ಅಮಿತ್ ಷಾ ಪುತ್ತೂರಿಗೆ ಬಂದು ಕ್ಯಾಂಪ್ಕೋ ಖರೀದಿಸುತ್ತಾರೆಯೇ, ಮಾರ್ವಾಡಿಗಳಿಗೆ ಮಾರುತ್ತಾರೆಯೇ? ಮಗನಿಗಾಗಿ ಕರಾವಳಿಯ ಅಡಿಕೆಯನ್ನೇ ಮುಗಿಸುತ್ತಾರೆಯೇ ?! 

07-02-23 10:44 pm       Mangaluru Correspondent   ಕರಾವಳಿ

ಮೊನ್ನೆ ಮಂಡ್ಯಕ್ಕೆ ಬಂದು ಕರ್ನಾಟಕದ ನಂದಿನಿ, ಕೆಎಂಎಫ್ ಅನ್ನು ಗುಜರಾತಿನ ಅಮುಲ್ ಜೊತೆಗೆ ವಿಲೀನ ಮಾಡುವ ಪ್ರಸ್ತಾಪ ಮಾಡಿದ್ದ ಅಮಿತ್ ಷಾ ಪುತ್ತೂರಿಗೆ ಬರುತ್ತಿರುವುದು ಭಯ ಹುಟ್ಟಿಸುತ್ತಿದೆ.

Photo credits : SUDDI Pic 2

ಪುತ್ತೂರು, ಫೆ.7: ಮೊನ್ನೆ ಮಂಡ್ಯಕ್ಕೆ ಬಂದು ಕರ್ನಾಟಕದ ನಂದಿನಿ, ಕೆಎಂಎಫ್ ಅನ್ನು ಗುಜರಾತಿನ ಅಮುಲ್ ಜೊತೆಗೆ ವಿಲೀನ ಮಾಡುವ ಪ್ರಸ್ತಾಪ ಮಾಡಿದ್ದ ಅಮಿತ್ ಷಾ ಪುತ್ತೂರಿಗೆ ಬರುತ್ತಿರುವುದು ಭಯ ಹುಟ್ಟಿಸುತ್ತಿದೆ. ಇಲ್ಲಿ ಕ್ಯಾಂಪ್ಕೋ ಕಾರ್ಯಕ್ರಮಕ್ಕೆ ಬಂದು ಕ್ಯಾಂಪ್ಕೋವನ್ನು ಖರೀದಿ ಮಾಡುತ್ತಾರೆಯೇ ಅಥವಾ ನಾಶ ಮಾಡುತ್ತಾರೆಯೇ ಎಂಬ ಭಯ ಕಾಡುತ್ತಿದೆ. ಕ್ಯಾಂಪ್ಕೋ ಸಂಸ್ಥೆಯನ್ನು ಬಿಜೆಪಿ, ಆರೆಸ್ಸೆಸ್ ಮಾಡಿದ್ದಲ್ಲ. ಹಿಂದೆ ಕಾಂಗ್ರೆಸ್ ನಾಯಕರೇ ಸ್ಥಾಪಿಸಿದ್ದ ಸಂಸ್ಥೆಯದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹೇಳಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಅಮಿತ್ ಷಾ ಬಂದು ಕ್ಯಾಂಪ್ಕೋದ ಸಮಾರೋಪ ಮಾಡುತ್ತಾರೆಯೇ ಎಂಬ ಸಂಶಯ ಇದೆ. ಅಮಿತ್ ಷಾ ಹೋದಲ್ಲೆಲ್ಲ ಏನಾದರೂ ಭಾನಗಡಿಯನ್ನೇ ಮಾಡಿದ್ದಾರೆ. ಅಮುಲ್ ಜೊತೆಗೆ ವಿಲೀನಕ್ಕೆ ನಿರ್ಧಾರ ಮಾಡಿದ್ದಾರೆ, ಅದಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ಬಂದಿದ್ದರಿಂದ ಚುನಾವಣೆ ಕಾಲದಲ್ಲಿ ಬೇಡ ಎಂದು ಮುಂದೂಡಿದ್ದಾರೆ.

Shah to inaugurate Golden Jubilee celebrations of CAMPCO | Indian  Cooperative

ಸಹಕಾರಿ ವ್ಯವಸ್ಥೆ ನಾಶಕ್ಕೆ ಹುನ್ನಾರ

ಗುಜರಾತಿನ ಬರೋಡಾ ಬ್ಯಾಂಕ್ ನಷ್ಟದಲ್ಲಿದ್ದುದನ್ನು ನಮ್ಮ ಲಾಭದಲ್ಲಿದ್ದ ವಿಜಯಾ ಬ್ಯಾಂಕ್ ಜೊತೆ ವಿಲೀನ ಮಾಡಿದರು. ಯಾಕೆ ವಿಜಯಾ ಬ್ಯಾಂಕ್ ಹೆಸರು ಉಳಿಸಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿದ ವಿಶ್ವನಾಥ ರೈ, ಸಹಕಾರಿ ಸಚಿವರೂ ಆಗಿರುವ ಅಮಿತ್ ಷಾ ಪುತ್ತೂರಿಗೆ ಬಂದು ಸಹಕಾರಿ ವ್ಯವಸ್ಥೆಯನ್ನೂ ಹಾಳುಗೆಡವಲಿದ್ದಾರೆಯೇ ಅನ್ನುವ ಭಯವೂ ಇದೆ. ಯಾಕಂದ್ರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಹಕಾರಿ ವ್ಯವಸ್ಥೆಯನ್ನು ಹಂತ ಹಂತವಾಗಿ ನಾಶಪಡಿಸಲು ತೊಡಗಿದೆ. ಅಮಿತ್ ಷಾಗೆ ಸಹಕಾರಿ ಸಚಿವಾಲಯ ಕೊಟ್ಟು ಅದರ ವ್ಯವಸ್ಥೆಯನ್ನೇ ನಾಶಪಡಿಸಲು ಮುಂದಾಗಿದ್ದಾರೆ. ಸಹಕಾರಿ ಸಂಘದ ಠೇವಣಿ ಮೇಲೆ, ವಹಿವಾಟಿನ ಮೇಲೆ ಟಿಡಿಎಸ್ ಹಾಕುತ್ತಿದ್ದಾರೆ. ಸಹಕಾರಿ ಸಂಘದ ಎಲ್ಲ ವ್ಯವಹಾರಕ್ಕೂ ಜಿಎಸ್ಟಿ ಹಾಕಿದ್ದಾರೆ. ಇದರಿಂದ ಡಿವಿಡೆಂಡ್ ಇನ್ನಿತರ ರೂಪದಲ್ಲಿ ತೊಂದರೆಯಾಗುವುದು ಸಹಕಾರಿ ಸಂಘದ ಸದಸ್ಯನಾಗಿರುವ ಕೃಷಿಕನಿಗೆ. ಆಮೂಲಕ ಇಡೀ ಸಹಕಾರಿ ಸಂಘದ ವ್ಯವಸ್ಥೆಯನ್ನೇ ನಾಶಪಡಿಸಲು ಪ್ರಯತ್ನ ಪಡುತ್ತಿದ್ದಾರೆ.

Areca Nut" Images – Browse 12,545 Stock Photos, Vectors, and Video | Adobe  Stock

ಷಾ ಮಗನೇ ಭೂತಾನ್ ಅಡಿಕೆ ಹಿಂದಿರೋದು

ಭೂತಾನಿಂದ ಅಡಿಕೆ ಆಮದು ಮಾಡುತ್ತಿರುವ ಬಗ್ಗೆ ಕೇಂದ್ರ ಸರಕಾರ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಭೂತಾನ್ ಅಡಿಕೆಯನ್ನು ಆಮದು ಮಾಡುತ್ತಿರುವವರಲ್ಲಿ ಅಮಿತ್ ಷಾ ಮಗನೂ ಇದ್ದಾನೆಂಬ ಸುದ್ದಿಯನ್ನು ಪತ್ರಿಕೆಯಲ್ಲಿ ನೋಡಿದ್ದೇನೆ. ಭೂತಾನ್ ಅಡಿಕೆಗೆ ದರ ಹೆಚ್ಚಬೇಕೆಂಬ ಒಲವು ಇರುವ ಅಮಿತ್ ಷಾ, ಕರ್ನಾಟಕದ ಅದರಲ್ಲೂ ಕರಾವಳಿ ಜನರ ಜೀವಾಳ ಆಗಿರುವ ಅಡಿಕೆಯನ್ನು ನಾಶಪಡಿಸಲು ಹುನ್ನಾರ ನಡೆಸಿದ್ದಾರೆ. ಇತ್ತೀಚೆಗೆ ಸಚಿವ ಆರಗ ಜ್ಞಾನೇಂದ್ರ ಅಡಿಕೆ ಬೆಳೆಗೆ ಭವಿಷ್ಯ ಇಲ್ಲ, ಪರ್ಯಾಯ ಬೆಳೆ ನೋಡಿಕೊಳ್ಳಿ ಎಂದಿದ್ದು ಆಕಸ್ಮಿಕ ಅಲ್ಲ. ಅದು ಬಿಜೆಪಿ ಮತ್ತು ಆರೆಸ್ಸೆಸ್ಸಿನ ಹಿಡನ್ ಅಜೆಂಡಾವನ್ನೇ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಮೊನ್ನೆ ಕಡಬದಲ್ಲಿ ಕೆಡಿಪಿ ಸಭೆ ಮಾಡಿದ್ದ ಸಚಿವ ಅಂಗಾರ, ಅಡಿಕೆ ಬದಲು ಮೀನು ಕೃಷಿ ಮಾಡುವಂತೆ ಸಲಹೆ ಮಾಡಿದ್ದಾರೆ. ಇದರ ಒಳಾರ್ಥ ಏನೆಂಬುದು ನಮಗೆ ಅರ್ಥವಾಗುತ್ತಿದೆ ಎಂದರು.

5 years on, PMFBY fails to impress most farmers in Haryana - Hindustan Times

ಫಸಲ್ ಬಿಮಾ ಕಾಂಗ್ರೆಸ್ ಇದ್ದಾಗಲೂ ಇತ್ತು

ಯುಪಿಎ ಸರಕಾರ ಇದ್ದಾಗಲೂ ಫಸಲ್ ಬೀಮಾ ಯೋಜನೆ ಇತ್ತು. ಆಗ ಸರಕಾರದ್ದೇ ಇನ್ಶೂರೆನ್ಸ್ ಕಂಪನಿಯಿಂದ ವಿಮೆ ಕೊಡಲಾಗುತ್ತಿತ್ತು. ಮೋದಿ ಬಂದು ಅದನ್ನು ಬದಲಿಸಿ ರಿಲಯನ್ಸ್ ಇನ್ಶೂರೆನ್ಸ್ ಕಂಪನಿಗೆ ಕೊಟ್ಟಿದ್ದಾರೆ. ಫಸಲು ಬೀಮಾ ಯೋಜನೆಯಲ್ಲಿ 52 ಪರ್ಸೆಂಟ್ ರಾಜ್ಯದ್ದು ಹತ್ತು ಶೇಕಡಾ ಮಾತ್ರ ಕೇಂದ್ರದ್ದು. ಆದರೆ ಹೆಸರು ಮಾತ್ರ ಮೋದಿಗೆ. ಇದರ ಹಣ ಎಲ್ಲವೂ ರಿಲಯನ್ಸ್ ಅಂಬಾನಿ ಪಾಲಿಗೆ. ಹಿಂದೆ ಇದ್ದುದನ್ನೇ ಮೋದಿ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾರೆ.

BBC Documentary on PM Modi: BJP MP Links Series to 'Chinese Sponsor  Huawei', Says BBC Needs Money Desperately

ನಾಲ್ಕು ಕೋಟಿ ಖರ್ಚು ಮಾಡಿ ಜಿಲ್ಲೆಗೇನು ಲಾಭ

ನಾಡಿದ್ದಿನ ಕಾರ್ಯಕ್ರಮಕ್ಕೆ ಕ್ಯಾಂಪ್ಕೋಗೆ ನಾಲ್ಕು ಕೋಟಿ ಖರ್ಚಾಗುತ್ತದೆ. ಇಷ್ಟೆಲ್ಲ ಖರ್ಚು ಮಾಡಿ ಬರುವ ಅಮಿತ್ ಷಾ ಈ ಜಿಲ್ಲೆಗೆ ಏನು ಕೊಡುಗೆ ಕೊಡುತ್ತಾರೆ. ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಅಧ್ಯಕ್ಷರನ್ನೇ ಕಡೆಗಣಿಸಿದ್ದಾರೆಂದು ಅವರೇ ಹೇಳಿಕೊಂಡಿದ್ದಾರೆ. ಅವರ ತಂದೆ ಎಜಿ ಕೊಡ್ಗಿಯವರು ಮೂಲ ಕಾಂಗ್ರೆಸಿಗರು ಎಂದೇ ಅಧ್ಯಕ್ಷರನ್ನು ಕಡೆಗಣಿಸಿದ್ದಾರೆಯೇ ಗೊತ್ತಿಲ್ಲ. ಅವರೇನು ಮೂಲ ಆರೆಸ್ಸೆಸ್ ವ್ಯಕ್ತಿಯಲ್ಲ. ಕಾರ್ಯಕ್ರಮ ಕ್ಯಾಂಪ್ಕೋದ್ದು ಆಗಿದ್ದರೂ ಈ ಬಗ್ಗೆ ಸುದ್ದಿಗೋಷ್ಟಿ ನಡೆಸುವುದು, ಇಡೀ ಸರಕಾರವನ್ನು ತೊಡಗಿಸುವುದು ಬಿಜೆಪಿ ನಾಯಕರು. ಕ್ಯಾಂಪ್ಕೋ ಖರ್ಚಿನಲ್ಲಿ ಅಮಿತ್ ಷಾರನ್ನು ಕರೆಸಿ, ಈ ಜಿಲ್ಲೆಗೆ ಏನಾದರೂ ಕೊಡುಗೆ ಕೊಡಬೇಕಲ್ಲ ಎಂದು ಪ್ರಶ್ನೆ ಮಾಡಿದರು.

ಅಮಿತ್ ಷಾ ಕಾರ್ಯಕ್ರಮಕ್ಕೆ ಮೂರೂವರೆ ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಡೀಸಿಯಿಂದ ತೊಡಗಿ ಎಲ್ಲ ಅಧಿಕಾರಿಗಳನ್ನು ಪುತ್ತೂರಿಗೆ ಹಾಕಲಾಗಿದೆ. ನಾಡಿದ್ದು ಜನಸಾಮಾನ್ಯ ಮಾರುಕಟ್ಟೆಗೆ ಹೋಗುವುದಕ್ಕೂ ಸಮಸ್ಯೆ ಆದರೂ ಅಚ್ಚರಿಯಿಲ್ಲ. ಪುತ್ತೂರು ಆರೆಸ್ಸೆಸ್ ಹಿಡಿತದಲ್ಲಿರುವ ಜಾಗ ಆಗಿರುವಾಗ ಇಲ್ಲಿ ಇಷ್ಟೊಂದು ಭದ್ರತೆ ಮಾಡುವ ಅಗತ್ಯ ಏನಿದೆ. ಇವರ ಆರೆಸ್ಸೆಸ್ ಬಗ್ಗೆ ನಂಬಿಕೆಯಿಲ್ಲವೇ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಪ್ರಶ್ನೆ ಮಾಡಿದ್ದಾರೆ.

Bjp Amit Shah coming to Puttur, is he Planning to buy campco industry for his son.