ಬ್ರೇಕಿಂಗ್ ನ್ಯೂಸ್
07-02-23 05:16 pm Mangalore Correspondent ಕರಾವಳಿ
ಮಂಗಳೂರು, ಫೆ.7: ಉಳ್ಳಾಲ ಇನ್ಸ್ ಪೆಕ್ಟರ್, ಎಸ್ಐ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಅವರ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರೆ, ಇವರು ಇಬ್ಬರು ಆರೋಪಿಗಳ ಬಗ್ಗೆ ಮೂರನೇ ಆರೋಪಿಯಿಂದ ವರದಿ ಕೇಳಿದ್ದಾರೆ. ಪೊಲೀಸರ ತನಿಖೆಯ ಬಗ್ಗೆ ನನಗೆ ವಿಶ್ವಾಸವಿಲ್ಲ. ಲೋಕಾಯುಕ್ತ ತನಿಖೆ ನಡೆಸಿದರೆ ಪೂರಕ ಸಾಕ್ಷ್ಯ ಕೊಡಲು ಸಿದ್ಧನಿದ್ದೇನೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದ ಉಳ್ಳಾಲದ ಮೊಹಮ್ಮದ್ ಕಬೀರ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರ ಜೊತೆಗೆ ಸುದ್ದಿಗೋಷ್ಟಿ ನಡೆಸಿದ ಮೊಹಮ್ಮದ್ ಕಬೀರ್, ಲೋಕಾಯುಕ್ತಕ್ಕೆ ದೂರು ನೀಡಿದ ನೆಪದಲ್ಲಿ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ. ಪದೇ ಪದೇ ನೋಟೀಸ್ ನೀಡಿ, ತನಿಖೆಗೆ ಹಾಜರಾಗುವಂತೆ ಹೇಳಿದ್ದಾರೆ. ಆದರೆ ಪೊಲೀಸರು ನಡೆಸುವ ತನಿಖೆಗೆ ನಾನು ಯಾಕೆ ಹಾಜರಾಗಬೇಕು. ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಮತ್ತು ಎಸ್ಐ ಪ್ರದೀಪ್ ಭ್ರಷ್ಟಾಚಾರದ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಎಸಿಪಿ ಕಚೇರಿಯಿಂದ ಬರಲು ಹೇಳುತ್ತಿದ್ದು, ಪೂರಕ ದಾಖಲೆಗಳನ್ನು ನೀಡಲು ಸೂಚಿಸಿದ್ದಾರೆ. ಆದರೆ ಪೊಲೀಸರಿಗೆ ದಾಖಲೆ ನೀಡಿದರೆ ಅವೆಲ್ಲವನ್ನೂ ಮುಚ್ಚಿ ಹಾಕಿ ಸಾಕ್ಷ್ಯ ನಡೆಸುವ ಸಾಧ್ಯತೆಯಿದೆ. ಇವರೆಲ್ಲ ಕಳ್ಳರೇ ಆಗಿರುವಾಗ ಇವರಿಗೆ ದಾಖಲೆಗಳನ್ನು ನೀಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿಯೂ ಲೋಕಾಯುಕ್ತ ಕಚೇರಿ ಇದೆ. ಬೆಂಗಳೂರು ಲೋಕಾಯುಕ್ತ ಇಬ್ಬರು ಪೊಲೀಸರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ಯಾಕೆ ಹೇಳಿದ್ದೋ ಗೊತ್ತಿಲ್ಲ. ಲೋಕಾಯುಕ್ತ ಅಧಿಕಾರಿಗಳೇ ತನಿಖೆ ನಡೆಸಬೇಕು ಎಂದು ಕಬೀರ್ ಹೇಳಿದರು. ನಿಮ್ಮಲ್ಲಿ ಭ್ರಷ್ಟಾಚಾರ ಆರೋಪಕ್ಕೆ ದಾಖಲೆ ಇದೆಯೇ ಎಂಬ ಪ್ರಶ್ನೆಗೆ, ನನ್ನಲ್ಲಿ ದಾಖಲೆ ಇದೆ, ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಸೂಟ್ ಕೇಸ್ ನಲ್ಲಿ ಹಣ ತೆಗೆದುಕೊಂಡು ಹೋಗಿ ಕೊಟ್ಟಿದ್ದು ಅಲ್ಲಿನ ಸಿಸಿಟಿವಿಯಲ್ಲಿದೆ. ಅದನ್ನು ತೆಗೆದು ಪರಿಶೀಲನೆ ನಡೆಸಲಿ. ಯಾರು ಹಣ ಒಯ್ದು ಕೊಟ್ಟಿದ್ದಾರೆ ಅನ್ನುವುದು ಗೊತ್ತಿದೆ. ಲೋಕಾಯುಕ್ತದ ಮುಂದೆ ಹೇಳಿಕೆ ನೀಡಲು ಹಣ ಕೊಟ್ಟವರು ರೆಡಿ ಇದ್ದಾರೆ ಎಂದರು.
ಇತ್ತೀಚೆಗಿನ ಮೆಡಿಕಲ್ ಕಾಲೇಜಿನ ಡ್ರಗ್ಸ್ ಪ್ರಕರಣದಲ್ಲಿಯೂ ದೊಡ್ಡ ಮೊತ್ತದ ಹಣ ಪೊಲೀಸರಿಗೆ ಸಂದಾಯ ಆಗಿದೆ. ಈ ಹಿಂದೆ ನಂದಿಗುಡ್ಡೆಯ ಹೈಟೆಕ್ ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿಯೂ ದೊಡ್ಡ ಕುಳಗಳನ್ನು ಹಣ ಪಡೆದು ಕಳುಹಿಸಿದ್ದಾರೆ. ಚಿನ್ನ ಸಾಗಾಟ ಪ್ರಕರಣದಲ್ಲಿಯೂ ಪೊಲೀಸರು ಭ್ರಷ್ಟಾಚಾರ ನಡೆಸಿದ್ದಾರೆ. ಇದಲ್ಲದೆ, ಮರಳು, ಗಣಿ ಮಾಫಿಯಾಗಳಿಂದಲೂ ಸಾಕಷ್ಟು ಹಣ ತೆಗೆದುಕೊಂಡಿದ್ದಾರೆ. ಪ್ರತಿ ತಿಂಗಳು ಮರಳು ಮಾಫಿಯಾದವರು ಪೊಲೀಸರಿಗೆ ಸೂಟ್ ಕೇಸ್ ಸಂದಾಯ ಮಾಡಬೇಕಿದೆ. ಇದನ್ನು ಖುದ್ದಾಗಿ ಮರಳು ದಂಧೆಯಲ್ಲಿ ತೊಡಗಿಸಿಕೊಂಡವರೇ ಹೇಳುತ್ತಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಆಗಿ ಶಶಿಕುಮಾರ್ ಬಂದ ಬಳಿಕ ಎಲ್ಲ ಠಾಣೆಗಳಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಎಲ್ಲ ಠಾಣೆಗಳಿಂದಲೂ ಮೇಲಧಿಕಾರಿಗಳಿಂದ ಮಾಮೂಲಿ ಮುಟ್ಟಿಸುವ ದಂಧೆ ಇದೆ. ಇಂಥ ಕಮಿಷನರ್ ಅಧಿಕಾರಿಯನ್ನು ಮಂಗಳೂರಿನಲ್ಲಿ ಈತನಕ ನೋಡಿಲ್ಲ. ಈ ಹಿಂದೆ ಹಲವು ಪ್ರಕರಣಗಳನ್ನು ಎದುರಿಸಿದ್ದೇನೆ. ಆದರೆ ಈಗಿನ ಪ್ರಕರಣದಲ್ಲಿ ಅನುಭವಿಸಿದಷ್ಟು ಕಿರುಕುಳವನ್ನು ನಾನೆಲ್ಲಿಯೂ ಅನುಭವಿಸಿಲ್ಲ. ಪೊಲೀಸರನ್ನು ಮನೆಗೆ ಕಳುಹಿಸಿಕೊಟ್ಟು ಬೆದರಿಸುತ್ತಿದ್ದಾರೆ. ಹೆಂಡ್ತಿ, ಮಕ್ಕಳು ಪೊಲೀಸರ ಈ ನಡೆಯಿಂದಾಗಿ ಹೆದರಿಕೊಳ್ಳುವಂತಾಗಿದೆ. ಪೊಲೀಸರ ನೋಟೀಸಿಗೆ ಉತ್ತರ ಕೊಟ್ಟಿದ್ದು, ನಿಮಗೆ ಯಾವುದೇ ದಾಖಲೆ ನೀಡುವುದಿಲ್ಲ ಎಂದಿದ್ದೇನೆ. ಹಾಗಿದ್ದರೂ, ತನಿಖೆಗೆ ಹಾಜರಾಗಲು ಹೇಳುತ್ತಿದ್ದಾರೆ. ಯಾವುದೋ ಕೇಸ್ ಹಾಕಿ ಫಿಟ್ ಮಾಡುವ ಭಯ ಕಾಡುತ್ತಿದೆ.
ಇದೇ ಕಾರಣಕ್ಕೆ ಡಿಜಿಪಿಗೆ ಪತ್ರ ಬರೆದಿದ್ದು, ನನಗೇನಾದರೂ ತೊಂದರೆ ಆದಲ್ಲಿ ಅದಕ್ಕೆ ಈ ಮೂವರು ಪೊಲೀಸ್ ಅಧಿಕಾರಿಗಳೇ ಕಾರಣ ಎಂದು ಬರೆದಿದ್ದೇನೆ. ಇಂಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕೆಂಬುದು ನನ್ನ ಒತ್ತಾಯ. ಕೂಡಲೇ ಇವರನ್ನು ವರ್ಗಾವಣೆ ಅಥವಾ ಸಸ್ಪೆಂಡ್ ಮಾಡಿ ತನಿಖೆಗೊಳಪಡಿಸಿ. ಲೋಕಾಯುಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಹೈಕೋರ್ಟಿಗೆ ದೂರು ನೀಡುತ್ತೇನೆ ಎಂದು ಮೊಹಮ್ಮದ್ ಕಬೀರ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Mangalore, torture from police mentally after lodging complaint against Commissioner Shashi Kumar and two others to Lokayukta says RTI activist Kabir Ullal. He has alleged that Ips Shashi Kumar is the most corrupted commissioner Supporting illegal activists in the city. High level settlement is on move by commissioner. I have been harassed by frequent phone calls by DCP crime and law to come to the investigation he added. Lokayukta B.S. Patil asked for a report from Mangaluru Police Commissioner N. Shashi Kumar on a complaint accusing Ullal Police Inspector Sandeep and Police Sub Inspector Pradeep of collecting money from those involved in cannabis trade, illegal sand extraction and from hoteliers.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm