ಕೆಪಿಟಿ ಸರ್ಕಲ್ ಬಳಿ ಸರಣಿ ಅಪಘಾತ ; ಕಾರು, ಟೆಂಪೋ, ಪಿಕಪ್ ಒಂದಕ್ಕೊಂದು ಡಿಕ್ಕಿ, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

26-02-23 09:38 pm       Mangalore Correspondent   ಕರಾವಳಿ

ನಗರದ ಕೆಪಿಟಿ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದ್ದು, ಭಾನುವಾರ ಸಂಜೆ ವೇಳೆಗೆ ಒಂದು ಗಂಟೆ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮಂಗಳೂರು, ಫೆ.26: ನಗರದ ಕೆಪಿಟಿ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದ್ದು, ಭಾನುವಾರ ಸಂಜೆ ವೇಳೆಗೆ ಒಂದು ಗಂಟೆ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಕೆಪಿಟಿ ಸರ್ಕಲ್ ಕಡೆಯಿಂದ ಕೊಟ್ಟಾರ ಕಡೆಗೆ ತೆರಳುವ ಹೆದ್ದಾರಿಯಲ್ಲಿ ಎಸ್ ಕೆಎಸ್ ಪ್ಲಾನೆಟ್ ಅಪಾರ್ಟ್ಮೆಂಟ್ ಬಳಿ ಕಾರೊಂದು ಯು ಟರ್ನ್ ತೆಗೆಯಲು ದಿಢೀರ್ ಆಗಿ ಟರ್ನ್ ತೆಗೆದುಕೊಂಡಿದ್ದು, ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಮೀನಿನ ಪಿಕಪ್ ವಾಹನ ಡಿಕ್ಕಿಯಾಗಿದೆ. ಇದೇ ವೇಳೆ, ಅದರ ಹಿಂದಿನಿಂದ ಬರುತ್ತಿದ್ದ ಹಾಲಿನ ವಾಹನ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಹಾಲಿನ ವಾಹನ ಪಿಕಪ್ ವಾಹನದ ಹಿಂಭಾಗಕ್ಕೆ ನುಗ್ಗಿದ್ದು, ಅದರ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಚಾಲಕನನ್ನು ಹೊರಗೆ ತೆಗೆದು, ಎರಡು ವಾಹನಗಳನ್ನು ಬೇರ್ಪಡಿಸಲು 45 ನಿಮಿಷ ತಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, 8.30ರ ವೇಳೆಗೆ ವಾಹನಗಳನ್ನು ಕ್ರೇನ್ ಮೂಲಕ ತೆರವು ಮಾಡಲಾಯ್ತು. ಒಂದು ಬದಿಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸ್ವಲ್ಪ ಹೊತ್ತು ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಆಗಿತ್ತು. ಗಾಯಾಳು ವ್ಯಕ್ತಿ ಕಾಲಿಗೆ ಗಂಭೀರ ಗಾಯಗೊಂಡಿದ್ದಾರೆ.

ಕೆಪಿಟಿ ಬಳಿಯ ಈ ಯು ಟರ್ನ್ ಆಗುವ ಜಾಗದಲ್ಲಿ ಹಿಂದೆಯೂ ಅಪಘಾತ ಆಗಿತ್ತು. ವಾಹನಗಳು ಸರ್ಕಲ್ ಕಡೆಯಿಂದ ವೇಗವಾಗಿ ಸಾಗುತ್ತಾ ಬಂದು, ಅಲ್ಲಿ ಯು ಟರ್ನ್ ತೆಗೆಯುವ ವೇಳೆಗೆ ಹಿಂದಿನಿಂದ ಬಂದು ಡಿಕ್ಕಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸವಾರರು ನಿಯಂತ್ರಣ ತಪ್ಪಿದರೆ ಅಥವಾ ಸಿಗ್ನಲ್ ಹಾಕದೆ ಟರ್ನ್ ಮಾಡಲು ಹೋದರೆ ಅಪಾಯಗಳಾಗುವುದು ಮಾಮೂಲಿ ಅನ್ನುವಂತಾಗಿದೆ.

Mangalore car Pickup tempo accident near kPT, heavy traffic block at nantoor