ಕೆಲಸ ಕಳಕೊಂಡ ಚಿಂತೆ, ಪೊಲೀಸ್ ಠಾಣೆಗೆ ಅಲೆದಾಟ ; ಕಂಬಳ ಓಟಗಾರ ನೇಣು ಬಿಗಿದು ಆತ್ಮಹತ್ಯೆ

12-02-23 08:11 pm       Udupi Correspondent   ಕರಾವಳಿ

ಶಿರೂರು ಟೋಲ್‌ಗೇಟ್ ಬಳಿಯ ನಿವಾಸಿ, ಕಂಬಳ ಒಟಗಾರ ಸುರೇಶ್ ಪೂಜಾರಿ (37) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರ್ಟ್ ಪ್ರೋಸೆಸ್ ಹುದ್ದೆಯಲ್ಲಿದ್ದ ಅವರು ಒಂದು ವರ್ಷದ ಹಿಂದೆ ಅಮಾನುತುಗೊಂಡಿದ್ದು ಅದೇ ಚಿಂತೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕುಂದಾಪುರ, ಫೆ.12 : ಶಿರೂರು ಟೋಲ್‌ಗೇಟ್ ಬಳಿಯ ನಿವಾಸಿ, ಕಂಬಳ ಒಟಗಾರ ಸುರೇಶ್ ಪೂಜಾರಿ (37) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರ್ಟ್ ಪ್ರೋಸೆಸ್ ಹುದ್ದೆಯಲ್ಲಿದ್ದ ಅವರು ಒಂದು ವರ್ಷದ ಹಿಂದೆ ಅಮಾನುತುಗೊಂಡಿದ್ದು ಅದೇ ಚಿಂತೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶಿರೂರಿನ ಪತ್ನಿ ಮನೆಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಮಲಗಿದ್ದರು. ಸಂಜೆ ಮನೆಯಿಂದ ಹೊರಬಂದ ಅವರು, ಪತ್ನಿ ಮೊಬೈಲ್‌ಗೆ ಮೆಸೇಜ್ ಮಾಡಿದ್ದರು. 'ಸಾರಿ ಸಾರಿ ಸಾರಿ, ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಮನೆಯವರು ನಿನಗೆ ರಗಳೆ ಮಾಡಬಹುದು. ಅವರಿಗೆಲ್ಲ ಮೇಸೆಜ್ ತೋರಿಸು. ನನಗೆ ಕೆಲಸ ಆಗಲಿಲ್ಲ. ಅದೇ ತಲೆಬಿಸಿಯಲ್ಲಿ ತಪ್ಪು ಮಾಡುತ್ತಿದ್ದೇನೆ. ನನ್ನಿಂದ ಹೇಡಿಯಂತೆ ಬದುಕಲು ಆಗುವುದಿಲ್ಲ. ನಾನು ಸಾಯುತ್ತಿದ್ದೇನೆ. ಗೇರು ಮರಕ್ಕೆ ನೇಣು ಹಾಕಿಕೊಳ್ಳುತ್ತಿದ್ದೇನೆ ಬೇರೆ ಎಲ್ಲೂ ಹುಡುಕುವುದು ಬೇಡ' ಎಂದು ಮೇಸೆಜ್‌ ಕಳುಹಿಸಿದ್ದರು.

ತಕ್ಷಣ ಸಂಬಂಧಿಕರು ಹುಡುಕಾಟ ಆರಂಭಿಸಿದ್ದು ಟೋಲ್‌ಗೇಟ್ ಹಿಂಬದಿಯ ಸರಕಾರಿ ಹಾಡಿಯಲ್ಲಿ ಸುರೇಶ್ ಮೃತದೇಹವು ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುರೇಶ ಪೂಜಾರಿ ವಿರುದ್ದ ಕಳೆದ ವರ್ಷ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಸುರೇಶ್ ನಿರ್ವಹಿಸುತ್ತಿದ್ದ ಕೋರ್ಟ್ ಪ್ರೋಸೆಸ್ ಕೆಲಸದಿಂದ ಅಮಾನತಾಗಿದ್ದು ಈವರೆಗೆ ರಿವೋಕ್ ಆಗಿರಲಿಲ್ಲ. ಈ ಬಗ್ಗೆ ನಿತ್ಯ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದರು. ಕೆಲಸವಿಲ್ಲದ ಚಿಂತೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್ ಕಂಬಳದ ಪ್ರೋತ್ಸಾಹಕ, ಸಂಘಟಕನಾಗಿದ್ದು, ಕಂಬಳದ ಹಗ್ಗದ ವಿಭಾಗದ ಓಟಗಾರರಾಗಿದ್ದರು. ಅಲ್ಲದೆ ಇತ್ತೀಚೆಗೆ ಕಂಬಳದಲ್ಲಿ ಓಟದ ಮಾಪನ ಮಾಡುವ ಸುಧಾರಿತ ಸೆನ್ಸಾರ್ ಯಂತ್ರವನ್ನು ನಿರ್ವಹಿಸುತ್ತಿದ್ದರು. ಕ್ರಿಯಾಶೀಲ ವ್ಯಕ್ತಿಯಾಗಿದ್ದ ಸುರೇಶ್ ಸ್ನೇಹಜೀವಿಯಾಗಿ ಗುರುತಿಸಿಕೊಂಡಿದ್ದರು.

Kundapur Kambala racer commits suicide after losing job.