ಅಧ್ಯಯನ ಸಮಿತಿ ಮಾಡಿ ತುಳುವರಿಗೆ ಬಿಜೆಪಿ ಶಾಸಕರು ಅವಮಾನ ಮಾಡಿದ್ದಾರೆ, ಅಮಿತ್ ಷಾರನ್ನು ಶಿರಾಡಿ ಘಾಟಿಯಲ್ಲಿ ರೋಡ್ ಶೋ ಮಾಡಿಸಿ ! 

06-02-23 10:52 pm       Mangalore Correspondent   ಕರಾವಳಿ

ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಮಾಡುವ ಹೆಸರಲ್ಲಿ ಅಧ್ಯಯನ ಸಮಿತಿ ಮಾಡಿದ್ದೇ ತುಳುವರಿಗೆ ಮಾಡಿದ ಅವಮಾನ ಎಂದು ವಿಧಾನಸಭೆ ವಿಪಕ್ಷ ನಾಯಕ ಯುಟಿ ಖಾದರ್ ಹೇಳಿದ್ದಾರೆ. 

ಮಂಗಳೂರು, ಫೆ.6: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಮಾಡುವ ಹೆಸರಲ್ಲಿ ಅಧ್ಯಯನ ಸಮಿತಿ ಮಾಡಿದ್ದೇ ತುಳುವರಿಗೆ ಮಾಡಿದ ಅವಮಾನ ಎಂದು ವಿಧಾನಸಭೆ ವಿಪಕ್ಷ ನಾಯಕ ಯುಟಿ ಖಾದರ್ ಹೇಳಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ತುಳು ಭಾಷೆಗೆ ಅದರದ್ದೇ ಆದ ಇತಿಹಾಸವಿದೆ. ಈ ಭಾಷೆಯ ಬಗ್ಗೆ ಅಧ್ಯಯನ ಮಾಡಿ ವರದಿ ಕೊಡುವ ಅವಶ್ಯಕತೆ ಏನು?  ಇದು ಜನರಿಗೆ ಮೋಸ ಮಾಡುವ ತಂತ್ರ. ಬಿಜೆಪಿ ಶಾಸಕರು ತುಳುನಾಡಿನ ಜನರಿಗೆ ಮೋಸ ಮಾಡಿದ್ದಾರೆ. ಕರಾವಳಿಯಲ್ಲಿ ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಎರಡನೇ ರಾಜ್ಯ ಭಾಷೆಯನ್ನಾಗಿ ಮಾಡಲಿಲ್ಲ. ಈಗ ಚುನಾವಣೆ ಹತ್ತಿರ ಬರೋವಾಗ ಜನರ ಆಕ್ರೋಶ ತಪ್ಪಿಸಲು ಮೋಸ ಮಾಡುತ್ತಿದ್ದಾರೆ. ಸರ್ಕಾರ ಅಧ್ಯಯನ ಸಮಿತಿ ಮಾಡಿರೋದೇ ತುಳು ಭಾಷೆಗೆ ಮಾಡಿರುವ ಅವಮಾನ ಎಂದು ಹೇಳಿದರು. 

How much 'technical' is Budget 2023?

ಕೇಂದ್ರ ಬಜೆಟ್ ನಲ್ಲಿ ಕರಾವಳಿಗೆ ಒಂದೇ ಒಂದು ಯೋಜನೆಯಾಗಲೀ, ಅನುದಾನವನ್ನಾಗಲೀ ನೀಡಿಲ್ಲ.‌ ಶಿರಾಡಿ ಘಾಟಿಗೆ ಸುರಂಗ ಮಾರ್ಗ ಅಂತ ಹಲವು ವರ್ಷಗಳಿಂದ ಹೇಳುತ್ತಿದ್ದಾರೆ.‌ ಆದರೆ ಯಾವುದೇ ಬಜೆಟ್ ನಲ್ಲಿ ಈ ಯೋಜನೆಗೆ ಹಣ ಇಟ್ಟಿಲ್ಲ. ರೈಲ್ವೇ ಪ್ರತ್ಯೇಕ ವಿಭಾಗ ಕೇಳಿದ್ದರೂ ಸರ್ಕಾರದ ಸ್ಪಂದನೆ ಇಲ್ಲ.‌ ಬಂದರು, ರಸ್ತೆಗೆ ಯಾವ ಅನುದಾನವನ್ನೂ ಸರ್ಕಾರ ನೀಡಿಲ್ಲ.‌ ಶಿರಾಡಿ ಘಾಟ್ ರಸ್ತೆಯ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಜನರಿಗೆ ತಿಳಿಸಲಿ, ನಮಗೆ ಟನಲ್ ಬೇಡ, ರಸ್ತೆಗೆ ತೇಪೆ ಆದರೂ ಹಾಕಿ. ಅದೂ ಆಗಲ್ಲ ಅಂದ್ರೆ ನಾವು ನಮ್ಮ ಅನುದಾನ ಬಳಸಿ ತೇಪೆ ಕಾರ್ಯ ಮಾಡುತ್ತೇವೆ ಎಂದು ಯುಟಿ ಖಾದರ್ ತಿರುಗೇಟು ನೀಡಿದರು. 

The Narendra Modi-Amit Shah relationship has undergone a qualitative change  since the election

ಶಿರಾಡಿ ಘಾಟಿಯಿಂದ ಅಮಿತ್ ಷಾ ಕರೆತನ್ನಿ 

ಫೆ.11 ರಂದು ಮಂಗಳೂರಿನಲ್ಲಿ ಅಮಿತ್ ಷಾ ರೋಡ್ ಷೋ ಹಮ್ಮಿಕೊಂಡಿರುವ ಬಗ್ಗೆ ಖಾದರ್ ವ್ಯಂಗ್ಯವಾಡಿದ್ದು ಅಮಿತ್ ಷಾ ಕರಾವಳಿಗೆ ಬರುವುದಕ್ಕೆ ಸ್ವಾಗತ ಮಾಡುತ್ತೇನೆ.‌ ಆದರೆ ಅವರನ್ನು ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಮಂಗಳೂರಿಗೆ ಕರೆ ತರಲಿ. ಘಾಟಿ ರಸ್ತೆಯಲ್ಲಿ ರೋಡ್ ಷೋ ಮಾಡಿ ರಸ್ತೆಯ ಹೊಂಡ -ಗುಂಡಿಗಳ‌ನ್ನು ಲೆಕ್ಕ ಮಾಡಲಿ.‌ ಅಲ್ಲಿಂದ ಗೃಹ ಸಚಿವರನ್ನು ಕರೆತಂದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಸವಾಲು ಹಾಕಿದರು.

MLA U T Khader said, "The state government is betraying the people of Tulunadu by considering the people's proposal to make Tulu as second language of the state after Kannada during the time of elections."