ಕೊನೆಯ ಬಾರಿಗೆ ಚುನಾವಣೆ ಸ್ಪರ್ಧಿಸುತ್ತಿದ್ದೇನೆ ; ಮಾ.10ರಿಂದ ಕ್ಷೇತ್ರದಲ್ಲಿ ರಥಯಾತ್ರೆ - ರಮಾನಾಥ ರೈ 

03-03-23 10:43 pm       Mangalore Correspondent   ಕರಾವಳಿ

ಚುನಾವಣೆ ನಿಲ್ಲುವುದಕ್ಕಾಗಿ ಎಲ್ಲಿಂದಲೋ ಬಂಟ್ವಾಳಕ್ಕೆ ಬಂದವನಲ್ಲ. ನಾನು ಇಲ್ಲಿಂದಲೇ ರಾಜಕೀಯ ಆರಂಭಿಸಿದ್ದೇನೆ. ಇಲ್ಲಿಯೇ ಮುಗಿಸುತ್ತೇನೆ. ಕಾಂಗ್ರೆಸ್‌ ನೀಡಿದ ಎಲ್ಲ ಅವಕಾಶಗಳನ್ನು ಬಳಸಿ ಜನಸೇವೆ ಮಾಡಿದ್ದೇನೆ. ಈವರೆಗೆ 8 ಬಾರಿ ಸ್ಪರ್ಧಿಸಿದ್ದು ಶಾಸಕನಾಗಿ, ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ.

ಬಂಟ್ವಾಳ, ಮಾ.3 : ಚುನಾವಣೆ ನಿಲ್ಲುವುದಕ್ಕಾಗಿ ಎಲ್ಲಿಂದಲೋ ಬಂಟ್ವಾಳಕ್ಕೆ ಬಂದವನಲ್ಲ. ನಾನು ಇಲ್ಲಿಂದಲೇ ರಾಜಕೀಯ ಆರಂಭಿಸಿದ್ದೇನೆ. ಇಲ್ಲಿಯೇ ಮುಗಿಸುತ್ತೇನೆ. ಕಾಂಗ್ರೆಸ್‌ ನೀಡಿದ ಎಲ್ಲ ಅವಕಾಶಗಳನ್ನು ಬಳಸಿ ಜನಸೇವೆ ಮಾಡಿದ್ದೇನೆ. ಈವರೆಗೆ 8 ಬಾರಿ ಸ್ಪರ್ಧಿಸಿದ್ದು ಶಾಸಕನಾಗಿ, ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದಿನದು 9ನೇ ಚುನಾವಣೆಯಾಗಿದ್ದು, ಕೊನೆಯ ಬಾರಿಗೆ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹೇಳಿದ್ದನ್ನು ಮಾಡಿದ್ದೇನೆ, ಮಾಡಿದ್ದನ್ನೇ ಹೇಳಿದ್ದೇನೆ. ಯಾರೋ ಮಾಡಿರುವುದನ್ನು ತನ್ನದೆಂದು ಹೇಳುವ ಜಾಯಮಾನ ನನ್ನದಲ್ಲ. ಜನರು ಮತ್ತೆ ಅವಕಾಶ ನೀಡಿದರೆ ಅದ್ಭುತವಾಗಿ ಕೆಲಸ ಮಾಡಿ ತೋರಿಸಲಿದ್ದೇನೆ ಎಂದರು. 

ಈ ಬಾರಿಯ ಚುನಾವಣೆಗೆ ತಯಾರಿ ನಡೆಸಿದ್ದೇನೆ. ಮಾ.10ರಿಂದ ಕ್ಷೇತ್ರದಾದ್ಯಂತ ರಥ ಯಾತ್ರೆ ನಡೆಸಲಿದ್ದೇನೆ. ಪ್ರತಿ ಗ್ರಾಮಕ್ಕೂ ತೆರಳುವ ಗುರಿ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

Mangalore Congress leader Ramanath rai to contest this last time for elections.