ಬ್ರೇಕಿಂಗ್ ನ್ಯೂಸ್
13-02-23 09:39 pm Mangalore Correspondent ಕರಾವಳಿ
ಮಂಗಳೂರು, ಫೆ.13: ಬಾವಿಗೆ ಬಿದ್ದ ಚಿರತೆ ಮರಿಯನ್ನು ಮಹಿಳಾ ಪಶು ವೈದ್ಯೆಯೊಬ್ಬರು ಬೋನಿನಲ್ಲಿಯೇ ಕುಳಿತು ಬಾವಿಗಿಳಿದು ಚಿರತೆಯನ್ನು ಸೆರೆಹಿಡಿದು ತಂದಿರುವ ಘಟನೆ ಮೂಡುಬಿದ್ರೆ ಬಳಿಯ ನಿಡ್ಡೋಡಿಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಚಿರತೆ ಮರಿಯನ್ನು ಸೆರೆಹಿಡಿದು ಮೇಲಕ್ಕೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಬಹಳಷ್ಟು ಪ್ರಯತ್ನ ಪಟ್ಟಿದ್ದರು. ಮೂವತ್ತು ಅಡಿಗಿಂತಲೂ ಆಳವಾಗಿದ್ದ ಬಾವಿಯ ಒಳಗಿನ ಗುಹೆಯಲ್ಲಿ ಚಿರತೆ ಮರಿ ಅಡಗಿಕೊಂಡಿತ್ತು. ಬೋನು ಇಳಿಸಿದರೂ, ಅದರೊಳಕ್ಕೆ ಬಾರದೆ ತಪ್ಪಿಸುತ್ತಿತ್ತು. ಈ ವೇಳೆ, ಸ್ವಯಂಸೇವಾ ಸಂಸ್ಥೆ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ತಜ್ಞ ವೈದ್ಯರು ಸ್ಥಳಕ್ಕೆ ಬಂದಿದ್ದು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.


ಚಿರತೆ ಮರಿಯನ್ನು ರಕ್ಷಿಸಲು ಅಪಾಯ ಲೆಕ್ಕಿಸದೆ ಬಾವಿಗೆ ಇಳಿಯಲೇಬೇಕಿತ್ತು. ಆದರೆ ಒಂದು ವರ್ಷ ಪ್ರಾಯದ ಚಿರತೆ ಬಾವಿಯಲ್ಲಿದ್ದಾಗ ಅದರೊಳಗೆ ಇಳಿಯಲು ಯಾರೂ ಮುಂದಾಗಲಿಲ್ಲ. ಕೊನೆಗೆ, ಸಂರಕ್ಷಣಾ ತಂಡದ ಡಾ. ಮೇಘನಾ ಪೆಮ್ಮಯ್ಯ ಅವರು ಅರಿವಳಿಕೆ ಮದ್ದು ತುಂಬಿದ ಗನ್ ಹಿಡಿದು ಬೋನಿನಲ್ಲಿ ಕುಳಿತು ಬಾವಿಗೆ ಇಳಿದಿದ್ದಾರೆ.


ಡಾ. ಮೇಘನಾ ಬಾವಿಗೆ ಇಳಿಯುತ್ತಲೇ ಗುಹೆಯಲ್ಲಿ ಅಡಗಿ ಕುಳಿತ ಚಿರತೆ ಮರಿಯತ್ತ ಅರಿವಳಿಕೆ ಚುಚ್ಚು ಮದ್ದು ಪ್ರಯೋಗಿಸಿದ್ದಾರೆ. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿ ಹಗ್ಗದ ಮೂಲಕ ಕೆಳಗಿಳಿದು ಹೆಣ್ಣು ಚಿರತೆ ಮರಿಯನ್ನು ಮೇಲಕ್ಕೆ ತಂದಿದ್ದಾರೆ. ಜೊತೆಗೆ, ಅಮೋಘ ಕಾರ್ಯಾಚರಣೆ ನಡೆಸಿದ ಡಾ. ಮೇಘನಾ ಕೂಡ ಬಾವಿಯಿಂದ ಮೇಲಕ್ಕೆ ಬಂದಿದ್ದಾರೆ. ಬಳಿಕ ಚಿರತೆ ಚೇತರಿಸುತ್ತಿದ್ದಂತೆಯೇ ಅದನ್ನು ಅರಣ್ಯ ಇಲಾಖೆಯವರು ದಟ್ಟ ಕಾಡಿಗೆ ಒಯ್ದು ಬಿಟ್ಟು ಬಂದಿದ್ದಾರೆ.
A one-year-old leopard which fell into a well at Niddodi was rescued and later released into the wild on Sunday February 12. The forest department officials tried luring it inside a cage and were unsuccessful. A rescue team led by wild life specialist Dr Yashasvi Naravi with Dr Meghana, Dr Prithvi and Dr Nafisa decided to immobilise the leopard and bring it up from the well which was too deep and also which had caved inside where the leopard was hiding.
10-07-26 07:42 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
10-07-26 05:25 pm
HK News Staffer
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
10-07-26 05:29 pm
HK News Staffer
ರೆಡ್ ಅಲರ್ಟ್; ರಜೆ ಆದೇಶ ಪಾಲಿಸದ ಹತ್ತಕ್ಕೂ ಹೆಚ್ಚು...
10-07-26 03:25 pm
ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಎಂಟು ಮಂದಿ ಬಾ...
10-07-26 02:22 pm
ಟೀಚರ್ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು ; ಈ ಅವಮಾನ...
09-07-26 09:11 pm
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm