ಎಸ್ಡಿಪಿಐ ಅಭ್ಯರ್ಥಿ ರಿಯಾಝ್ ಉಳ್ಳಾಲಕ್ಕೆ ಎಂಟ್ರಿ ; ರ್ಯಾಲಿಗೆ ಅನುಮತಿ ನಿರಾಕರಣೆ, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ 

03-03-23 10:11 pm       Mangalore Correspondent   ಕರಾವಳಿ

ಎಸ್ ಡಿಪಿಐ ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾಗಿ ಉಳ್ಳಾಲಕ್ಕೆ ಮೊದಲ ಬಾರಿ ಎಂಟ್ರಿ ನೀಡಿದ ತಾಂಟ್ರೆ ಖ್ಯಾತಿಯ ರಿಯಾಝ್ ಫರಂಗಿಪೇಟೆಯನ್ನ ರ್ಯಾಲಿಯಲ್ಲಿ ಕರೆತರಲು ಪೊಲೀಸರು ಅವಕಾಶ ನೀಡದಿದ್ದರೂ ಪಕ್ಷದ ಕಾರ್ಯಕರ್ತರು ನೆಚ್ಚಿನ ಅಭ್ಯರ್ಥಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. 

ಉಳ್ಳಾಲ, ಮಾ.3 : ಎಸ್ ಡಿಪಿಐ ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾಗಿ ಉಳ್ಳಾಲಕ್ಕೆ ಮೊದಲ ಬಾರಿ ಎಂಟ್ರಿ ನೀಡಿದ ತಾಂಟ್ರೆ ಖ್ಯಾತಿಯ ರಿಯಾಝ್ ಫರಂಗಿಪೇಟೆಯನ್ನ ರ್ಯಾಲಿಯಲ್ಲಿ ಕರೆತರಲು ಪೊಲೀಸರು ಅವಕಾಶ ನೀಡದಿದ್ದರೂ ಪಕ್ಷದ ಕಾರ್ಯಕರ್ತರು ನೆಚ್ಚಿನ ಅಭ್ಯರ್ಥಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. 

ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು(ಉಳ್ಳಾಲ) ಕ್ಷೇತ್ರದ ಎಸ್ ಡಿಪಿಐ ಪಕ್ಷದ ಅಭ್ಯರ್ಥಿಯಾಗಿ ಘೋಷಣೆಯಾದ ರಿಯಾಝ್ ಫರಂಗಿಪೇಟೆ ಶುಕ್ರವಾರ ಮೊದಲ ಬಾರಿಗೆ ಉಳ್ಳಾಲಕ್ಕೆ ಆಗಮಿಸಿದ್ದು ಕಾರ್ಯಕರ್ತರು ಕಲ್ಲಾಪಿನಿಂದ ಉಳ್ಳಾಲದ ವರೆಗೆ ರಿಯಾಝ್ ಅವರನ್ನ ರ್ಯಾಲಿಯಲ್ಲಿ ಕರೆದೊಯ್ಯಲು ಯೋಜನೆ ರೂಪಿಸಿದ್ದರು. ಕೊನೆ ಕ್ಷಣದಲ್ಲಿ ಪೊಲೀಸ್ ಇಲಾಖೆ ರ್ಯಾಲಿಗೆ ಅನುಮತಿ ನಿರಾಕರಿಸಿದರೂ ಅಭ್ಯರ್ಥಿಗೆ ಎಸ್ ಡಿಪಿಐ ಕಾರ್ಯಕರ್ತರು ಉಳ್ಳಾಲದಲ್ಲಿ ಅದ್ಧೂರಿ ಸ್ವಾಗತ ನೀಡಿದ್ದಾರೆ.
ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಕಾರ್ಯಕರ್ತರು ರಿಯಾಝ್ ಪರಂಗಿಪೇಟೆಯನ್ನ ಅದ್ಧೂರಿ ಸ್ವಾಗತ ಕೋರಿ ನಗರಸಭೆ ಕಚೇರಿ ಮುಂಭಾಗದ ಪಕ್ಷದ ಕಚೇರಿಗೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ರಿಯಾಝ್ ಪರಂಗಿಪೇಟೆ ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸಿದ ಪಕ್ಷದ ಎಲ್ಲಾ ನಾಯಕರು, ತಳಮಟ್ಟದಲ್ಲಿ ಹೆಸರು ಸೂಚಿಸಿದ ಕಾರ್ಯಕರ್ತರುಗಳಿಗೆ ಕೃತಜ್ಞತೆಗಳು. ಬೇರೆ ಪಕ್ಷದವರಿಗೆ ಚುನಾವಣೆ ಅಂದರೆ ಪ್ರತಿಷ್ಠೆ, ಸ್ಪರ್ಧೆ, ವ್ಯಾಪಾರ, ಸಂಪತ್ತು ಏರಿಕೆ ಮಾಡುವ ವ್ಯವಸ್ಥೆ. ಸಂವಿಧಾನದ ಆಶಯದ ಜತೆಗೆ ಆಟವಾಡುವ ವಸ್ತುವಾಗಿರಬಹುದು. ಆದರೆ ನಮಗೆ ಚುನಾವಣೆ ಅಂದರೆ ಪ್ರತಿಷ್ಠೆಯಲ್ಲ. ಶೋಷಿತ ಸಮುದಾಯ, ಅನ್ಯಾಯ, ಅಕ್ರಮಕ್ಕೆ ಒಳಗಾದವರಿಗೆ ಸಾಮಾಜಿಕ ನ್ಯಾಯ ತೆಗೆಸಿಕೊಡಲು ರಾತ್ರಿ ಹಗಲು ದುಡಿಯುವ ವೇದಿಕೆಯಾಗಿದೆ ಎಂದರು. 

ಉಳ್ಳಾಲದ ಶಾಸಕರನ್ನು ಬೊಟ್ಟು ಮಾಡಿ ಅವರ ವಿರುದ್ಧ ನಮ್ಮ ಸ್ಪರ್ಧೆ ಎಂದು ಬಿಂಬಿಸಲಾಗುತ್ತಿದೆ. ನಮ್ಮ ಸ್ಪರ್ಧೆ ಫ್ಯಾಸಿಸ್ಟ್ ಮನಸ್ಥಿತಿ ಮತ್ತು ತಾರತಮ್ಯ ನೀತಿಯ ವಿರುದ್ಧವೇ ಹೊರತು ಯಾವುದೇ ವ್ಯಕ್ತಿಯ ವಿರುದ್ಧವಲ್ಲ ಎಂದರು. ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಹಾಗೂ ಚುನಾವಣಾ ಉಸ್ತುವಾರಿ ಅತಾವುಲ್ಲ ಜೋಕಟ್ಟೆ, ನವಾಝ್ ಉಳ್ಳಾಲ್, ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಕ್ಷೇತ್ರ ಸಮಿತಿ ಪ್ರಮುಖರಾದ ಇರ್ಷಾದ್ ಅಜ್ಜಿನಡ್ಕ, ಅಬ್ಬಾಸ್ ಎ.ಆರ್ ಮೊದಲಾದವರು ಉಪಸ್ಥಿತರಿದ್ದರು.

Mangalore SDPI candidate grand entry in Ullal, grand welcome by member's. Police cancel rally.