ಅಣಬೆ ಹೇಳಿಕೆ ; ಶಾಸಕ ಮಠಂದೂರುಗೆ ಬಿಸಿ ಮುಟ್ಟಿಸಿದ ಅರುಣ್ ಪುತ್ತಿಲ ಬೆಂಬಲಿಗರು, ಮುಖಂಡರ ಎದುರಲ್ಲೇ ಅಡ್ಡಹಾಕಿ ತರಾಟೆ 

09-02-23 08:23 pm       Mangalore Correspondent   ಕರಾವಳಿ

ಪುತ್ತೂರು ಶಾಸಕ ಸಂಜೀವ ಮಠಂದೂರು ಅಣಬೆ ಹೇಳಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದ ಬಗ್ಗೆ ಆಮಂತ್ರಣ ಪತ್ರಿಕೆ ಹಂಚಲು ಪುತ್ತೂರಿನಲ್ಲಿ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರೇ ಎರಡು ಗುಂಪುಗಳಾಗಿ ಮಾತಿನ ಚಕಮಕಿ ನಡೆಸಿದ್ದು ಕೈ ಕೈ ಮಿಲಾಯಿಸಲು ಮುಂದಾಗಿದ್ದಾರೆ. 

ಪುತ್ತೂರು, ಫೆ.9 : ಪುತ್ತೂರು ಶಾಸಕ ಸಂಜೀವ ಮಠಂದೂರು ಅಣಬೆ ಹೇಳಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದ ಬಗ್ಗೆ ಆಮಂತ್ರಣ ಪತ್ರಿಕೆ ಹಂಚಲು ಪುತ್ತೂರಿನಲ್ಲಿ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರೇ ಎರಡು ಗುಂಪುಗಳಾಗಿ ಮಾತಿನ ಚಕಮಕಿ ನಡೆಸಿದ್ದು ಕೈ ಕೈ ಮಿಲಾಯಿಸಲು ಮುಂದಾಗಿದ್ದಾರೆ. 

ಅಮಿತ್ ಷಾಗೆ ಸ್ವಾಗತ ಕೋರಿ ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಬ್ಯಾನರ್ ಅಳವಡಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಬ್ಯಾನರ್ ಹಾಕಿದ್ದ ವಿಚಾರದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದ ಶಾಸಕ ಸಂಜೀವ ಮಠಂದೂರು, ಮಳೆ ಬಂದಾಗ ಅಲ್ಲಲ್ಲಿ ಅಣಬೆಗಳು ಹುಟ್ಟಿಕೊಳ್ಳುವ ರೀತಿ ಕೆಲವರು ಚುನಾವಣೆ ಬಂದಾಗ ಈ ರೀತಿ ಕಾಣಿಸಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಅರುಣ್ ಪುತ್ತಿಲರಿಗೆ ಟಾಂಗ್ ನೀಡಿದ್ದರು‌.

Union Home Minister Amit Shah presides over conference of UTs - Kashmir  Patriot

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅರುಣ್ ಪುತ್ತಿಲರ ಬೆಂಬಲಿಗರು ಶಾಸಕರಲ್ಲಿ ಈ ವಿಚಾರವನ್ನು ಪ್ರಶ್ನಿಸಿದ್ದು, ಶಾಸಕರ ಪರ ಗುಂಪು ಮತ್ತು ಅರುಣ್ ಪುತ್ತಿಲ ಪರ ಗುಂಪುಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ. ಈ ವೇಳೆ, ಶಾಸಕ ಮಠಂದೂರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಇತರೇ ಮುಖಂಡರು, ಸಿಟ್ಟುಗೊಂಡಿದ್ದ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ. ಈ ವೇಳೆ, ಎರಡೂ ಗುಂಪುಗಳ ಕಾರ್ಯಕರ್ತರು ತಳ್ಳಾಡಿ ಹೊಯ್ ಕೈ ನಡೆಸಿದ್ದಾರೆ. 

ಮಠಂದೂರು ಜೆಡಿಎಸ್ ನಿಂದ ಬಂದಿರುವ ವ್ಯಕ್ತಿಯಾಗಿದ್ದು ಮೂಲ ಬಿಜೆಪಿ ಅಲ್ಲ. ಇವರು ನಮಗೆ ಪಾಠ ಹೇಳಲು ಬಂದಿದ್ದಾರೆ. ಪ್ರೆಸ್ ನಲ್ಲಿ ಅಣಬೆಗಳು ಅಂತ ಹೇಳಿದ್ದಾರಲ್ಲಾ.. ಇದು ಕಾರ್ಯಕರ್ತರಿಗೆ ಕೊಡುವ ಮರ್ಯಾದೆಯಾ.. ಅರುಣ್ ಪುತ್ತಿಲ ಕಳೆದ ಬಾರಿ ಇವರ ಪರ ಪ್ರಚಾರಕ್ಕೆ ಬಂದಿಲ್ಲವೇ.. ಇವರು ಯಾವ ಮುಖ‌ ಇಟ್ಟುಕೊಂಡು ಅಣಬೆ ಅಂತಿದ್ದಾರೆ ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.‌ ಉದ್ರಿಕ್ತರಾಗಿದ್ದ ಕಾರ್ಯಕರ್ತರನ್ನು ಮುಖಂಡರು ಸಮಾಧಾನ ಹೇಳಿ, ಕಳುಹಿಸಿ ಕೊಟ್ಟಿದ್ದಾರೆ.

Puttur Sanjeeva Matandoor and Arun Kumar Puttila fight internally over banners, cut outs on Amit Shah visit. Answering the queries of journalists about his photo not appearing on the cut-outs, Matandoor said, “In democracy all have got opportunity. As mushroom grows when it rains, new people appear suddenly during election time. But it does not last for long time.”