ಬ್ರೇಕಿಂಗ್ ನ್ಯೂಸ್
15-02-23 01:41 pm HK News Desk ಕರಾವಳಿ
ಮಂಗಳೂರು: ನಗರದಿಂದ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ ಮಂಗಳೂರಿನ ಮೀನುಗಾರರಿಗೆ ತಮಿಳುನಾಡಿನಲ್ಲಿ ಕಲ್ಲು ಎಸೆದ ಘಟನೆ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ
ಮಂಗಳೂರಿನ ಬೋಟ್ಗಳ ಮೇಲೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಕಲ್ಲು ತೂರಾಟ ನಡೆಸಲಾಗಿದೆ ಎಂದು ದೂರಲಾಗಿತ್ತು. ಕಲ್ಲು ತೂರಾಟದ ಪರಿಣಾಮ ಮಂಗಳೂರಿನ ಬೋಟ್ಗಳಲ್ಲಿದ್ದ ಏಳೆಂಟು ಮಂದಿ ಮೀನುಗಾರರು ಗಾಯಗೊಂಡಿದ್ದರು ಎಂದು ತಿಳಿದುಬಂದಿತ್ತು.
ಈ ಪ್ರಕರಣ ಫೆ.8ರಂದು ನಡೆದಿದ್ದು, ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ ಮಂಗಳೂರಿನ ಏಳೆಂಟು ಬೋಟ್‌ಗಳು ತಮಿಳುನಾಡಿನ ಕನ್ಯಾಕುಮಾರಿ ಬಳಿ ಮೀನುಗಾರಿಕೆಯಲ್ಲಿ ನಿರತವಾಗಿತ್ತು. ಈ ವೇಳೆ ತಮಿಳುನಾಡಿನ ಮೀನುಗಾರರಿಂದ ಕಲ್ಲು ತೂರಾಟದ ಕೃತ್ಯ ನಡೆದಿತ್ತು. ಮಂಗಳೂರಿನಿಂದ ತೆರಳಿದ್ದ ಬೋಟ್ಗಳನ್ನು ಸಮುದ್ರದ ಮಧ್ಯೆ ತಮಿಳು ಮಾತನಾಡುತ್ತಿದ್ದ ಮೀನುಗಾರರಿದ್ದ ಹತ್ತಾರು ಬೋಟ್‌ಗಳು ಸುತ್ತುವರಿದಿದ್ದವು. ಈ ವೇಳೆ ಆ ಬೋಟ್ಗಳಲ್ಲಿ ಇದ್ದ ಕೆಲವರು ಮಂಗಳೂರಿನ ಬೋಟ್ಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಪರಿಣಾಮ ಏಳೆಂಟು ಮೀನುಗಾರರು ಗಾಯಗೊಂಡಿದ್ದರು. ಕಲ್ಲು ತೂರಾಟದ ಘಟನೆಯನ್ನು ಮಂಗಳೂರಿನ ಬೋಟ್ನಲ್ಲಿದ್ದ ಮೀನುಗಾರರು ವಿಡಿಯೋ ಮಾಡಿಕೊಂಡಿದ್ದರು.
ಈ ಬಗ್ಗೆ ಬೋಟ್ ಮಾಲೀಕರು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಹರೀಶ್ ಕುಮಾರ್, ತಮಿಳುನಾಡಿನ ಮೀನುಗಾರರು ದೋಣಿಗಳ ಮೇಲೆ ಕಲ್ಲು ಎಸೆದು ಮೀನುಗಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳೂರು ಮೀನುಗಾರರಿಂದ ನಮಗೆ ಮಾಹಿತಿ ಬಂದಿದೆ. ಮೀನುಗಾರರ ಮೇಲೆ ಕಲ್ಲು ತೂರಾಟವನ್ನು ಖಂಡಿಸಬೇಕಾಗಿದೆ. ಒಂದು ವೇಳೆ ನಮ್ಮ ಮೀನುಗಾರರು ನಿಯಮ ಉಲ್ಲಂಘಿಸಿ 12 ನಾಟಿಕಲ್ ಮೈಲು ಅಂತರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಲ್ಲಿ ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟವರಿಗೆ ಹಸ್ತಾಂತರಿಸಬಹುದಿತ್ತು. ಮೀನುಗಾರಿಕಾ ಬೋಟ್‌ಗಳು 12 ನಾಟಿಕಲ್ ಮೈಲು ಮೀರಿದ ಮತ್ತು 200 ನಾಟಿಕಲ್ ಮೈಲುಗಳವರೆಗಿನ ವಿಶೇಷ ಆರ್ಥಿಕ ವಲಯದಲ್ಲಿವೆಯೇ ಎಂಬುದನ್ನು ನಾವು ನೋಡಬೇಕಾಗಿದೆ. ಮೀನುಗಾರರಿಗೆ 12 ನಾಟಿಕಲ್ ಮೈಲುಗಳಿಂದ 200 ನಾಟಿಕಲ್ ಮೈಲುಗಳವರೆಗೆ ಮೀನುಗಾರಿಕೆ ದಂಡಯಾತ್ರೆಯನ್ನು ಕೈಗೊಳ್ಳಲು ಅನುಮತಿಸಲಾಗಿದೆ ಎಂದು ಅವರು ಹೇಳಿದರು.
ಮೀನುಗಾರರ ಮೇಲೆ ತಮಿಳುನಾಡಿನ ಮೀನುಗಾರರು ಕಲ್ಲು ತೂರಾಟ ನಡೆಸಿರುವ ಮತ್ತು ಬೋಟ್ ಗಳಿಗೆ ಹಾನಿ ಮಾಡಿರುವ ವಿಚಾರದಲ್ಲಿ ಮಂಗಳೂರಿನ ಧಕ್ಕೆಯಲ್ಲಿ ಫೆ. 12 ರಂದು ಮೀನುಗಾರರ ಯೂನಿಯನ್ ಗಳ ಸಭೆ ನಡೆದಿದೆ. ಮೀನುಗಾರರ ಉಪನಿರ್ದೇಶಕರ ಕಚೇರಿಯಲ್ಲಿ ಉಪನಿರ್ದೇಶಕರ ಜೊತೆಗೆ ಬೋಟ್ ಮಾಲೀಕರು, ಸಂಘದ ಮುಖ್ಯಸ್ಥರು ಸಭೆ ನಡೆಸಿದ್ದಾರೆ. ಸಮಸ್ಯೆಯು ಅಂತಾರಾಜ್ಯವನ್ನು ಒಳಗೊಂಡಿರುವುದರಿಂದ ನಾನು ಈಗಾಗಲೇ ಈ ಸಮಸ್ಯೆಯನ್ನು ಮೀನುಗಾರಿಕಾ ನಿರ್ದೇಶನಾಲಯದ ನಿರ್ದೇಶಕರ ಗಮನಕ್ಕೆ ತಂದಿದ್ದೇನೆ. ಅವರು ಘಟನೆ ಸಂಭವಿಸಿದಾಗ ದೋಣಿಗಳ ಸ್ಥಾನದ ಕುರಿತು ವಿವರಗಳನ್ನು ಕೇಳಿದ್ದಾರೆ. ಘಟನೆಯು 12 ನಾಟಿಕಲ್ ಮೈಲುಗಳ ಆಚೆಗೆ ಸಂಭವಿಸಿದ್ದರೆ ಅದನ್ನು ಸರ್ಕಾರದ ಮಟ್ಟದಲ್ಲಿ ಉನ್ನತ ಅಧಿಕಾರಿಗಳು ನಿರ್ವಹಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಮೀನುಗಾರರು ಈ ಬಗ್ಗೆ ದೂರನ್ನು ನೀಡಿದ್ದು, ಅದನ್ನು ಬೆಂಗಳೂರಿನ ಫಿಶರಿಸ್ ಆಫ್ ಡೈರೆಕ್ಟರ್ಗೆ ಕಳುಹಿಸಿ ಕೊಡುತ್ತೇನೆ. ಬೋಟ್ಗಳಿಗೆ ಕಲ್ಲು ತೂರಾಟ ಮಾಡಿರುವುದು ಸರಿಯಲ್ಲ. ಮೀನುಗಾರರ ತಪ್ಪು ಇದ್ದರೆ ಅದನ್ನು ಕೋಸ್ಟ್ ಗಾರ್ಡ್ಗಳಿಗೆ ಮಾಹಿತಿ ನೀಡಬಹುದಿತ್ತು. ಮೀನುಗಾರಿಕಾ ದೋಣಿಗಳು 12 ನಾಟಿಕಲ್ ಮೈಲುಗಳ ರಾಜ್ಯದ ಗಡಿಯನ್ನು ಪ್ರವೇಶಿಸಲು ಮತ್ತು ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಬಂಧಿಸಿದಂತೆ ಅಂತಾರಾಜ್ಯ ಸಮಸ್ಯೆಗಳಿವೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಹರೀಶ್ ಹೇಳಿದರು.
ಇನ್ನು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಳ ಸಮುದ್ರ ಮೀನುಗಾರಿಕೆಯಿಂದ ಹಿಂದೆ ಬಂದಿರುವ ಮೀನುಗಾರರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ. ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ ದೂರು ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಮಾಡಿದೆ.
Stone pelting on Mangalore fishing boat in Kanyakumari, fishermens lodge complaint pandeshwar police station
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
20-01-25 11:05 pm
Mangalore Correspondent
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm