ಬೆಂಗಳೂರು ಜೈನ್ ವಿವಿಯಲ್ಲಿ ಅಂಬೇಡ್ಕರ್ ನಿಂದನೆ ;  ಮಂಗಳೂರು ವಿವಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ 

15-02-23 10:33 pm       Mangalore Correspondent   ಕರಾವಳಿ

ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ನಿಂದನೆ ಹಾಗೂ ಜಾತಿ ನಿಂದನೆಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್, ಫುಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷ   ಮೋಹನ್ ಕುಮಾರ್ ಆಗ್ರಹಿಸಿದರು.

ಉಳ್ಳಾಲ, ಫೆ.15 : ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ನಿಂದನೆ ಹಾಗೂ ಜಾತಿ ನಿಂದನೆಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್, ಫುಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷ   ಮೋಹನ್ ಕುಮಾರ್ ಆಗ್ರಹಿಸಿದರು.

ಬೆಂಗಳೂರಿನ ಜೈನ್ ವಿ.ವಿ.ಯ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದನ್ನು ವಿರೋಧಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಮುಂದೆ ಬುಧವಾರ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. 

ಫೆ.6 ರಂದು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸಿಎಂಎಸ್(ಸೆಂಟರ್ ಫಾರ್ ಮ್ಯಾನೇಜ್‍ಮೆಂಟ್ ಸ್ಟಡೀಸ್) ವಿಭಾಗವು 'ಯುವಜನೋತ್ಸವ'ದ ಅಂಗವಾಗಿ ಆಯೋಜಿಸಿದ್ದ ಕಿರು ನಾಟಕವೊಂದರಲ್ಲಿ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವುದಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳನ್ನು ನಿಂದನೆ ಮಾಡಲಾಗಿದೆ. ವೈರಲ್ ಆದ ವೀಡಿಯೋ ತುಣುಕಿನಲ್ಲಿ ಅಂಬೇಡ್ಕರ್ ಅವರನ್ನು 'ಬಿಯರ್ ಅಂಬೇಡ್ಕರ್' ಎಂದು ಹಿನ್ನೆಲೆ ಧ್ವನಿ ಸುರುಳಿಯನ್ನು ಬಳಸಿಕೊಂಡು ಅಪಹಾಸ್ಯ ಮಾಡಲಾಗಿದೆ. ದಲಿತರನ್ನು ಅಸ್ಪ್ರಶ್ಯರು ಎಂಬಂತೆ ವ್ಯಂಗ್ಯ ಮಾಡಲಾಗಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಸಂಬಂಧಪಟ್ಟ ವಿವಿಯ ಆಡಳಿತದ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದರು. ಸಂಘದ ಉಪಾಧ್ಯಕ್ಷ ಅವಿನಾಶ್ ಕಾಮ್ಲೆ, ವಿಜಯ್ ಕುಮಾರ್, ಗೋವಿಂದ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

offensive Bengaluru skit about Ambedkar at Jain University, Students stage protest at Mangalore university. Nine people including principal Dr Dinesh Nilkant, students and the youth festival organiser of Jain University’s Centre for Management Studies (CMS) in Bengaluru were arrested Monday over a skit that allegedly defamed Dr B R Ambedkar and Dalits.