ಕರಾವಳಿಯಲ್ಲಿ 12 ಬಿಜೆಪಿ ಶಾಸಕರಿದ್ದರೂ ಬಜೆಟ್ ಅನುದಾನ ಶೂನ್ಯ ; ನಳಿನ್ ಮಾತು ಕೇಳಿ ಬೊಮ್ಮಾಯಿ ಅನುದಾನವೇ ಕೊಟ್ಟಿಲ್ಲ! 

18-02-23 02:30 pm       Mangalore Correspondent   ಕರಾವಳಿ

ಮೂರು ಬಿಜೆಪಿ ಶಾಸಕರು ಇರುವ ಕೊಡಗು ಜಿಲ್ಲೆಗೆ ನೂರು ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಆದರೆ ಕರಾವಳಿಯಲ್ಲಿ 12 ಬಿಜೆಪಿ ಶಾಸಕರಿದ್ದರೂ ಯಾವುದೇ ಅನುದಾನ ತರಲಿಲ್ಲ. ಕರಾವಳಿ ಜನರಿಗೆ ಇವರು ಮೋಸ ಮಾಡಿದ್ದಾರೆ.

ಮಂಗಳೂರು, ಫೆ.18: ಮೂರು ಬಿಜೆಪಿ ಶಾಸಕರು ಇರುವ ಕೊಡಗು ಜಿಲ್ಲೆಗೆ ನೂರು ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಆದರೆ ಕರಾವಳಿಯಲ್ಲಿ 12 ಬಿಜೆಪಿ ಶಾಸಕರಿದ್ದರೂ ಯಾವುದೇ ಅನುದಾನ ತರಲಿಲ್ಲ. ಕರಾವಳಿ ಜನರಿಗೆ ಇವರು ಮೋಸ ಮಾಡಿದ್ದಾರೆ. ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನ್ನು ಕೇಳಿರಬೇಕು. ಕರಾವಳಿಗೆ ಲವ್ ಜಿಹಾದ್ ಸಾಕು, ಅಭಿವೃದ್ಧಿ ಬೇಡ ಎಂಬ ವಿಚಾರ ಸಿಎಂ ಕಿವಿಗೆ ಬಿದ್ದಿರಬೇಕು.‌ ಹೀಗಾಗಿ ಈ ಭಾಗಕ್ಕೆ ಅನುದಾನವನ್ನೇ ಕೊಟ್ಟಿಲ್ಲ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯುಟಿ ಖಾದರ್ ವ್ಯಂಗ್ಯವಾಡಿದ್ದಾರೆ.  

Karnataka BJP chief Nalin Kateel tests positive for Covid-19 | Deccan Herald

ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮೋಸ ಮಾಡಲಾಗಿದೆ.‌ ಮೀನುಗಾರರನ್ನೂ ಮೋಸ ಮಾಡುತ್ತಿದ್ದಾರೆ. ರಸ್ತೆ, ಶೈಕ್ಷಣಿಕ, ಪಶು ಸಂಗೋಪನೆ ವಿಚಾರದಲ್ಲಿ ಜಿಲ್ಲೆಗೆ ಮೋಸ ಮಾಡಲಾಗಿದೆ.‌ ಪಶು ಸಂಗೋಪನೆಯ ಆಂಬುಲೆನ್ಸ್ ಡ್ರೈವರ್ ಗಳನ್ನು ಇನ್ನೂ ನೇಮಕ ಮಾಡಿಲ್ಲ. ರಾಜ್ಯದ ಜನರಿಗೆ ಪ್ರಯೋಜನ ಇಲ್ಲದ, ಜನರನ್ನು ಮೂರ್ಖರನ್ನಾಗಿ ಮಾಡುವ ಬಜೆಟ್ ಮಂಡನೆ ಮಾಡಲಾಗಿದೆ. 

FISHERMEN'S DAY - June 29, 2023 - National Today

ಮೀನುಗಾರರಿಗೆ ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಿಸಿದ ಮನೆಗಳೇ ಇನ್ನೂ ನಿರ್ಮಾಣ ಆಗಿಲ್ಲ. ಸಮುದ್ರ ತೀರದಲ್ಲಿ ಕೊಂಡಿ ರಸ್ತೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕೊಟ್ಟಿಲ್ಲ. ಸಬ್ಸಿಡಿ ಸೀಮೆ ಎಣ್ಣೆಯನ್ನೂ ಕೊಟ್ಟಿಲ್ಲ, ಈಗ ಡಿಸೇಲ್ ಬಗ್ಗೆ ಹೇಳುತ್ತಿದ್ದಾರೆ. 

1 lakh jobs, Ram Mandir, free education : Key takeaways from Karnataka  Budget 2023-24 - India Today

Fortune India: Business News, Strategy, Finance and Corporate Insight

ರಾಜ್ಯದ ಜನರಿಗೆ ಸಾಲದ ಹೊರೆ 

ರಾಜ್ಯದ ಸಂಸದರ ಮೌನ, ಸರ್ಕಾರದ ಅಸಹಾಯಕತೆ, ಕೇಂದ್ರದ ಮಲತಾಯಿ ಧೋರಣೆಯಿಂದ ರಾಜ್ಯ ಸಾಲದಲ್ಲಿ ಮುಳುಗಿದೆ. ರಾಜ್ಯ ಬಜೆಟ್ ಸುಲಿಗೆ ಮತ್ತು ಸಾಲದ ಬಜೆಟ್ ಆಗಿದೆ. ಕೊನೆಯುಸಿರು ಎಳೆಯುತ್ತಿರುವ ಸರ್ಕಾರ ಯಾವುದೇ ಮಹತ್ವ ಇಲ್ಲದ ಬಜೆಟ್ ಮಂಡಿಸಿದೆ. 1947ರಿಂದ 2018ರ ತನಕ ರಾಜ್ಯ ಸರ್ಕಾರದ ಸಾಲ ಇದ್ದಿದ್ದು 2,42,000 ಕೋಟಿ. 2018 ರಿಂದ 2023 ತನಕದ ನಾಲ್ಕು ವರ್ಷಗಳಲ್ಲಿ ಸರ್ಕಾರ 5,64,814 ಕೋಟಿ ರೂ. ಸಾಲ ತೆಗೆದುಕೊಂಡಿದೆ. ರಾಜ್ಯದ ಜನ ಸಾಲದ ಭಾರವನ್ನು ಹೊರೆಯುವಂತಾಗಿದೆ. ಬಿಜೆಪಿ ಮೂರು ವರ್ಷದಲ್ಲಿ 2,80,000 ಕೋಟಿ ರೂಪಾಯಿ ಸಾಲ ಮಾಡಿದೆ. ಈ ಬಾರಿ 78,000 ಕೋಟಿ ಸಾಲ ಮಾಡೋದಾಗಿ ಹೇಳಿದೆ. ಮೂರು ಲಕ್ಷ ಸಾವಿರ ಕೋಟಿಯ ಬಜೆಟ್ ನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳಿಲ್ಲ. ಇಷ್ಟು ದೊಡ್ಡ ಮೊತ್ತದ ಸಾಲ ಭರಿಸಲು 34 ಸಾವಿರ ಕೋಟಿ ರೂ. ಬಡ್ಡಿಯನ್ನು ಪ್ರತಿ ತಿಂಗಳು ರಾಜ್ಯ ಸರ್ಕಾರ ಕಟ್ಟಬೇಕಾಗಿದೆ. ಜಾತ್ರೋತ್ಸವ ಸಂದರ್ಭದಲ್ಲಿ ಬ್ಯಾಂಡ್ ಹೊಡೆಯುವಂತೆ ಸರ್ಕಾರ ಬಜೆಟ್ ಮಂಡಿಸಿದೆ ಎಂದು ಮೂದಲಿಸಿದರು.

Mangalore UT Khader slams Nalin Kateel over CMs Budget 2023, says DK has got nothing.