ಹಿಂದುತ್ವ ಮುಂದಿಟ್ಟು ಉಳ್ಳಾಲ ಗೆಲ್ಲುತ್ತೇವೆ ; ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಸಚಿವ ಸುನಿಲ್ 

01-02-23 07:33 pm       Mangalore Correspondent   ಕರಾವಳಿ

ಕೇಂದ್ರ ಮತ್ತು ರಾಜ್ಯ ಸರಕಾರದ ಅಭಿವೃದ್ಧಿ ಮತ್ತು ಹಿಂದುತ್ವವನ್ನ ಮುಂದಿಟ್ಟು ಈ ಬಾರಿ ಉಳ್ಳಾಲ ವಿಧಾನಸಭಾ ಕ್ಷೇತ್ರ ಗೆಲ್ಲುವುದರೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಉಳ್ಳಾಲ, ಫೆ.1 : ಕೇಂದ್ರ ಮತ್ತು ರಾಜ್ಯ ಸರಕಾರದ ಅಭಿವೃದ್ಧಿ ಮತ್ತು ಹಿಂದುತ್ವವನ್ನ ಮುಂದಿಟ್ಟು ಈ ಬಾರಿ ಉಳ್ಳಾಲ ವಿಧಾನಸಭಾ ಕ್ಷೇತ್ರ ಗೆಲ್ಲುವುದರೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಬಿಜೆಪಿ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಅವರು ಬುಧವಾರ ಉಳ್ಳಾಲದ ವಿವಿಧ ಬೂತ್ ಗಳಿಗೆ ಭೇಟಿ ನೀಡಿ ಕಾರ್ಯಕರ್ತರಿಗೆ ಉತ್ಸಾಹ, ಸ್ಥೈರ್ಯ ತುಂಬಿದರು. ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ವಿಜಯ ಸಂಕಲ್ಪ ಅಭಿಯಾನದ ಮೂಲಕ ಭಾರತವನ್ನೇ ಗೆಲ್ಲಲು ಹೊರಟ ಬಿಜೆಪಿಗೆ ಈ ಬಾರಿ ಉಳ್ಳಾಲ ಕ್ಷೇತ್ರದ ಗೆಲುವೇ ಟಾರ್ಗೆಟ್ ಆಗಿದೆ. ಒಗ್ಗಟ್ಟಿನ ಮಂತ್ರ, ಅಭಿವೃದ್ಧಿ, ಹಿಂದುತ್ವ ಮುಂದಿಟ್ಟು ಉಳ್ಳಾಲ ಕ್ಷೇತ್ರವನ್ನ ಗೆಲ್ಲಲು ಎಲ್ಲಾ ತಂತ್ರಗಾರಿಕೆಯನ್ನ ಆರಂಭಿಸಿದ್ದೇವೆ ಎಂದರು.

ಬೆಳಿಗ್ಗೆ ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗಜ್ಜ-ಕೊರಗಜ್ಜ ಉದ್ಭವ ಶಿಲೆಯ ಆದಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸುನಿಲ್ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಉಳ್ಳಾಲ ಮೊಗವೀರಪಟ್ಣದ ವ್ಯಾಘ್ರ ಚಾಮುಂಡಿ ದೇವಸ್ಥಾನ, ಉಳಿಯ ಉಳ್ಳಾಲ್ದಿ ದೈವಸ್ಥಾನ, ಉಳ್ಳಾಲ ಭಗವತಿ ಕ್ಷೇತ್ರ, ತೊಕ್ಕೊಟ್ಟು ಒಳಪೇಟೆ, ಕೋಟೆಕಾರು ಬಲ್ಯದ ಎಸ್ ಸಿ ಕಾಲೋನಿ, ಕೊಣಾಜೆ ಗ್ರಾಮ ಚಾವಡಿಯ ನಾರಾಯಣ ಗುರು ಮಂದಿರ, ಪಜೀರ್ ಗ್ರಾಮಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರಲ್ಲದೆ ಮನೆ, ಮನೆಗಳಿಗೆ ಭೇಟಿ ನೀಡಿ ಕೇಂದ್ರ, ರಾಜ್ಯ ಬಿಜೆಪಿ ಸರಕಾರದ ಸಾಧನೆಗಳ ಕರಪತ್ರಗಳನ್ನ ಹಂಚಿ ಗೋಡೆಗಳಿಗೆ ವಿಜಯ ಸಂಕಲ್ಪ ಅಭಿಯಾನದ ಸ್ಟಿಕ್ಕರ್ ಗಳನ್ನ ಅಂಟಿಸಿದರು. 

ಪಕ್ಷದ ಕಾರ್ಯಕರ್ತರಲ್ಲದೆ ಜನಸಾಮಾನ್ಯರು ತಮ್ಮ ಅಹವಾಲುಗಳನ್ನ ಸಚಿವರಿಗೆ ಸಲ್ಲಿಸಿದರು. ಉಳ್ಳಾಲದ ಮೊಗವೀರ ಮುಖಂಡರಾದ ಭರತ್ ಕುಮಾರ್ ಸಚಿವರಲ್ಲಿ ಮಾತನಾಡಿ ಅನೇಕ ವರುಷಗಳಿಂದ‌ ಮೀನುಗಾರರು ಎದುರಿಸುತ್ತಿರುವ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಲಹೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರಮುಖರಾದ ಕಸ್ತೂರಿ ಪಂಜ, ರಣದೀಪ್ ಕಾಂಚನ್, ಯಶವಂತ್ ಅಮೀನ್, ರವಿಶಂಕರ್ ಸೋಮೇಶ್ವರ, ದಯಾನಂದ ತೊಕ್ಕೊಟ್ಟು, ಜೀವನ್ ತೊಕ್ಕೊಟ್ಟು, ಪುರುಷೋತ್ತಮ ಕಲ್ಲಾಪು, ಹೇಮಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Minister for Kannada and Culture V Sunil Kumar has said that the BJP will return to power in the state by winning the Ullal assembly seat this time on the basis of development and Hindutva of the central and state governments.