ಪ್ರಸಿದ್ಧ ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ನಿಧನ 

21-02-23 01:50 pm       Udupi Correspondent   ಕರಾವಳಿ

ಪ್ರಸಿದ್ಧ ಯಕ್ಷಗಾನ ಕಲಾವಿದ, ಸಾಹಿತಿ ಅಂಬಾತನಯ ಮುದ್ರಾಡಿ(88) ಮಂಗಳವಾರ ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದ ಬಳಿಕ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಮೂವರು ಪುತ್ರರು ಮತ್ತು ಐವರು ಪುತ್ರಿಯರನ್ನು ಅವರು ಅಗಲಿದ್ದಾರೆ. 

ಉಡುಪಿ, ಫೆ.21 : ಪ್ರಸಿದ್ಧ ಯಕ್ಷಗಾನ ಕಲಾವಿದ, ಸಾಹಿತಿ ಅಂಬಾತನಯ ಮುದ್ರಾಡಿ(88) ಮಂಗಳವಾರ ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದ ಬಳಿಕ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಮೂವರು ಪುತ್ರರು ಮತ್ತು ಐವರು ಪುತ್ರಿಯರನ್ನು ಅವರು ಅಗಲಿದ್ದಾರೆ. 

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುದ್ರಾಡಿಯವರಾದ ಅವರ ಮೂಲ ನಾಮಧೇಯ ಕೇಶವ ಶೆಟ್ಟಿಗಾರ್‌ ಎಂಬುದಾಗಿತ್ತು. ಯಕ್ಷಗಾನದ ಹಿಮ್ಮೇಳ, ಮುಮ್ಮೇಳ ಎರಡರಲ್ಲೂ ಪರಿಣತಿ ಹೊಂದಿದ್ದ ಅವರು, ಬಹುಮುಖ ಪ್ರತಿಭೆ ಉಳ್ಳವರಾಗಿದ್ದರು. ಪ್ರಸಂಗಕರ್ತರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ವೇಷಧಾರಿಯಾಗಿ ಯಕ್ಷಗಾನದಲ್ಲಿ ಗಮನ ಸೆಳೆದಿದ್ದರು. 

ಉಡುಪಿಯಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ನಡೆದಾಗ ಅವರ ʻಯಕ್ಷಗಾನ ಮತ್ತು ಹರಿಕಥೆ: ಒಂದು ತೌಲನಿಕ ಅಧ್ಯಯನʼ ಎಂಬ ಕೃತಿ ಬಿಡುಗಡೆಯಾಗಿತ್ತು. ರಾಜ್ಯೋತ್ಸವ ಪುರಸ್ಕಾರ, ಪಾರ್ತಿಸುಬ್ಬ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿ ಗೌರವಗಳನ್ನು ಪಡೆದಿದ್ದರು. ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 36 ವರ್ಷ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು 1993ರಲ್ಲಿ ನಿವೃತ್ತರಾಗಿದ್ದರು.

Eminent Yakshagana artiste and writer Ambatanaya Mudradi died at his residence in Mudradi of Karkala taluk in Udupi district on Tuesday after a brief illness. He was the recipient of Parthi Subba award instituted by Karnataka Yakshagana Academy and Karnataka Rajyotsava Award. Mudradi had served as president of Udupi district Sahitya Parishat.