಪುತ್ತೂರು, ಫೆ.1: ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಪ್ರವಾಸದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರಾವಳಿಯತ್ತ ಕಣ್ಣಿಟ್ಟಿದ್ದಾರೆ. ಫೆ.11ರಂದು ಅಮಿತ್ ಷಾ ಪುತ್ತೂರಿಗೆ ಆಗಮಿಸಲಿದ್ದು ಕ್ಯಾಂಪ್ಕೋ ನೇತೃತ್ವದಲ್ಲಿ ನಡೆಯುವ ಬೃಹತ್ ಸಹಕಾರಿ ಸಮಾವೇಶದಲ್ಲಿ  ಪಾಲ್ಗೊಳಲಿದ್ದಾರೆ. ಕಾರ್ಯಕ್ರಮದಲ್ಲಿ 1 ಲಕ್ಷ ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆಸಿದೆ.  

ಕ್ಯಾಂಪ್ಕೋ ಸಂಸ್ಥೆಯ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರು ಆಗಮಿಸುತ್ತಿದ್ದಾರೆ. ಹೀಗಾಗಿ  ಕ್ಯಾಂಪ್ಕೋ ನೇತೃತ್ವದಲ್ಲಿ ಬೃಹತ್ ಸಹಕಾರಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಫೆ 11 ರಂದು ಸಂಜೆ 3 ಗಂಟೆಗೆ ಪುತ್ತೂರಿನ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ ಆವರಣದ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಅದೇ ದಿನ ಗೃಹ ಸಚಿವರು  ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೂ  ಭೇಟಿ  ನೀಡುವ ಕಾರ್ಯಕ್ರಮವಿದೆ. 

ಸದ್ಯಕ್ಕೆ ಅಮಿತ್ ಷಾ ಕಾರ್ಯಕ್ರಮದ ಸಂಪೂರ್ಣ ಪಟ್ಟಿ ಸಿದ್ಧವಾಗಿಲ್ಲ. ಸಹಕಾರಿ ಸಚಿವರೂ ಆಗಿರುವುದರಿಂದ ಸಹಕಾರಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 5.30ಕ್ಕೆ ವಿಶೇಷ ವಿಮಾನದಲ್ಲಿ ನಿರ್ಗಮಿಸಲಿದ್ದಾರೆ. ಅಂತಿಮ ಹಂತದ ಬದಲಾವಣೆಯಿದ್ದರೆ ಕೇಂದ್ರ ಗೃಹ ಸಚಿವಾಲಯದಿಂದ ಪರಿಷ್ಕೃತ ಪ್ರವಾಸ ಪಟ್ಟಿ ಬರಬಹುದು ಎಂದು ಪುತ್ತೂರು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ರೈತರು ಮತ್ತು ಕಾರ್ಯಕರ್ತರನ್ನು ಸೇರಿಸುವ ನಿಟ್ಟಿನಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದ ಪ್ರತೀ ಗ್ರಾಮ ಮಟ್ಟದಲ್ಲೂ ಅಭಿಯಾನ ನಡೆಯಲಿದೆ ಎಂದವರು ತಿಳಿಸಿದ್ದಾರೆ.

BJP Amith Shah to visit Puttur on Feb 11, one lakh people expected.