ಬ್ರೇಕಿಂಗ್ ನ್ಯೂಸ್
24-02-23 07:13 pm Mangalore Correspondent ಕರಾವಳಿ
ಮಂಗಳೂರು, ಫೆ.24: ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಕುಮಾರ್ ಜೈನ್ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭ್ರಷ್ಟಾಚಾರ ಸಹಿಸುವುದಿಲ್ಲ. ಯಾವುದೇ ರೀತಿಯ ಭ್ರಷ್ಟಾಚಾರ ಇದ್ದರೂ ಅದಕ್ಕೆ ಕಾರಣವಾದ ಸಿಬಂದಿಯ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಾಧ್ಯಮ ಮಂದಿ ನೂತನ ಕಮಿಷನರ್ ಭೇಟಿಗೆ ತೆರಳಿದ್ದರು. ಈ ವೇಳೆ, ಕೇಳಿದ ಪ್ರಶ್ನೆಗೆ ಕುಲದೀಪ ಕುಮಾರ್ ಚುಟುಕಿನ ಉತ್ತರಗಳನ್ನು ನೀಡಿದ್ದಾರೆ. ಮಂಗಳೂರಿನಲ್ಲಿ ಸ್ಕಿಲ್ ಗೇಮ್, ಇಸ್ಪೀಟ್ ಕ್ಲಬ್ ದಂಧೆ ರಾಜಾರೋಷ ನಡೀತಿದ್ದು, ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ, ಯಾವುದೇ ಅಕ್ರಮ ಚಟುವಟಿಕೆ ಇದ್ದರೂ ಮುಲಾಜಿಲ್ಲದೆ ಕ್ರಮ ತಗೊಳ್ತೀವಿ. ಅದರ ಹಿಂದೆ ಯಾರಿದ್ದಾರೆ ಅವರನ್ನೂ ಕಾನೂನು ಕ್ರಮಕ್ಕೆ ಒಳಪಡಿಸುತ್ತೀವಿ ಎಂದರು.
ಮಂಗಳೂರು ಕೋಮು ಸೂಕ್ಷ್ಮ ಇರುವ ನಗರ, ಚುನಾವಣೆ ಸಂದರ್ಭದಲ್ಲಿ ಇದು ಸವಾಲಾಗಬಹುದೇ ಎಂಬ ಪ್ರಶ್ನೆಗೆ, ಏನೇ ಸೂಕ್ಷ್ಮ ಇದ್ದರೂ, ಪೊಲೀಸಿಂಗ್ ಕೂಡ ಸೂಕ್ಷ್ಮ ಇದ್ದರೆ ಎಲ್ಲವೂ ಸಲೀಸು. ನಾವು ಪೊಲೀಸ್ ಭಾಷೆಯಲ್ಲಿ ಸೂಕ್ಷ್ಮ ಎಂದುಕೊಳ್ಳುವುದಿಲ್ಲ. ಎಲ್ಲದರ ಬಗ್ಗೆಯೂ ನಿಗಾ ಇಡುತ್ತೇವೆ ಎಂದರು.
ನಿಮ್ಮ ಹಿನ್ನೆಲೆ ಏನು, ಎಲ್ಲಿಯವರು ಎಂದು ಕೇಳಿದ್ದಕ್ಕೆ, ಹುಟ್ಟಿದ್ದು ರಾಜಸ್ಥಾನ್. ಆದರೆ ಬೆಳೆದದ್ದು ಶಿಕ್ಷಣ ಪಡೆದಿದ್ದು ಚೆನ್ನೈನಲ್ಲಿ. ಹಾಗಾಗಿ ನನ್ನ ಊರು ತಮಿಳುನಾಡು. 2011ರ ಐಪಿಎಸ್ ಬ್ಯಾಚ್ ಆಗಿದ್ದು, ಕರ್ನಾಟಕ ಆಯ್ಕೆ ಮಾಡಿಕೊಂಡಿದ್ದೇನೆ. ಹತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡದಲ್ಲಿಯೇ ಪ್ರೊಬೇಷನರಿ ಮಾಡಿದ್ದೆ. ಆನಂತರ ಎಸಿಪಿಯಾಗಿ ಚನ್ನಪಟ್ಟಣ, ವಿಜಾಪುರ ಹೋಗಿದ್ದೆ. ಚಾಮರಾಜನಗರ ಎಸ್ಪಿಯಾಗಿದ್ದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಡಿಸಿಪಿಯಾಗಿ ಕೆಲಸ ಮಾಡಿದ್ದೇನೆ ಎಂದರು.
ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಶಶಿಕುಮಾರ್ ಮತ್ತು ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪದ ಬಗ್ಗೆ ಕೆಲವು ಸಾಮಾಜಿಕ ಕಾರ್ಯಕರ್ತರು ಆರೋಪ ಮಾಡಿದ್ದರು. ಅಲ್ಲದೆ, ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿತ್ತು. ಇತ್ತೀಚೆಗೆ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿಗೆ ಬಂದಿದ್ದಾಗ, ಸಾರ್ವಜನಿಕರು ಬಹಳಷ್ಟು ಭ್ರಷ್ಟಾಚಾರ ಆರೋಪಗಳ ಬಗ್ಗೆ ಗಮನ ಸೆಳೆದಿದ್ದರು. ಇದೇ ಹಿನ್ನೆಲೆಯಲ್ಲಿ ಶಶಿಕುಮಾರ್ ದಿಢೀರ್ ವರ್ಗವಾಗಿದ್ದು, ತುರ್ತಾಗಿ ಎಸ್ಪಿ ದರ್ಜೆಯ ಅಧಿಕಾರಿಯಾಗಿರುವ ಕುಲದೀಪ್ ಕುಮಾರ್ ಜೈನ್ ಅವರನ್ನು ಮಂಗಳೂರು ಕಮಿಷನರ್ ಹುದ್ದೆಗೆ ನೇಮಕ ಮಾಡಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಸಾಮಾನ್ಯವಾಗಿ ಡಿಐಜಿ ಶ್ರೇಣಿಯ ಅಧಿಕಾರಿಯನ್ನೇ ನೇಮಕ ಮಾಡುತ್ತಾರೆ. ರಾಜ್ಯದಲ್ಲಿ ಡಿಐಜಿ ದರ್ಜೆಯ ಅಧಿಕಾರಿಗಳ ಕೊರತೆ ಇರುವುದರಿಂದ, ಸದ್ಯದಲ್ಲೇ ಡಿಐಜಿ ದರ್ಜೆಗೆ ಪ್ರಮೋಷನ್ ಆಗಲಿರುವ ಕುಲದೀಪ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
Kuldeep Kumar Jain takes charge as Mangalore Police commissioner, wont tolerate corruption. Speaking to reporters after taking charge, Kuldeep Jain said, “I will not tolerate corruption. Officials should not give any opportunity for corruption. Suitable action will be taken to prevent all kinds of illegal activities. We will work for the convenience of public with everyone’s cooperation.”
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm