ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಸೀಟು ಬಿಲ್ಲವರಿಗೆ ಕೊಡಿ, ಗೆಲ್ಲಿಸುತ್ತೇವೆ ; ಕಾಂಗ್ರೆಸ್ ಬಿಲ್ಲವ ಮುಖಂಡರ ಅಹವಾಲು

21-02-23 10:06 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಹೊರತುಪಡಿಸಿ ಉಳಿದ ಏಳು ವಿಧಾನಸಭೆ ಕ್ಷೇತ್ರಗಳಲ್ಲಿಯೂ ಬಿಲ್ಲವರ ಮತಗಳೇ ನಿರ್ಣಾಯಕ. ಹಾಗಾಗಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಮೂರು ಸೀಟುಗಳನ್ನು ಬಿಲ್ಲವರಿಗೆ ನೀಡಬೇಕೆಂದು ಕಾಂಗ್ರೆಸ್ ಮುಖಂಡರ ಬಳಿಗೆ ನಿಯೋಗ ಹೋಗಿದ್ದೇವೆ.

ಮಂಗಳೂರು, ಫೆ.21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಹೊರತುಪಡಿಸಿ ಉಳಿದ ಏಳು ವಿಧಾನಸಭೆ ಕ್ಷೇತ್ರಗಳಲ್ಲಿಯೂ ಬಿಲ್ಲವರ ಮತಗಳೇ ನಿರ್ಣಾಯಕ. ಹಾಗಾಗಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಮೂರು ಸೀಟುಗಳನ್ನು ಬಿಲ್ಲವರಿಗೆ ನೀಡಬೇಕೆಂದು ಕಾಂಗ್ರೆಸ್ ಮುಖಂಡರ ಬಳಿಗೆ ನಿಯೋಗ ಹೋಗಿದ್ದೇವೆ. ಮೂರು ಸೀಟು ನೀಡಬೇಕೆಂದು ನಾವು ಮಾಧ್ಯಮದ ಮೂಲಕ ಒತ್ತಾಯ ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಬಿಲ್ಲವ ಮುಖಂಡರು ಒತ್ತಾಯಿಸಿದ್ದಾರೆ.

ಗೆಜ್ಜೆಗಿರಿ ಕ್ಷೇತ್ರ ಸಮಿತಿಯಲ್ಲಿ ಗುರುತಿಸಿರುವ ಉಲ್ಲಾಸ್ ಕೋಟ್ಯಾನ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಬಿಲ್ಲವರಿಗೆ ಸೀಟು ಕೊಡಬೇಕೆಂದು ಒತ್ತಾಯ ಮಾಡುತ್ತೇವೆ. ಈಗಾಗಲೇ ಈ ಬಗ್ಗೆ ನಾವು ನಿಯೋಗ ತೆರಳಿ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಪಕ್ಷದಲ್ಲಿ ಗುರುತಿಸಿರುವ ನಮ್ಮ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಇದೆ. ನಮ್ಮ ಸಮುದಾಯದ ನಾಯಕರಿಗೆ ಟಿಕೆಟ್ ನೀಡಿದಲ್ಲಿ ಅವರನ್ನು ಗೆಲ್ಲಿಸಲು ಶಕ್ತಿ ಮೀರಿದ ಪ್ರಯತ್ನವನ್ನು ಸಮುದಾಯದ ವತಿಯಿಂದ ಮಾಡುತ್ತೇವೆ ಎಂದು ಹೇಳಿದರು.

Congress leaders should shed their arrogance: Janardhana Poojary - The Hindu

ಈ ಹಿಂದೆ ಜನಾರ್ದನ ಪೂಜಾರಿಯವರಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಬಿಲ್ಲವರನ್ನು ಪ್ರತಿನಿಧಿಸುವ ಜನಾರ್ದನ ಪೂಜಾರಿ ಇದ್ದರು. ಕಳೆದ ಬಾರಿ ಅದನ್ನು ಬೇರೆಯವರಿಗೆ ನೀಡಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಬ್ಬರಿಗೆ ಮಾತ್ರ ಬಿಲ್ಲವರಿಗೆ ಅವಕಾಶ ನೀಡಲಾಗಿತ್ತು. ಹಾಗಾಗಿ ಈ ಬಾರಿ ಚುನಾವಣೆಗೆ ಮೊದಲೇ ಆಗ್ರಹ ಮಾಡುತ್ತಿದ್ದೇವೆ ಎಂದು ಹೇಳಿದರು.

Electoral list, polling station in place for CWC polls, but no green signal  from Cong steering committee yet - India Today

ನೀವು ಕಾಂಗ್ರೆಸ್ ಮೇಲೆ ಮಾತ್ರ ಒತ್ತಾಯ ಮಾಡುತ್ತೀರಿ ಯಾಕೆ, ಬಿಜೆಪಿ ಮೇಲೆ ಮಾಡಲ್ವಾ ಎಂದು ಕೇಳಿದ್ದಕ್ಕೆ, ನಾವು ಈಗಾಗಲೇ ಕಾಂಗ್ರೆಸ್ ನಾಯಕರಿಗೆ ಮನವಿ ನೀಡಿದ್ದೇವೆ. ನಾವು ಕಾಂಗ್ರೆಸ್ ಪಕ್ಷದಲ್ಲಿ ಪದಾಧಿಕಾರಿ ಆಗಿರುವುದರಿಂದ ಬಿಜೆಪಿ ಬಗ್ಗೆ ಮಾತನಾಡುವುದಿಲ್ಲ. ಅವರು ಕೊಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕೊಡಬೇಕು ಎಂದು ಆಗ್ರಹ ಮಾಡುತ್ತೇವೆ. ಇಂಥ ಕ್ಷೇತ್ರ ಎಂಬುದನ್ನೂ ಹೇಳುವುದಿಲ್ಲ. ಯಾವುದಾದ್ರೂ ಮೂರು ಕ್ಷೇತ್ರದಲ್ಲಿ ಸೀಟು ಕೊಡಬೇಕೆಂದು ಹೇಳುತ್ತೇವೆ ಎಂದರು. ಸೀಟು ಕೊಡದೇ ಇದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ನಾವು ಈ ಬಗ್ಗೆ ಮಾಧ್ಯಮದಲ್ಲಿ ಹೇಳಲು ಆಗುವುದಿಲ್ಲ ಎಂದರು. 
ಧನಂಜಯ ಮಟ್ಟು ಮೂಲ್ಕಿ, ಯೋಗೀಶ್ ಕುಮಾರ್ ಬೆಳ್ತಂಗಡಿ, ಗಣೇಶ್ ಪೂಜಾರಿ ಗುರುಪುರ ಇದ್ದರು.

Three seats must be given to the Billava community in Mangalore for the coming election requests Congress Billava leaders.