ಕಾಂಗ್ರೆಸ್ ನಾಯಕರ ಸ್ಥಿತಿ ಹೆಣದಂತಾಗಿದೆ, ಚೆಂಡು ಹೂವು ಇಟ್ಕೊಂಡಿದ್ದಾರೆ, ಊದು ಬತ್ತಿ ಹೊತ್ತಿಸಿ ಸಂಸ್ಕಾರ ಮಾಡಿ ಎಂದ ಸಿಟಿ ರವಿ ! 

20-02-23 10:00 pm       Udupi Correspondent   ಕರಾವಳಿ

ಕಾಂಗ್ರೆಸ್ ನಾಯಕರ ಸ್ಥಿತಿ ಜೀವ ಇಲ್ಲದ ಹೆಣದಂತಾಗಿದೆ. ಹೆಣವನ್ನು ಹೆಚ್ಚು ಕಾಲ ಮನೆಯಲ್ಲಿ ಇಟ್ಟುಕೊಳ್ಳಲ್ಲ. ಹಾಗೆಯೇ ಜೀವ ಇಲ್ಲದಿರುವ ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಕಾಲ ಊರಲ್ಲಿ ಇಟ್ಕೋಬಾರ್ದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯವಾಗಿ ಅಣಕ ಮಾಡಿದ್ದಾರೆ. 

ಉಡುಪಿ, ಫೆ.20 : ಕಾಂಗ್ರೆಸ್ ನಾಯಕರ ಸ್ಥಿತಿ ಜೀವ ಇಲ್ಲದ ಹೆಣದಂತಾಗಿದೆ. ಹೆಣವನ್ನು ಹೆಚ್ಚು ಕಾಲ ಮನೆಯಲ್ಲಿ ಇಟ್ಟುಕೊಳ್ಳಲ್ಲ. ಹಾಗೆಯೇ ಜೀವ ಇಲ್ಲದಿರುವ ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಕಾಲ ಊರಲ್ಲಿ ಇಟ್ಕೋಬಾರ್ದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯವಾಗಿ ಅಣಕ ಮಾಡಿದ್ದಾರೆ. 

ಬೈಂದೂರಿನಲ್ಲಿ ನಡೆದ ಬಿಜೆಪಿ ಬೂತ್ ವಿಜಯ ಕಾರ್ಯಕರ್ತರ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ. ನಾನು ಹಿಂದು, ಹಿಂದುತ್ವವಾದಿಯಲ್ಲ ಎಂಬ ಸಿದ್ದರಾಮಯ್ಯ ಮಾತನ್ನು ಅವರ ಹೆಸರೆತ್ತದೆ ಉಲ್ಲೇಖಿಸಿದ ರವಿ, ಹಿಂದು ದೇಹ ಆಗಿದ್ದ ಮೇಲೆ ಹಿಂದುತ್ವ ಜೀವ ಆಗಿರತ್ತೆ. ದೇಹಕ್ಕೆ ಜೀವ ಇಲ್ಲ ಎಂದಾದ್ರೆ ಏನಾಗುತ್ತೆ. ಅದು ಹೆಣಕ್ಕೆ ಸಮವಾಗುತ್ತದೆ. ಕಾಂಗ್ರೆಸ್ ನಾಯಕರ ಸ್ಥಿತಿಯೂ ಜೀವ ಇಲ್ಲದ ಹೆಣದಂತಾಗಿದೆ. ಹೆಣವನ್ನು ಹೆಚ್ಚು ಕಾಲ ಮನೆಯಲ್ಲಿ ಇಟ್ಟುಕೊಳ್ಳಲ್ಲ. ಹಾಗೆಯೇ ಜೀವ ಇಲ್ಲದಿರುವ ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಕಾಲ ಊರಲ್ಲಿ ಇಟ್ಕೋಬಾರ್ದು. 

ಹೆಣವನ್ನು ಸಂಸ್ಕಾರ ಮಾಡಲು ಸ್ಮಶಾನಕ್ಕೆ ಒಯ್ದು ಸುಡುತ್ತೇವೆ, ಹೂಳುವವರು ಹೂಳುತ್ತಾರೆ. ಹಾಗೆಯೇ ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಸ್ಮಶಾನದ ಕಡೆಗೆ ಒಯ್ಯಬೇಕು. ಅಲ್ಲಿ ಸೂಕ್ತ ಸಂಸ್ಕಾರ ಮಾಡಬೇಕು. ಈಗಾಗಲೇ ಕಾಂಗ್ರೆಸ್ ನಾಯಕರು ಚೆಂಡು ಹೂವನ್ನು ಕಿವಿಗೆ ಇಟ್ಕೊಂಡಿದ್ದಾರೆ, ಊದುಬತ್ತಿ ಹೊತ್ತಿಸಿ ಸಂಸ್ಕಾರ ಮಾಡಿದ್ರೆ ಮುಗೀತು. ಹೆಚ್ಚು ಕೆಲಸ ಬೇಕಿಲ್ಲ. 

ಸಂಸ್ಕಾರ ಬಳಿಕ ಇವರಿಗೆ ಪಿಂಡ ಬಿಡುವ ಕೆಲಸವನ್ನೂ ಮಾಡಬೇಕಿಲ್ಲ. ದಂಡ ಪಿಂಡಗಳಾಗಿ ತೇಗುವಷ್ಟು ತಿಂದು ಬಿಟ್ಟಿದ್ದಾರೆ. ಆಕಾಶ, ಭೂಮಿ, ಪಾತಾಳದಲ್ಲಿ ಹಗರಣ ಮಾಡಿದವರಿಗೆ ಪಿಂಡ ಬಿಡಬೇಕಿಲ್ಲ. ಆಮೂಲಕ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಸ್ಮಶಾನದ ಕಡೆಗೆ ಕಳಿಸಿ ಎಂದು ಹೇಳಿದ್ದಾರೆ. 

ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಟಿಪ್ಪು ರೀತಿ ಹೊಡೆದಾಕಿ ಎಂದು ಸಚಿವ ಅಶ್ವತ್ಥ ನಾರಾಯಣ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಈಡಾಗಿತ್ತು. ಅದೇ ರೀತಿಯಲ್ಲಿ ಸಿಟಿ ರವಿ ಕಾಂಗ್ರೆಸ್ ನಾಯಕರನ್ನು ಸ್ಮಶಾನಕ್ಕೆ ಕಳಿಸಿ ಎಂದು ವಿವಾದಕ್ಕೆ ಆಹಾರ ಆಗುವ ರೀತಿ ಮಾತನ್ನಾಡಿದ್ದಾರೆ.

Taking a dig at Congress leaders for protesting by tucking flowers on their ears in the Assembly during the presentation of the State Budget on Friday,
Minister C T Ravi mocked congress leaders stating they resemble dead bodies speaking in Udupi.