ಫೆ.24ರಂದು ಮಂಗಳೂರಿನಲ್ಲಿ ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೋಗೆ ನಾಗರಿಕ ಸನ್ಮಾನ

22-02-23 09:20 pm       Mangalore Correspondent   ಕರಾವಳಿ

ಹೆಸರಾಂತ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ಅವರನ್ನು ಮಂಗಳೂರಿನ ನಾಗರಿಕರ ಪರವಾಗಿ ನಾಗರಿಕ ಸನ್ಮಾನ ನಡೆಸಲು ನಿರ್ಧರಿಸಲಾಗಿದೆ.

ಮಂಗಳೂರು, ಫೆ.22: ಹೆಸರಾಂತ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ಅವರನ್ನು ಮಂಗಳೂರಿನ ನಾಗರಿಕರ ಪರವಾಗಿ ನಾಗರಿಕ ಸನ್ಮಾನ ನಡೆಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಲಂಡನ್ನಿನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಎಕ್ಸಲೆನ್ಸ್ ಸರ್ಟಿಫಿಕೇಟ್ ಗಿಟ್ಟಿಸಿಕೊಂಡಿದ್ದ ಕೊಲಾಸೊ ಅವರನ್ನು ಫೆ.24ರಂದು ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಹಾಲ್ ನಲ್ಲಿ ನಾಗರಿಕರ ವತಿಯಿಂದ ಸನ್ಮಾನಿಸಲಾಗುವುದು ಎಂದು ಸನ್ಮಾನ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ಜೆ.ಆರ್ ಲೋಬೊ ಹೇಳಿದ್ದಾರೆ.

ಸಂಮಾನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಿಷಪ್ ಡಾ.ಪೀಟರ್ ಮಚಾದೊ, ರಾಜ್ಯಸಭೆ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮುಖ್ಯ ಅತಿಥಿಯಾಗಿರಲಿದ್ದಾರೆ. ಅಲ್ಲದೆ, ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನಾ, ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ, ಯೇನಪೋಯ ವಿವಿಯ ಚಾನ್ಸಲರ್ ಡಾ.ಯೇನಪೋಯ ಅಬ್ದುಲ್ಲ ಕುಂಞ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಡಾ.ಲಾರೆನ್ಸ್ ಮುಕ್ಕುಝಿ, ಶಿವಮೊಗ್ಗ ಧರ್ಮಪ್ರಾಂತ್ಯದ ಡಾ.ಫ್ರಾನ್ಸಿಸ್ ಸೆರಾವೋ, ಬಳ್ಳಾರಿ ಧರ್ಮಪ್ರಾಂತ್ಯದ ಡಾ.ಹೆನ್ರಿ ಡಿಸೋಜ ಭಾಗವಹಿಸುವರು.

ಅಲ್ಲದೆ, ಶಾಸಕ ಯುಟಿ ಖಾದರ್, ನಿಟ್ಟೆ ಎಜುಕೇಶನ್ ಟ್ರಸ್ ಅಧ್ಯಕ್ಷ ವಿನಯ ಹೆಗ್ಡೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವಾ, ತೇಜಸ್ವಿನಿ ಹಾಸ್ಪಿಟಲ್ ಅಧ್ಯಕ್ಷ ಡಾ.ಶಾಂತರಾಮ ಶೆಟ್ಟಿ, ಬ್ರಹ್ಮಕುಮಾರಿ ಕೇಂದ್ರ ಮಂಗಳೂರು ಇದರ ರಾಜಯೋಗಿ ಬಿಕೆ ವಿಶ್ವೇಶ್ವರಿ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್ ಅತಿಥಿಗಳಾಗಿ ಭಾಗವಹಿಸುವರು ಎಂದು ಜೆಆರ್ ಲೋಬೊ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

Civic honor will be bestowed on behalf of the citizens of Mangaluru to well-known NRI businessman and philanthropist Ronald Colaco. He was recently conferred with the Certificate of Excellence by the World Book of Records, London. Civic honor will be bestowed on behalf of the citizens of Mangaluru to well-known NRI businessman and philanthropist Ronald Colaco. He was recently conferred with the Certificate of Excellence by the World Book of Records, London.