ಅಮಿತ್ ಷಾ ಸಭೆ, ಕೆಂಜಾರು ರಸ್ತೆಯಲ್ಲಿ ಪ್ರಯಾಣಕ್ಕೆ ಅಡಚಣೆ ; ಏರ್ಪೋರ್ಟ್ ಸಾಗಲು ಪರ್ಯಾಯ ರಸ್ತೆ ಬಳಸಲು ಸೂಚನೆ 

11-02-23 02:27 pm       Mangalore Correspondent   ಕರಾವಳಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರದ ಕೆಂಜಾರಿನ ಶ್ರೀದೇವಿ ಕಾಲೇಜಿನ ಸಭಾಂಗಣದಲ್ಲಿ ಸಭೆ ಏರ್ಪಡಿಸಿರುವುದರಿಂದ ಫೆ.11ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 9ರ ವರೆಗೆ ಮಂಗಳೂರು - ಬಜ್ಪೆ ಏರ್ಪೋರ್ಟ್ ರಸ್ತೆಯ ಬದಲು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಪರ್ಯಾಯ ರಸ್ತೆ ಕಂಡುಕೊಳ್ಳಲು ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಚಿಸಿದ್ದಾರೆ. 

ಮಂಗಳೂರು, ಫೆ.11 : ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರದ ಕೆಂಜಾರಿನ ಶ್ರೀದೇವಿ ಕಾಲೇಜಿನ ಸಭಾಂಗಣದಲ್ಲಿ ಸಭೆ ಏರ್ಪಡಿಸಿರುವುದರಿಂದ ಫೆ.11ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 9ರ ವರೆಗೆ ಮಂಗಳೂರು - ಬಜ್ಪೆ ಏರ್ಪೋರ್ಟ್ ರಸ್ತೆಯ ಬದಲು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಪರ್ಯಾಯ ರಸ್ತೆ ಕಂಡುಕೊಳ್ಳಲು ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಚಿಸಿದ್ದಾರೆ. 

ಏರ್ಪೋರ್ಟ್ ರಸ್ತೆಯ ಕೆಂಜಾರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವ ಕಾರಣ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ಹಾಗೂ ಜನಸಂದಣಿ ಜಾಸ್ತಿ ಇರಬಹುದಾಗಿದ್ದು ಸಂಚಾರ ವ್ಯತ್ಯಯ ಆಗಬಹುದಾದ ಕಾರಣ ಕೆಂಜಾರು ರಸ್ತೆಯಲ್ಲಿ ಪ್ರಯಾಣಕ್ಕೆ ಅಡಚಣೆಯಾಗಲಿದೆ. ಅದಕ್ಕಾಗಿ ಏರ್ಪೋರ್ಟ್ ಗೆ ಹೋಗುವವರು ಪರ್ಯಾಯ ರಸ್ತೆಯಾಗಿ ಮುಲ್ಕಿ ಭಾಗದಿಂದ ಕಟೀಲ್ - ಬಜಪೆ ಮೂಲಕ ಏರ್ ಪೋರ್ಟ್ ಸೇರಬಹುದು.

ಮಂಗಳೂರು ಭಾಗದಿಂದ ಪ್ರಯಾಣಿಸುವವರು ಕಾವೂರು ಬದಲು ಕುದುರೆಮುಖ ಜಂಕ್ಷನ್ - ಜೋಕಟ್ಟೆ, ಪೊರ್ಕೊಡಿ ರಸ್ತೆ ಮೂಲಕ ಏರ್ ಪೋರ್ಟ್ ಸೇರಬಹುದು. ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಿಂದ ಜೋಕಟ್ಟೆ -ಪೊರ್ಕೋಡಿ ರಸ್ತೆಯಾಗಿ ಸಾಗಲು ಅವಕಾಶ ಇದೆ. ಇದಲ್ಲದೆ, ಮಂಗಳೂರಿನಿಂದ ನಂತೂರು - ಬಿಕರ್ನಕಟ್ಟೆ, ಕೈಕಂಬ ದಾರಿಯಾಗಿ ಏರ್ಪೋರ್ಟ್ ಸೇರಬಹುದು ಎಂದು ಪೊಲೀಸರು ಸೂಚಿಸಿದ್ದಾರೆ.

Traffic diversions will be in effect on Saturday, February 11 following the visit  by union home minister Amit Shah and other dignitaries.   They will be participating in a meeting organized at Sridevi Engineering College near Kenjaru on Airport Road. In view of this, a large public congregation and vehicle movement is expected near Kenjaru.