ಹೆಲ್ಮೆಟ್ ಇಲ್ಲದ ಪ್ರಯಾಣ, ಆಟೋ ಚಾಲಕನ ನಿರ್ಲಕ್ಷ್ಯದ ತಿರುವು ; ಬೈಕ್ ಸವಾರ ಸ್ಥಳದಲ್ಲೇ ಸಾವು ! 

21-02-23 05:25 pm       Mangalore Correspondent   ಕರಾವಳಿ

ಹೆಲ್ಮೆಟ್ ಇಲ್ಲದ ಪ್ರಯಾಣ ಬೈಕ್ ಸವಾರನ ಜೀವಕ್ಕೆ ಕುತ್ತು ತಂದ ಘಟನೆ ನಗರದ ಬಿಜೈನಲ್ಲಿ ನಡೆದಿದೆ. ಜನರು ನೋಡ ನೋಡುತ್ತಲೇ ಸಾಮಾನ್ಯ ಎನ್ನುವ ರೀತಿ ಅಪಘಾತ ನಡೆದಿದ್ದು ಆಟೋ ಚಾಲಕನ ನಿರ್ಲಕ್ಷ್ಯದ ತಿರುವು ಮತ್ತು ಹೆಲ್ಮೆಟ್ ರಹಿತ ಪ್ರಯಾಣದ ಕಾರಣ ಯುವಕ ಸ್ಥಳದಲ್ಲೇ ಪ್ರಾಣ ಬಿಡುವಂತಾಗಿದೆ. 

ಮಂಗಳೂರು, ಫೆ.21 : ಹೆಲ್ಮೆಟ್ ಇಲ್ಲದ ಪ್ರಯಾಣ ಬೈಕ್ ಸವಾರನ ಜೀವಕ್ಕೆ ಕುತ್ತು ತಂದ ಘಟನೆ ನಗರದ ಬಿಜೈನಲ್ಲಿ ನಡೆದಿದೆ. ಜನರು ನೋಡ ನೋಡುತ್ತಲೇ ಸಾಮಾನ್ಯ ಎನ್ನುವ ರೀತಿ ಅಪಘಾತ ನಡೆದಿದ್ದು ಆಟೋ ಚಾಲಕನ ನಿರ್ಲಕ್ಷ್ಯದ ತಿರುವು ಮತ್ತು ಹೆಲ್ಮೆಟ್ ರಹಿತ ಪ್ರಯಾಣದ ಕಾರಣ ಯುವಕ ಸ್ಥಳದಲ್ಲೇ ಪ್ರಾಣ ಬಿಡುವಂತಾಗಿದೆ. 

ಬಿಜೈ ಚರ್ಚ್ ಹಾಲ್ ಮುಂಭಾಗದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು ಆಟೋ ಚಾಲಕ ನಿರ್ಲಕ್ಷ್ಯದಿಂದ ರಸ್ತೆ ಮಧ್ಯದಿಂದಲೇ ಯು ಟರ್ನ್ ತಿರುವು ತೆಗೆದುಕೊಂಡಿದ್ದ. ಮುಂದಿನಿಂದ ಬರುತ್ತಿದ್ದ ಬೈಕ್ ಸವಾರ ಆಯತಪ್ಪಿ ರಿಕ್ಷಾಗೆ ಡಿಕ್ಕಿಯಾಗಿದ್ದು ರಸ್ತೆ ಬದಿಯ ಮರಕ್ಕೆ ಹೋಗಿ ಬಡಿದಿದ್ದಾನೆ. ತಲೆಯ ಭಾಗ ನೇರವಾಗಿ ಮರಕ್ಕೆ ಬಡಿದಿದ್ದರಿಂದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಬಿಜೈ ನಿವಾಸಿಯಾಗಿದ್ದು ನಗರದ ಎಸ್ಡಿಎಂ ಕಾಲೇಜಿನಲ್ಲಿ ಬಿಬಿಎಂ ತೃತೀಯ ವರ್ಷದ ವಿದ್ಯಾರ್ಥಿಯಾಗಿದ್ದ ಕವನ್ ಆಳ್ವ(20) ಮೃತ ಯುವಕ. ಆಟೋ ಚಾಲಕನ ನಿರ್ಲಕ್ಷ್ಯದ ತಿರುವು ಮತ್ತು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಯ ಪರಿಣಾಮ ಯುವಕ ಸಾವು ಕಂಡಿದ್ದಾನೆ. ಕದ್ರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Mangalore Bejai accident, bike rider killed on spot after auto rickshaw turns suddenly. The deceased has  been identified as Kavan Alwa (20). He was pursuing Bbm at a private college in Mangalore. He wasn't wearing the helmet and that's the reason for the spot death claims traffic police.