ಬ್ರೇಕಿಂಗ್ ನ್ಯೂಸ್
02-03-23 07:05 pm Mangalore Correspondent ಕರಾವಳಿ
ಉಳ್ಳಾಲ, ಮಾ.2 : ಶಾಸಕ ಖಾದರ್ ಅವರು ತುದಿ ಬೆರಳಲ್ಲಿ ಆಡಿಸುತ್ತಿರುವ ಉಳ್ಳಾಲ ನಗರಸಭೆಯ ಗೋಡೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಉಳ್ಳಾಲವನ್ನ ನಂ.1 ಮಾಡಲು ರಿಯಾಝ್ ಫರಂಗಿಪೇಟೆಯನ್ನ ಅಖಾಡಕ್ಕೆ ಇಳಿಸಿದ್ದೇವೆ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಸವಾಲೆಸೆದಿದ್ದಾರೆ.
ಉಳ್ಳಾಲ ನಗರಸಭೆಯ ಭ್ರಷ್ಟಾಚಾರದ ವಿರುದ್ಧ ಮತ್ತು ಮೂಲಭೂತ ಸೌಕರ್ಯ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿ ವತಿಯಿಂದ ಉಳ್ಳಾಲ ನಗರಸಭೆ ಮುಂಭಾಗದಲ್ಲಿ ಗುರುವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಆಡಳಿತವುಳ್ಳ ಉಳ್ಳಾಲ ನಗರಸಭೆ ಜನರಿಗೆ ಬೇಕಾದ ಮೂಲಭೂತ ಸವಲತ್ತುಗಳನ್ನ ಒದಗಿಸಿಲ್ಲ. ಮಾತ್ರವಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸಲೂ ಸಂಪೂರ್ಣ ವಿಫಲವಾಗಿದೆ. ಬಹುಮಹಡಿ ಕಟ್ಟಡಗಳು, ಬಾಡಿಗೆ ಅಂಗಡಿಗಳ ಆದಾಯದಲ್ಲಿ ನಗರಸಭೆ ಭ್ರಷ್ಟಾಚಾರ ನಡೆಸುತ್ತಲೇ ಬಂದಿದೆ. ಆದರೆ ಬಡಜನರ ಬೇಡಿಕೆಯ ಒಂದು ದಾರಿ ದೀಪ ಕಲ್ಪಿಸಲು ನಗರಸಭೆಗೆ ಸಾಧ್ಯವಾಗಿಲ್ಲ. ಎಸ್ ಡಿಪಿಐ ಮನಸು ಮಾಡಿದರೆ ನಿಮ್ಮನ್ನ ಅಧಿಕಾರದಿಂದ ಕಿತ್ತೆಸಯಲು ಸಾಧ್ಯವಿದೆ. ಉಳ್ಳಾಲ ವಿಧಾನಸಭಾ ಕ್ಷೇತ್ರದ ಸ್ಥಳೀಯಾಡಳಿತಗಳಿಗೆ ನಡೆದ ಚುನಾವಣೆಗಳ ಫಲಿತಾಂಶಗಳಲ್ಲಿ ನಮ್ಮ ಪಕ್ಷ ಗಳಿಸಿದ ಸ್ಥಾನಗಳನ್ನ ಗಮನಿಸಿ. ಕ್ಷೇತ್ರದ ಶಾಸಕ ಖಾದರ್ ಅವರು ಎಸ್ ಡಿಪಿಐ ಮತ್ತು ಜೆಡಿಎಸ್ ನಗರಸಭಾ ಸದಸ್ಯರನ್ನ ಕಡೆಗಣಿಸಿ ಕೇವಲ ತನ್ನ ಪಕ್ಷದ ಸದಸ್ಯರಿಗೆ ಅನುದಾನ ನೀಡಿ ದ್ವೇಷ ರಾಜಕಾರಣ ನಡೆಸುತ್ತಿದ್ದಾರೆ. ಹೀಗೆ ಮುಂದುವರಿದರೆ ಶಾಸಕರ ಮನೆ ಮುಂದೆ ಎಸ್ ಡಿಪಿಐ ಉಗ್ರ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದರು. ಅಲ್ಲದೆ ಈ ಬಾರಿ ಎಸ್ ಡಿಪಿಐ ಪಕ್ಷವು ರಿಯಾಝ್ ಫರಂಗಿಪೇಟೆ ಅವರನ್ನ ಉಳ್ಳಾಲದಲ್ಲಿ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯನ್ನಾಗಿ ಅಖಾಡಕ್ಕಿಳಿಸಿದ್ದು ಅವರು ಉಳ್ಳಾಲವನ್ನ ನಂ.1 ಮಾಡೇ ಮಾಡುತ್ತಾರೆ ಎಂದರು.
ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಎ.ಆರ್ ಅಬ್ಬಾಸ್, ಉಪಾಧ್ಯಕ್ಷ ಇಮ್ತಿಯಾಝ್ ಕೋಟೆಪುರ, ಕ್ಷೇತ್ರ ಸಮಿತಿ ಸದಸ್ಯ ಶೋಯೆಬ್ ಉಳ್ಳಾಲ್, ಮುಸ್ಲಿಂ ಒಕ್ಕೂಟ ಅಧ್ಯಕ್ಷ ಇಸ್ಮಾಯಿಲ್, ನಗರಸಭೆ ಸದಸ್ಯರಾದ ಝರೀನಾ ಬಾನು, ಖಮರುನ್ನೀಸಾ ನಿಝಾಮ್, ರಮೀಝ್, ಅಝ್ಗರ್, ಶೈನಾಝ್ ಅಕ್ರಮ್, ರುಖ್ಯ ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.
Mangalore SDPI members protest warns Mla UT Khader as Riyaz farangipete to contest from ullal.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm