ಎಚ್ಡಿಕೆ ಬ್ರಾಹ್ಮಣ ಸಿಎಂ ದಾಳ ; ಬೆದರಿತ್ತೇ ಬಿಜೆಪಿ ಹೈಕಮಾಂಡ್, ಪುತ್ತೂರಿಗೆ ಕೊನೆಕ್ಷಣದಲ್ಲಿ ಯಡಿಯೂರಪ್ಪ ಕರೆಸಿದ್ದ ಅಮಿತ್ ಷಾ, ಲಿಂಗಾಯತರಿಗೆ ಬಹುಪರಾಕ್ !   

13-02-23 12:22 pm       Giridhar Shetty, Mangalore   ಕರಾವಳಿ

ಇತ್ತೀಚೆಗೆ ಎಚ್.ಡಿ. ಕುಮಾರಸ್ವಾಮಿ ಎಸೆದ ಬ್ರಾಹ್ಮಣ ಸಿಎಂ ದಾಳಕ್ಕೆ ಕನಲಿಹೋಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಷಾ ಒಂದು ಹಂತದ ಬೂಸ್ಟರ್ ನೀಡಿದ್ದಾರೆ.

ಮಂಗಳೂರು, ಫೆ.12: ಇತ್ತೀಚೆಗೆ ಎಚ್.ಡಿ. ಕುಮಾರಸ್ವಾಮಿ ಎಸೆದ ಬ್ರಾಹ್ಮಣ ಸಿಎಂ ದಾಳಕ್ಕೆ ಕನಲಿಹೋಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಷಾ ಒಂದು ಹಂತದ ಬೂಸ್ಟರ್ ನೀಡಿದ್ದಾರೆ. ಪುತ್ತೂರಿಗೆ ಬಂದಿದ್ದ ಅಮಿತ್ ಷಾ ಕ್ಯಾಂಪ್ಕೋ ಸಮಾವೇಶದ ನೆಪದಲ್ಲಿ ಲಿಂಗಾಯತ ಮತಬ್ಯಾಂಕ್ ಗಟ್ಟಿಗೊಳಿಸುವ ದಾಳ ಹಾಕಿದ್ದಾರೆ. ಮುಂದಿನ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎಂದು ಹೇಳಿದ್ದಲ್ಲದೆ, ಮತದಾರರೇ ಬೊಮ್ಮಾಯಿ ಕೈ ಬಲಪಡಿಸಿ ಎನ್ನುವ ಮೂಲಕ ಮುಂದಿನ ಮುಖ್ಯಮಂತ್ರಿಯೂ ಅವರೇ ಎನ್ನುವುದನ್ನು ಸೂಚಿಸಿದ್ದಾರೆ.

ಇದಕ್ಕೆಲ್ಲ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸಾಕ್ಷ್ಯ ಮಾಡಿಸಿದ್ದೂ ಅಮಿತ್ ಷಾ. ಕ್ಯಾಂಪ್ಕೋ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಪಾಲ್ಗೊಳ್ಳುವುದಕ್ಕೆ ಆಹ್ವಾನ ಇರಲಿಲ್ಲ. ಸರಕಾರಿ ಕಾರ್ಯಕ್ರಮ ಆಗಿದ್ದರಿಂದ ಯಡಿಯೂರಪ್ಪ ಕರೆಸುವ ಅಗತ್ಯವೂ ಇರಲಿಲ್ಲ. ಶಾಸಕರು, ಸಂಸದರು, ಮುಖ್ಯಮಂತ್ರಿ, ಸಚಿವರನ್ನು ಮಾತ್ರ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಆದರೆ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬರುತ್ತಾರೆಯೇ ಎನ್ನುವುದೂ ಖಾತ್ರಿ ಇರಲಿಲ್ಲ. ಮೂಲದ ಪ್ರಕಾರ, ಅಮಿತ್ ಷಾ ಅವರೇ ಕೊನೆಕ್ಷಣದಲ್ಲಿ ಯಡಿಯೂರಪ್ಪ ಅವರನ್ನು ಪುತ್ತೂರಿನ ಕಾರ್ಯಕ್ರಮಕ್ಕೆ ಕರೆಸಿದ್ದು ಎನ್ನಲಾಗುತ್ತಿದೆ. ಆಮೂಲಕ ಯಡಿಯೂರಪ್ಪ ಅವರನ್ನು ದೂರ ಇಟ್ಟಿಲ್ಲ ಅನ್ನುವ ಸಂದೇಶವನ್ನು ಲಿಂಗಾಯತರಿಗೆ ನೀಡುವ ಪ್ರಯತ್ನ ಮಾಡಿದ್ದಾರೆ.

Karnataka: CM Basavaraj Bommai shares an update on lifting Covid curbs in  state | Mint

ಬ್ರಾಹ್ಮಣ ಸಿಎಂ ದಾಳದಿಂದ ಕೇಸರಿ ಪಾಳಯದ ಗಟ್ಟಿ ಮತಬ್ಯಾಂಕ್ ಎಂದೇ ಬಿಂಬಿತವಾಗಿರುವ ಲಿಂಗಾಯತರು ಚದುರಿ ಹೋಗುವ ಅಪಾಯ ಎದುರಾಗಿತ್ತು. ಬ್ರಾಹ್ಮಣ ಸಿಎಂ ಅನ್ನುವುದನ್ನು ಬಿಜೆಪಿ ನಾಯಕರು ಸಮರ್ಥಿಸಿದಷ್ಟೂ ಅಪಾಯಗಳೇ ಇದ್ದವು. ಆದರೆ ಸಮರ್ಥಿಸದೇ ಬೇರೆ ಉಪಾಯಗಳೇ ಇಲ್ಲದ ಸ್ಥಿತಿ ರಾಜ್ಯ ಬಿಜೆಪಿ ನಾಯಕರದ್ದಾಗಿತ್ತು. ಇದರಿಂದ ಡ್ಯಾಮೇಜ್ ಆಗಿದ್ದನ್ನು ತಿಳಿದುಕೊಂಡೇ ಬಂದಿದ್ದ ಅಮಿತ್ ಷಾ, ಕರಾವಳಿಯಿಂದಲೇ ಲಿಂಗಾಯತರೇ ಮುಂದಿನ ಮುಖ್ಯಮಂತ್ರಿ ಎನ್ನುವುದನ್ನು ತೋರಗೊಟ್ಟಿದ್ದಾರೆ. ಅಲ್ಲದೆ, ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಿಂದಲೇ ಭಾಷಣ ಮಾಡಿಸಿದ್ದಾರೆ. ಸಮಯದ ಅಭಾವದ ತರಾತುರಿ ಇದ್ದರೂ, ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡುವ ಮೊದಲು ಯಡಿಯೂರಪ್ಪ ಅವರಿಗೆ ಅವಕಾಶ ನೀಡಲಾಗಿತ್ತು.

Nalin Kumar Kateel is Karnataka BJP chief | India News,The Indian Express

RSS' Kalladka Prabhakar Bhat compares Mangaluru's Ullal to Pakistan | The  News Minute

ಸಂಸದ ನಳಿನ್ ಕುಮಾರ್, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಭಾಷಣ ನಿಗದಿಯಾಗಿದ್ದರೂ, ಅದನ್ನು ಕಡಿತ ಮಾಡಲಾಗಿತ್ತು. ಅಮಿತ್ ಷಾ ವೇದಿಕೆಯಲ್ಲಿರುವಾಗ ಯಡಿಯೂರಪ್ಪ, ಬೊಮ್ಮಾಯಿ ಮಾತ್ರ ಭಾಷಣ ಮಾಡಿದ್ದರು. ಅಲ್ಲದೆ, ಯಡಿಯೂರಪ್ಪ ಭಾಷಣಕ್ಕೆ ಮುಂದಾಗುತ್ತಿದ್ದಂತೆ ಜನರೂ ಕರತಾಡನ ಹಾಕಿದ್ದನ್ನೂ ಅಮಿತ್ ಷಾ ಗಮನಿಸಿದ್ದಾರೆ. ತನ್ನ ಭಾಷಣದುದ್ದಕ್ಕೂ ಯಡಿಯೂರಪ್ಪ ಅವರನ್ನು ಕೊಂಡಾಡುತ್ತಲೇ ರಾಜ್ಯದಲ್ಲಿ ಅಭಿವೃದ್ಧಿಯಾಗಿದ್ದರೆ, ಕೃಷಿಕರಿಗೆ ಉತ್ತಮ ಬದುಕು ಸಿಕ್ಕಿದ್ದರೆ ಅದಕ್ಕೆ ಯಡಿಯೂರಪ್ಪ ಎಂದು ಹೇಳಿದಾಗ ಸಭಿಕರಿಂದ ಚಪ್ಪಾಳೆ ಸಿಕ್ಕಿದ್ದವು.

A reality check for Indian PM Modi – DW – 12/12/2018

H.D. Kumaraswamy Address, Phone Number, Email ID, Website

ಇತ್ತೀಚೆಗೆ ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿಯೂ ಯಡಿಯೂರಪ್ಪ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇಲ್ಲದೇ ಇದ್ದರೂ, ಅವರನ್ನು ವೇದಿಕೆಗೆ ಕರೆಸಿಕೊಳ್ಳಲಾಗಿತ್ತು. ಕರಾವಳಿಯ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಬಗೆಗೆ ಅಸಮಾಧಾನ ಇದ್ದರೂ ಯಡಿಯೂರಪ್ಪ ಅವರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಸಮತೋಲನ ಕಾಯ್ದುಕೊಂಡಿದ್ದರು. ಇದೆಲ್ಲ ಕಣ್ಣೊರೆಸುವ ತಂತ್ರವೇ ಆಗಿದ್ದರೂ, ಯಡಿಯೂರಪ್ಪ ಅವರನ್ನು ಚುನಾವಣೆ ಹೊತ್ತಲ್ಲಿ ದೂರ ಮಾಡಲು ಬಿಜೆಪಿ ಹೈಕಮಾಂಡ್ ಧೈರ್ಯ ಮಾಡಲ್ಲ. ಲಿಂಗಾಯತರು ವಿವಿಧ ಕಾರಣಗಳಿಂದ ಅಸಮಾಧಾನದಲ್ಲಿರುವ ನಡುವಲ್ಲೇ ಎಚ್ಡಿಕೆ ಎಸೆದಿದ್ದ ಬ್ರಾಹ್ಮಣ ಸಿಎಂ ದಾಳದಿಂದ ಮತಬ್ಯಾಂಕ್ ಚದುರಿ ಹೋಗುವ ಅಪಾಯವನ್ನು ಕೇಂದ್ರ ನಾಯಕರು ಮನಗಂಡಿದ್ದಾರೆ. ಇದೇ ಕಾರಣಕ್ಕೆ ಮೊನ್ನೆಯಷ್ಟೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಸಂಘಟನಾತ್ಮಕ ಜವಾಬ್ದಾರಿಗೆ ತೊಡಗಿಸಿದ್ದಾರೆ. ಇದೀಗ ಯಡಿಯೂರಪ್ಪ ಜೊತೆಗಿಟ್ಟುಕೊಂಡೇ ಲಿಂಗಾಯತ ಮುಖ್ಯಮಂತ್ರಿಗಳನ್ನು ಹಾಡಿ ಹೊಗಳಿದ್ದಾರೆ. ಮುಂದಿನ ಬಾರಿಯೂ ಅವರೇ ಬಾದ್ ಶಾ ಅನ್ನುವುದನ್ನು ಚುನಾವಣೆ ಕಾರಣಕ್ಕಾದರೂ ತೇಲಿಸುವ ಭರವಸೆ ನೀಡಿದ್ದಾರೆ.

Puttur Yediyurappa was invited at the last moment at the CAMPCO program by Amit Shah to gain Lingayat votes. In a possible sign of a change in the equations in the BJP ahead of the coming Karnataka Assembly polls, Union Home Minister Amit Shah has heaped praise on former CM and Lingayat strongman B S Yediyurappa at an event in coastal Karnataka.