ಬ್ರೇಕಿಂಗ್ ನ್ಯೂಸ್
16-02-23 08:00 pm Mangalore Correspondent ಕರಾವಳಿ
ಮಂಗಳೂರು, ಫೆ.16 : ಗುಣಮಟ್ಟದ ಪುಸ್ತಕ ಪ್ರಕಟಣೆಯ ಮೂಲಕ ಕೊಂಕಣಿ ಸಾಹಿತ್ಯದ ಬೆಳವಣಿಗೆ ನವಚೇತನ ತುಂಬುವ ಆಶಯದೊಂದಿಗೆ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜಾ, ದುಬೈ ಇವರ ಮಹತ್ವಾಕಾಂಕ್ಷಿ ಯೋಜನೆ ’ಮೈಕಲ್ ಡಿಸೋಜಾ ವಿಶನ್ ಕೊಂಕಣಿ’ ಕಾರ್ಯಕ್ರಮಕ್ಕೆ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಒಪ್ಪಂದಕ್ಕೆ ಸಹಿ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ವಿಶ್ವ ಕೊಂಕಣಿ ಕೇಂದ್ರದ ಪರವಾಗಿ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಮತ್ತು ವಿಶನ್ ಕೊಂಕಣಿ ಪರವಾಗಿ ಮೈಕಲ್ ಡಿಸೋಜಾ ಒಪ್ಪಂದಕ್ಕೆ ಸಹಿ ಮಾಡಿದರು. "ಕೊಂಕಣಿ ಸಾಹಿತ್ಯ ಅಭಿವೃದ್ದಿಯಾಗಬೇಕಾದರೆ ಉತ್ತಮ ಗುಣಮಟ್ಟದ ಪುಸ್ತಕಗಳು ಪ್ರಕಟವಾಗಬೇಕು. ಮುದ್ರಣ ಹಾಗೂ ವಿತರಣಾ ವೆಚ್ಚದಲ್ಲಿ ಇಂದು ಗಣನೀಯ ಏರಿಕೆಯಾಗಿರುವುದರಿಂದ ಪ್ರಕಾಶಕರು ಪುಸ್ತಕ ಪ್ರಕಟಣೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅಂತಿಮವಾಗಿ ನಷ್ಟವಾಗುವುದು ಸೃಜನಶೀಲ ಸಾಹಿತಿಗಳಿಗೆ ಮತ್ತು ಕೊಂಕಣಿ ಸಾಹಿತ್ಯಕ್ಕೆ. ಸಾಹಿತಿ ಮತ್ತು ಪ್ರಕಾಶಕರಿಗೆ ಮುದ್ರಣ ವೆಚ್ಚವನ್ನು ಭರಿಸುವುದು ತೊಡಕಾಗಬಾರದು ಎಂಬ ದೃಷ್ಟಿಯಿಂದ ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಮುಂದಿನ ಐದು ವರ್ಷಗಳಲ್ಲಿ ನೂರು ಪುಸ್ತಕ ಮುದ್ರಿಸುವ ಗುರಿಯನ್ನು ಇಟ್ಟುಕೊಂಡು ಅನುದಾನ ನೀಡಲಾಗುವುದು. ಈ ಗುರಿ ತಲುಪುವಲ್ಲಿ ವಿಶ್ವದ ಮೇರು ಕೊಂಕಣಿ ಸಂಸ್ಥೆ, ವಿಶ್ವ ಕೊಂಕಣಿ ಕೇಂದ್ರ ಸಾಂಸ್ಥಿಕ ಬೆಂಬಲ ನೀಡಿ ಸಹಕರಿಸಲಿದೆ. ಕೊಂಕಣಿ ಸಾಹಿತಿಗಳು ಮತ್ತು ಪ್ರಕಾಶಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈಕಲ್ ಡಿಸೋಜಾ ಅಭಿಪ್ರಾಯಪಟ್ಟರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಮಾತನಾಡಿ "ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಸಮಗ್ರವಾಗಿ ಬೆಳೆಯಬೇಕಾದರೆ ಎಲ್ಲರನ್ನೂ ಒಳಗೊಳ್ಳುವ ಸಮಷ್ಟಿ ಭಾವ ಮುಖ್ಯ. ಕೇಂದ್ರದ ಸ್ಥಾಪಕ ಬಸ್ತಿ ವಾಮನ್ ಶೆಣೈ ಅವರು ನಮಗೆ ಸಮಷ್ಟಿ ಭಾವವನ್ನು ಬಳುವಳಿಯಾಗಿ ಕೊಟ್ಟಿದ್ದಾರೆ. ಅವರು ನಮ್ಮ ಪ್ರತೀ ಹೆಜ್ಜೆಗೆ ಪ್ರೇರಣೆ ಎಂದರು.
ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜಾ, ಟ್ರಸ್ಟಿ - ಕವಿ ಮೆಲ್ವಿನ್ ರೊಡ್ರಿಗಸ್, ವಿಶ್ವ ಕೊಂಕಣಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ| ಬಿ. ದೇವದಾಸ ಪೈ, ಡಾ| ಬಿ. ದೇವದಾಸ ಪೈ, ವಿಶ್ವ ಕೊಂಕಣಿ ಕೇಂದ್ರದ ಸಂಯೋಜಕಿ ಸಹನಾ ಕಿಣಿ, ಕವಿ, ಚಿಂತಕ ಟೈಟಸ್ ನೊರೊನ್ಹಾ, ಹಿರಿಯ ರಂಗಕರ್ಮಿ ಎಡ್ಡಿ ಸಿಕ್ವೇರಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಕೋಶಾಧಿಕಾರಿ ರೋಶನ್ ಮಾಡ್ತಾ ಹಾಗೂ ನಾಸಿರ್ ಉಪಸ್ಥಿತರಿದ್ದರು.
ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗುರುದತ್ತ ಬಂಟ್ವಾಳಕಾರ್ ಸ್ವಾಗತಿಸಿದರು. ವಿಶನ್ ಕೊಂಕಣಿ ಯೋಜನೆಯ ಪ್ರಧಾನ ಸಂಪಾದಕ ಎಚ್ಚೆಮ್ ಪೆರ್ನಾಲ್ ಯೋಜನೆಯ ರೂಪು ರೇಷೆಗಳ ಬಗ್ಗೆ ವಿವರಿಸಿದರು. ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ.ಆರ್. ಭಟ್ ವಂದಿಸಿದರು.
ಏನಿದು ವಿಶನ್ ಕೊಂಕಣಿ ?
ಕೊಂಕಣಿ ಪುಸ್ತಕಗಳ ಪ್ರಕಾಶನಕ್ಕೆ ಅನುದಾನ ಯೋಜನೆಯೇ ವಿಶನ್ ಕೊಂಕಣಿ. ಯೋಜನೆಯ ಅವಧಿ : 5 ವರ್ಷ, ಗುರಿ : 100 ಪುಸ್ತಕ, ಅಂದಾಜು ವೆಚ್ಚ : ಸುಮಾರು 40 ಲಕ್ಷ, ಯಾರು ಅರ್ಹರು : ಸೃಜನಶೀಲ ಬರಹಗಾರರು, ಸಾಹಿತ್ಯ ಪ್ರಕಾರ : ಕತೆ - ಕಾದಂಬರಿ, ಕವಿತೆ, ಪ್ರಬಂಧ, ನಾಟಕ ಕೃತಿ ಇತ್ಯಾದಿ. ಅನುದಾನ ಪ್ರಕ್ರಿಯೆ: ಆಯ್ಕೆ ಸಮಿತಿಯ ಅವಗಾಹನೆಗೆ ಸಲ್ಲಿಸಲು ನಿಯತಕಾಲಿಕವಾಗಿ ಹಸ್ತ ಪ್ರತಿಗಳನ್ನು ಆಹ್ವಾನಿಸಲಾಗುವುದು ಎಂದು ಕೊಂಕಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.
World Konkani Centre on Thursday entered into a Memorandum of Understanding (MoU) with Michael D’Souza, Dubai-based NRI entrepreneur, philanthropist and patron of the Centre to provide publication grants to 100 Konkani books.
04-12-24 08:10 pm
HK News Desk
Online Game, Suicide, Bangalore; ಆನ್ಲೈನ್ ಗೇಮಿ...
04-12-24 04:05 pm
Karwar, Ballon Death: ಕಾರವಾರ ; ಗಂಟಲಲ್ಲಿ ಬಲೂನ್...
02-12-24 02:39 pm
Kannada actress Shobitha Shivanna, Suicide: ಕ...
02-12-24 01:55 pm
Yatnal, BJP Notice: ರೆಬಲ್ ನಾಯಕ ಯತ್ನಾಳ್ ಗೆ ಬಿಜ...
02-12-24 01:33 pm
04-12-24 01:29 pm
HK News Desk
'ಪ್ರಚಂಡ ಫೆಂಗಲ್' ಆರ್ಭಟಕ್ಕೆ ತಮಿಳುನಾಡು ತತ್ತರ ; ಮ...
03-12-24 01:46 pm
ಕೇರಳ ಸಾರಿಗೆ ಬಸ್ಗೆ ಕಾರು ಡಿಕ್ಕಿ ; ಐವರು MBBS ವಿ...
03-12-24 01:06 pm
ತಮಿಳುನಾಡಿನ 14 ಜಿಲ್ಲೆಗಳಲ್ಲಿ ಫೆಂಗಾಲ್ ಹಾವಳಿ ; ಉತ...
02-12-24 10:44 pm
Kasaragod, Muna Shamsuddin: ಲಂಡನ್ನಲ್ಲಿ ಚಾರ್ಲ...
01-12-24 03:54 pm
04-12-24 10:20 pm
Mangalore Correspondent
Mangalore, Alvas college Virasat: ಡಿ.10ರಿಂದ 1...
04-12-24 09:10 pm
Dr Krishna Nayak, Mangalore, Dentist: ಮಂಗಳೂರಿ...
04-12-24 02:32 pm
Mangalore, lucky Draw, Police: ಫ್ರಾಡ್ ಲಕ್ಕಿ ಸ...
03-12-24 11:05 pm
Actor Upendra in Mangalore, UI Kannada movie:...
03-12-24 10:51 pm
03-12-24 08:50 pm
Bangalore Correspondent
Kadaba Murder, Managalore Crime: ಸ್ನೇಹಿತನನ್ನೇ...
03-12-24 03:40 pm
ACP Dhanya Nayak, Drugs, Mangalore: ಮುಂದುವರಿದ...
30-11-24 03:03 pm
Bangalore crime, Murder, Assam, Arrest: ಲವ್ ಮ...
29-11-24 10:49 pm
Dharmasthala Robbery, Mangalore crime: ಧರ್ಮಸ್...
29-11-24 12:20 pm