ಬ್ರೇಕಿಂಗ್ ನ್ಯೂಸ್
17-02-23 08:03 pm Mangalore Correspondent ಕರಾವಳಿ
ಮಂಗಳೂರು, ಫೆ.17: ನಾರಾಯಣ ಗುರು ಅಭಿವೃದ್ಧಿ ನಿಗಮ ಮಾಡುತ್ತೇವೆಂದು ಹೇಳಿ ಮುಖ್ಯಮಂತ್ರಿ ಬೊಮ್ಮಾಯಿ ಮಾತು ತಪ್ಪಿದ್ದಾರೆ. ಬಜೆಟ್ ನಲ್ಲಿ ಅಭಿವೃದ್ಧಿ ನಿಗಮದ ಪ್ರಸ್ತಾಪವನ್ನೇ ಮಾಡದೆ ಬಿಲ್ಲವರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದೀರಿ. ರಾಜ್ಯದಲ್ಲಿ 90 ಲಕ್ಷ ಬಿಲ್ಲವರಿದ್ದಾರೆ. ಇದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸುತ್ತೀರಿ ಎಂದು ಬಿಲ್ಲವ ಮುಖಂಡರಾದ ಪದ್ಮರಾಜ್ ಮತ್ತು ಸತ್ಯಜಿತ್ ಸುರತ್ಕಲ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಾವು ಮಂಗಳೂರಿನಲ್ಲಿ ಜನವರಿ 29ರಂದು ಬಿಲ್ಲವರನ್ನು ಒಟ್ಟು ಸೇರಿಸಿ ಒಂದು ಲಕ್ಷ ಜನರ ಸಮಾವೇಶ ಮಾಡಲು ನಿರ್ಧಾರ ಮಾಡಿದ್ದೆವು. ಹಕ್ಕೊತ್ತಾಯ ಸಭೆಗೆ ಮುಂದಾಗಿದ್ದ ನಮ್ಮನ್ನು ಬೆಂಗಳೂರಿಗೆ ಜನವರಿ 5ರಂದು ಕರೆಸಿ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಯ ಭರವಸೆ ನೀಡಿದ್ದೀರಿ. ಅಲ್ಲದೆ, ಇತರ 14 ಬೇಡಿಕೆಗಳನ್ನೂ ಪರಿಗಣಿಸುವುದಾಗಿ ಹೇಳಿದ್ದಿರಿ. ಆದರೆ ನಮ್ಮ ಯಾವುದೇ ಬೇಡಿಕೆಯ ಬಗ್ಗೆಯೂ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ. ನಮ್ಮನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದೀರಾ.. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗೆ ಸಚಿವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಈ ಭಾಗದ ಸಂಸದ ನಳಿನ್ ಕುಮಾರ್ ಇದ್ದು ಭರವಸೆಯನ್ನು ನೀಡಿದ್ದೀರಿ. ನೀವೆಲ್ಲ ಮಾತು ತಪ್ಪಿದ್ದೀರಿ. ನಿಮ್ಮ ಈ ರೀತಿಯ ವರ್ತನೆಯಿಂದ ಬಿಲ್ಲವ ಸಮಾಜಕ್ಕೆ ನಿರಾಶೆಯಾಗಿದೆ. ಇದಕ್ಕೆ ತಕ್ಕ ಶಾಸ್ತಿ ಅನುಭವಿಸಬೇಕಾದೀತು. ನಮ್ಮ ಹೋರಾಟ ಕೈಬಿಡಲ್ಲ. ತೀವ್ರಗೊಳಿಸುತ್ತೇವೆ ಎಂದು ಹೇಳಿದರು.
ಸತ್ಯಜಿತ್ ಸುರತ್ಕಲ್ ಮಾತನಾಡಿ, 18 ವರ್ಷಗಳ ಹಿಂದೆ ಶೇಂದಿ ನಿಷೇಧ ಆದಾಗಲೇ ಅಭಿವೃದ್ಧಿ ನಿಗಮ ಮಾಡಬೇಕಿತ್ತು. ಅಂದು ಅಧಿಕಾರದಲ್ಲಿದ್ದವರು ಮುಂದಿನ ಬಜೆಟಲ್ಲಿ ನಿಗಮ ಘೋಷಿಸುವುದಾಗಿ ತಿಳಿಸಿದ್ದರು. ಆದರೆ ಅದನ್ನು ಮಾಡಿಲ್ಲ. ಈ ಬಾರಿ ನಾವು ಹಕ್ಕೊತ್ತಾಯ ಮಾಡಿದ್ದೆವು. ಬಿಲ್ಲವ ಸಮಾಜದ ಪರವಾಗಿ ಪ್ರಣವಾನಂದ ಸ್ವಾಮೀಜಿ ಮಂಗಳೂರಿನಿಂದ ಉಡುಪಿ, ದಾವಣಗೆರೆ ಮೂಲಕ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದಾರೆ. ಮೊನ್ನೆ ಸಮಾರೋಪ ಸಂದರ್ಭದಲ್ಲಿ ಸಚಿವರೇ ಬಂದು ಬೇಡಿಕೆ ಈಡೇರಿಸುವ ಹೇಳಿಕೆ ನೀಡಿದ್ದರು. ಈಗ ಬಜೆಟ್ ನಲ್ಲಿ ಹಣಕಾಸು ಹೊಂದಿಕೆ ಮಾಡಿಕೊಂಡು ಘೋಷಣೆ ಮಾಡಬೇಕಿತ್ತು. ಇಲ್ಲಿ ಸಾಧ್ಯವಾಗದ್ದು ಮುಂದೆ ಮಾಡುವ ಭರವಸೆ ಉಳಿದಿಲ್ಲ.
ಕೋಟಿ- ಚೆನ್ನಯ್ಯ, ಬಂಗಾರಪ್ಪ ಹೆಸರಿಡಿ
ನಾರಾಯಣ ಗುರು ವಸತಿ ಶಾಲೆ ಎಲ್ಲ ಹಿಂದುಳಿದ ಸಮಾಜಕ್ಕೂ ಸಂಬಂಧಿಸಿದ್ದು. ಅದರಿಂದ ಬಿಲ್ಲವರ ಏಳಿಗೆ ಆಗಲ್ಲ. ಸಮಾಜದ ಶೈಕ್ಷಣಿಕ, ಸಾಮಾಜಿಕ ಉನ್ನತಿಗಾಗಿ ಅಭಿವೃದ್ಧಿ ನಿಗಮವೇ ಬೇಕು. ಎರಡು ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಒತ್ತಾಯ ಮಾಡಿಕೊಂಡು ಬಂದಿದ್ದೇವೆ. ಶಿವಮೊಗ್ಗ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡುತ್ತೇವೆಂದು ಹೇಳಿ ಒಂದೇ ದಿನದಲ್ಲಿ ಸಂಪುಟದಲ್ಲಿ ನಿರ್ಣಯ ಮಾಡುತ್ತೀರಿ. ಅಲ್ಲಿ ಒಂದೇ ದಿನದಲ್ಲಿ ಸಾಧ್ಯವಾಗುವುದು ಇಲ್ಲಿ ಯಾಕೆ ಸಾಧ್ಯವಾಗಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತನ್ನ ಹೆಸರು ಬೇಡವೆಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಯಾರದ್ದೇ ಆಗಲೀ, ಜೀವಂತ ಇರುವಾಗ ಹೆಸರಿಡುವ ಸಂಪ್ರದಾಯ ಇಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹೆಸರಿಡಲು ಒತ್ತಾಯ ಮಾಡಿದ್ದೇವೆ.
ಫೆ.24ರ ವರೆಗೆ ಬಜೆಟ್ ಅಧಿವೇಶನ ಇದ್ದು, ಬಿಲ್ಲವರಿಗೆ ಅಭಿವೃದ್ಧಿ ನಿಗಮ ಘೋಷಿಸಿ 500 ಕೋಟಿ ಅನುದಾನ ನೀಡಬೇಕು. ಇಲ್ಲದೇ ಇದ್ದರೆ ರಾಜ್ಯದಾದ್ಯಂತ ಹೋರಾಟ ಎಬ್ಬಿಸುವ ಶಕ್ತಿಯಿದೆ. ನಮ್ಮ ಸಮುದಾಯದ ಬಗ್ಗೆ ತಿರಸ್ಕಾರದ ಭಾವನೆಯಿದ್ದರೆ ತೆಗೆದು ಹಾಕಿ. ನಂಬಿಕೆ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ. ಸಂಘಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದೀರಿ. ಈ ಭಾಗದ ಬಿಜೆಪಿ ಶಾಸಕರು ಬಿಲ್ಲವ ಸಂಘಟನೆಯನ್ನು ಒಡೆಯಲು ಸಮುದಾಯದ ಮುಖಂಡರನ್ನು ನಮ್ಮೊಂದಿಗೆ ಸೇರದಂತೆ ಮಾಡುತ್ತಿದ್ದಾರೆ. ಹಾಗಿದ್ದರೂ, ಬಿಲ್ಲವ ಸಮಾಜ ತಮ್ಮನ್ನು ತುಳಿದಲ್ಲಿ ಸೂಕ್ತ ಉತ್ತರ ನೀಡಲಿದೆ ಎಂದರು. ಜ.5ರಂದು ಸಭೆಯಲ್ಲಿ ಹೇಳಿದ್ದನ್ನೇ ಸಮುದಾಯದ ಕೆಲವು ಮುಖಂಡರು ಅಭಿವೃದ್ಧಿ ನಿಗಮಕ್ಕೆ ಒಪ್ಪಿಗೆ ಎಂದು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಸಚಿವ ಸುನಿಲ್ ಕೂಡ ಪೋಸ್ಟ್ ಹಾಕಿದ್ದರು. ಅವರೆಲ್ಲ ಇವತ್ತು ಮಾತು ತಪ್ಪಿದ್ದಕ್ಕೆ ಏನು ಹೇಳ್ತಾರೆಂದು ನೋಡಲು ಬಯಸುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಅಕ್ಷಿತ್ ಸುವರ್ಣ, ದೇವೇಂದ್ರ ಪೂಜಾರಿ, ಜಯ ಸುವರ್ಣ, ರಾಜೇಂದ್ರ ಇದ್ದರು.
No separate corporation for Billavas in Budget 2023, Billavas turn furious for false hopes. Recently A delegation led by the Minister for Kannada and Culture and Energy V. Sunil Kumar had called on Chief Minister Basavaraj Bommai and submitted a petition seeking the establishment of a corporation after the 19th-century social reformer Narayana Guru. The demand was likely to be included in the State Budget to be presented by Mr. Bommai, who also holds the Finance portfolio but failed to do so.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm