ಉಡುಪಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಿಶನ್ ಹೆಗ್ಡೆ ವಿರುದ್ಧ ಅವಹೇಳನಕಾರಿ ವರದಿ ; ಬಿಟಿವಿ ವಾಹಿನಿಗೆ ಸಂಕಷ್ಟ 

27-02-23 10:08 pm       Udupi Correspondent   ಕರಾವಳಿ

ಉಡುಪಿ ಪಿಎಲ್ ಡಿ ಬ್ಯಾಂಕಿನಲ್ಲಿ ಅವ್ಯವಹಾರ ಮಾಡಿದ್ದಾರೆಂದು ಆರೋಪಿಸಿ 2017ರಲ್ಲಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಕಿಶನ್ ಹೆಗ್ಡೆ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ್ದ ಬಿಟಿವಿ ಕನ್ನಡ ವಾಹಿನಿಗೆ ಕೋರ್ಟಿನಲ್ಲಿ ಸಂಕಷ್ಟ ಎದುರಾಗಿದೆ.

ಉಡುಪಿ, ಫೆ.27: ಉಡುಪಿ ಪಿಎಲ್ ಡಿ ಬ್ಯಾಂಕಿನಲ್ಲಿ ಅವ್ಯವಹಾರ ಮಾಡಿದ್ದಾರೆಂದು ಆರೋಪಿಸಿ 2017ರಲ್ಲಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಕಿಶನ್ ಹೆಗ್ಡೆ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ್ದ ಬಿಟಿವಿ ಕನ್ನಡ ವಾಹಿನಿಗೆ ಕೋರ್ಟಿನಲ್ಲಿ ಸಂಕಷ್ಟ ಎದುರಾಗಿದೆ.

ತನ್ನ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಕಟಿಸಿದ್ದ ಬಿಟಿವಿ ವಿರುದ್ಧ ಕಿಶನ್ ಹೆಗ್ಡೆ ಉಡುಪಿ ಜಿಲ್ಲಾ 1ನೇ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯದಲ್ಲಿ 2017ರಲ್ಲಿಯೇ ದಾವೆ ಹೂಡಿದ್ದರು. ಬಿಟಿವಿ ವಾಹಿನಿಯ ಮುಖ್ಯಸ್ಥ ಜಿ.ಎಂ. ಕುಮಾರ್, ನಿರೂಪಕ ಶೇಷಕೃಷ್ಣ ಮತ್ತು ವರದಿಗಾರ ಭರತ್ ರಾಜ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ನಡುವೆ, ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಬಿಟಿವಿ ಕಡೆಯಿಂದ ಹೈಕೋರ್ಟಿನಲ್ಲಿ ಅಪೀಲು ಮಾಡಲಾಗಿತ್ತು. ನಿರೂಪಕ ಶೇಷಕೃಷ್ಣ ತನಗೂ ಆ ಪ್ರಕರಣಕ್ಕೂ ಸಂಬಂಧ ಇಲ್ಲ. ತನ್ನ ಮೇಲಿನ ಪ್ರಕರಣ ವಜಾಗೊಳಿಸಬೇಕು ಎಂದು ದಾವೆ ಹೂಡಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ನಟರಾಜನ್, ಒಂದು ವಾಹಿನಿಯಲ್ಲಿ ಕುಳಿತು ಸುದ್ದಿ ಓದಿದ ಬಳಿಕ ಅದಕ್ಕೆ ತಾನು ಹೊಣೆಗಾರನಲ್ಲ ಎಂದು ಹೇಳುವಂತಿಲ್ಲ. ಸುದ್ದಿಯಲ್ಲಿ ಏನು ಹೇಳಿದ್ದಾನೋ ಅದಕ್ಕೆ ಬಾಧ್ಯಸ್ಥನಾಗುತ್ತಾನೆ. ಸುದ್ದಿಗೆ ವರದಿಗಾರ ಮತ್ತು ಸುದ್ದಿ ವಾಹಿನಿ ಮಾತ್ರ ಹೊಣೆ ಎಂದು ಹೇಳುವಂತಿಲ್ಲ. ದೂರುದಾರರು ಕೋರ್ಟಿನಲ್ಲಿ ಹಾಕಿರುವ ಅಪೀಲನ್ನು ಎದುರಿಸಬೇಕು ಎಂದು ಹೇಳಿ, ಅರ್ಜಿ ವಜಾಗೊಳಿಸಿದ್ದರು. ಇದಲ್ಲದೆ, ಹೈಕೋರ್ಟ್ ಈ ಕುರಿತ ಆದೇಶದಲ್ಲಿ ಮೂರು ತಿಂಗಳ ಒಳಗೆ ವಿಚಾರಣೆ ಪೂರ್ತಿಗೊಳಿಸಿ ತೀರ್ಪು ನೀಡುವಂತೆ ಕೆಳಗಿನ ಕೋರ್ಟಿಗೆ ಆದೇಶ ಮಾಡಿತ್ತು.

ಇದರ ಪ್ರಕಾರ, ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದ್ದು, ಆರೋಪಿತ ವ್ಯಕ್ತಿಗಳು ಫೆ.8ರಂದು ಮೊದಲ ಬಾರಿಗೆ ಕೋರ್ಟಿಗೆ ಹಾಜರಾಗಿದ್ದರು. ಫೆ.27ರಂದು ಆರೋಪಿಗಳ ಪರವಾಗಿ ವಕೀಲರು ಹಾಜರಾಗಿ ವಕಾಲತ್ತು ಆರಂಭಿಸಿದ್ದಾರೆ. ಯಾವುದೇ ದಾಖಲೆ ಇಲ್ಲದೆ, ಯಾರದ್ದೋ ಮಾತು ಕೇಳಿ ಸುದ್ದಿ ಮಾಡಿದ್ದ ಬಿಟಿವಿಗೆ ಈಗ ಸಂಕಷ್ಟ ಎದುರಾಗಿದೆ. ಆರೋಪಿಗಳ ಪರವಾಗಿ ಮಂಗಳೂರಿನ ಖ್ಯಾತ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ವಕಾಲತ್ತು ಮಾಡುತ್ತಿದ್ದರೆ, ದೂರುದಾರ ಕಿಶನ್ ಹೆಗ್ಡೆ ಪರವಾಗಿ ಉಡುಪಿಯ ವಿಜಯ್ ಹೆಗ್ಡೆ ವಾದಿಸುತ್ತಿದ್ದಾರೆ.

Deformation news telecasted against Udupi Kishan Hegde Kolkebail by BTV news lands in trouble. A Criminal suit was filed against BTV in 2017 against Chairman J M Kumar, Anchor Shreekrishna, and former Mangalore news reporter of BTV Bharathraj for alleged news against PLD Bank irregularities.