ಬ್ರೇಕಿಂಗ್ ನ್ಯೂಸ್
06-02-23 05:39 pm Mangalore Correspondent ಕರಾವಳಿ
ಮಂಗಳೂರು, ಫೆ.6 : ನಾವು ನರೇಂದ್ರ ಮೋದಿಯಂತೆ ಸುಳ್ಳು ಹೇಳುವುದಿಲ್ಲ. ಯಾರೊಬ್ಬರ ಖಾತೆಗೂ 15 ಲಕ್ಷ ಹಣ ಬಂದಿಲ್ಲ. ಜನಧನ್ ಖಾತೆಗೆ ಈವರೆಗೂ 500 ರೂ. ಬಂದಿಲ್ಲ. ಮೋದಿ ಎಲ್ಲ ಹಣವನ್ನು ಅದಾನಿಗೆ ನೀಡಿದ್ದಾರೆ. ಅದಾನಿ 75 ಸಾವಿರ ಕೋಟಿ ರೂಪಾಯಿ ಮೋದಿಯಿಂದ ಪಡೆದು ಗುಳುಂ ಮಾಡಿದ್ದಾನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಮೂಲ್ಕಿ - ಮೂಡಬಿದರೆ ವಿಧಾನಸಭಾ ಕ್ಷೇತ್ರದ ಮುಲ್ಕಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಹರಿಪ್ರಸಾದ್ ಹರಿತ ಮಾತುಗಳಿಂದ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಬಡವರ ಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿಲ್ಲ. ತಮ್ಮ ಸ್ನೇಹಿತರನ್ನು ದೊಡ್ಡ ಉದ್ಯಮಿಗಳಾಗಿಸಲು ಮಾತ್ರ ಯೋಜನೆ ಹಮ್ಮಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನಸಾಮಾನ್ಯರಿಗೆ ಮನೆ ನಡೆಸುವುದಕ್ಕೂ ಸಂಕಷ್ಟ ಎದುರಾಗುತ್ತಿದೆ. ಆದರೆ ಕಾಂಗ್ರೆಸ್ ಯಾವತ್ತೂ ಬಡವರ ಪರ ಇದೆ ಎನ್ನುವುದನ್ನು ನಿರೂಪಿಸುತ್ತಿದ್ದೇವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಮನೆ ನಡೆಸುವ ಪ್ರತಿ ಮಹಿಳೆಗೂ ತಿಂಗಳಲ್ಲಿ 2000 ರೂ. ಕೊಡಲಾಗುವುದು. ಈ ಯೋಜನೆಯಲ್ಲಿ ಬಡವರು, ಶ್ರೀಮಂತ, ನಿರ್ಗತಿಕ ಅಂತ ವ್ಯತ್ಯಾಸ ಇಲ್ಲ. ಮನೆ ನಡೆಸುವ ಪ್ರತಿ ಯಜಮಾನಿಗೂ ತಿಂಗಳಿಗೆ 2 ಸಾವಿರ ರೂ. ಕೊಡಲಾಗುವುದು. ವರ್ಷಕ್ಕೆ 24 ಸಾವಿರ ರೂಪಾಯಿ ನೀಡಲಾಗುವುದು ಎಂದು ಹೇಳಿದರು.
ಕರಾವಳಿಯಲ್ಲಿ ಶಾಂತಿ ಕದಡುವ ಹೇಳಿಕೆಗಳನ್ನು ನೀಡಿ ದಾರಿ ತಪ್ಪಿಸಲಾಗುತ್ತಿದೆ. ಇಲ್ಲಿನ ದೇವಾಲಯಗಳ ಉತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಹಾಕಲಾಗುತ್ತಿದೆ. ಮುಲ್ಕಿಯ ದುರ್ಗಾಪರಮೇಶ್ವರಿ ದೇವಾಲಯವನ್ನು 12ನೇ ಶತಮಾನದಲ್ಲಿ ಬಪ್ಪಬ್ಯಾರಿ ಕಟ್ಟಿಸಿದ ಇತಿಹಾಸ ಇದೆ. ಬಪ್ಪ ಬ್ಯಾರಿ ಯಾರು? ಮುಸ್ಲಿಂ ವ್ಯಕ್ತಿ ಕಟ್ಟಿಸಿದ ದೇವಾಲಯಕ್ಕೆ ಹಿಂದುಗಳು ಹೋಗಬಾರದು ಎಂದು ಹೇಳುವ ಧೈರ್ಯವಿದೆಯೆ? ಇತಿಹಾಸವನ್ನು ತಿರುಚಿ ಜನರ ಭಾವನೆ ಕೆರಳಿಸುವ ಕೆಲಸ ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ. ಮಕ್ಕಳ ಮನಸ್ಸನ್ನು ಕೆರಳಿಸಲಾಗುತ್ತಿದೆ. ಮಕ್ಕಳ ಕೈಯಲ್ಲಿ ಚಾಕು ಚೂರಿ ನೀಡಿ ಭಯೋತ್ಪಾದಕರನ್ನು ಮಾಡಲು ಹೊರಟಿದ್ದಾರೆ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
Adani has eaten 75 thousand crores of Modi slams BK Hariprasad in Mangalore.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm